Essays

ಬಾನುಲಿ ಪಯಣವನ್ನು ಸಹ್ಯವಾಗಿಸಿದ ಬಾಳ ಪಯಣಿಗರು

ನನ್ನ ನಿವೃತ್ತಿಯ ದಿನ ಆಕಾಶವಾಣಿಯ ಮನೋರಂಜನಾ ಸಂಘದವರು ಏರ್ಪಡಿಸಿದ ವಿದಾಯ ಸಮಾರಂಭದಲ್ಲಿ ಅದರ ಅಧ್ಯಕ್ಷರೂ ನಿಲಯದ ಅಭಿಯಂತರರೂ ಆದ ಶ್ರೀ ಜಿ. ರಮೇಶ್ಚಂದ್ರನ್ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಒಂದು ಮಾತು ಹೇಳಿದರು. ’ಇವತ್ತು ಶ್ರೀಮತಿ ಕಿಣಿಯವರೊಡನೆ ಇನ್ನೊಬ್ಬರು ಕೂಡಾ ನಿವೃತ್ತರಾಗುತ್ತಿದ್ದಾರೆ, ಅವರು ಶ್ರೀಮಾನ್ ರಾಘವೇಂದ್ರ ಕಿಣಿಯವರು. ಇಷ್ಟು ದಿನವೂ ತಮ್ಮ ಸಂಗಾತಿಯನ್ನು ಡ್ಯೂಟಿಗೆ ತಂದು ಬಿಡುವ ಮತ್ತು ಕರೆದೊಯ್ಯುವ ಕೆಲಸವನ್ನು ಅವರು ಚಾಚೂ ತಪ್ಪದೇ ನಿರ್ವಹಿಸಿದ್ದಾರೆ. ಅವರೂ ಈ …

Read More »

ಆತ್ಮಸಖ್ಯಕ್ಕೆ ಸಂದ ಕೇಳುಗ ಮಹಾಪ್ರಭುಗಳು

ನಾನು ಕೆಲಸಕ್ಕೆ ಸೇರಿದ ದಿನ ನಿಲಯ ನಿರ್ದೇಶಕರಾದ ಶ್ರೀ ಎಚ್. ವಿ. ರಾಮಚಂದ್ರ ರಾಯರು ಹೇಳಿದ ಕಿವಿಮಾತುಗಳಲ್ಲಿ ಒಂದು, “ನೀನು ಮಾಡುವ ತಪ್ಪು ಲಕ್ಷಾಂತರ ಜನರನ್ನು ತಲುಪುತ್ತದೆ. ಮಾಡಿದ ತಪ್ಪನ್ನು ಹಿಂದಕ್ಕೆ ಪಡೆಯುವಂತಿಲ್ಲ. ಆದುದರಿಂದ ತಪ್ಪು ಮಾಡುವ ಮೊದಲೇ ಎಚ್ಚರವಿರಬೇಕು”. ಆ ಕಾರಣದಿಂದಲೋ ಏನೋ ನಮ್ಮ ಕೇಳುಗರೆಲ್ಲಾ ನಮ್ಮ ತಪ್ಪನ್ನು ಹಿಡಿಯಲೆಂದೇ ಬಲೆ ಬೀಸಿ ಕಾದಿರುವರು ಎಂಬ ತಪ್ಪು ಕಲ್ಪನೆಯ ಒಂದು ಚಿತ್ರ ನನ್ನ ಮನಸ್ಸಿನ ಮೂಲೆಯಲ್ಲಿ ಸ್ಥಾಯಿಯಾಗಿ ಕುಳಿತುಬಿಟ್ಟಿತ್ತು. ಆಗಿನ …

Read More »

ನೆನಪಿನ ಖಜಾನೆಯಿಂದ ಆಯ್ದ ಕೆಲವು ಪ್ರಸಂಗಗಳು

ನನ್ನ ಸೇವಾ ಅವಧಿಯ ಉದ್ದಕ್ಕೂ ಹಾಡಿದ್ದೇ ಹಾಡು ಕಿಸಬಾಯಿ ದಾಸ ಎಂಬಂಥ ಅನುದಿನದ ಅದೇ ಹಾಡು ಅದೇ ಪಾಡು ಎಂಬ ಸ್ಥಿತಿ ಇದ್ದರೂ ನಡು ನಡುವೆ ಘಟಿಸಿದ ಕೆಲವು ಘಟನೆಗಳು ಇಂದಿಗೂ, ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುವಂಥವು. ಅಂಥವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ದಾಖಲಿಸುವ ಪ್ರಯತ್ನ ಮಾಡುತ್ತೇನೆ. ಅದು ಸಾವಿರದ ಒಂಬೈನೂರ ಎಂಬತ್ತನಾಲ್ಕರ ಅಕ್ಟೋಬರ ಮೂವತ್ತೊಂದರ ಮಧ್ಯಾನ್ಹ. ನಾನು ಮಧ್ಯಾನ್ಹದ ಪಾಳಿಯಲ್ಲಿದ್ದೆ. ವಾರ್ತೆಯಲ್ಲಿ ಆಗಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಅವರ ಅಂಗರಕ್ಷಕರು …

Read More »

ಎಕಾ ಇಶ್ಟಿಣಿಚೆಂ ರುಪ್ಣೆಂ

ಉಟೊನ್ ಜನೆಲಾಂತ್ಲ್ಯಾನ್ ಭಾಯ್ರ್ ಪಳೆತಾನಾ, ಮೊಳ್ಬಾರ್ ಮೊಡಾಂ ನಾತ್ಲಿಂ. ಸುರ್ಯಾಚ್ಯಾ ಕಿರ್ಣಾಂನಿ ಹಳ್ಟಾರ್ ವಾರ‍್ಯಾಂತ್ ಊಬ್ ಚರಂವ್ಕ್ ಸುರು ಕೆಲ್ಲಿ. ರಾತ್ ಭರ್ ನಿದ್‌ಲ್ಲೊ ಕಂಕ್ನಾಡಿಚೊ ಕಾಂಕ್ರಿಟ್ ರಸ್ತೊ ಸವ್ಕಾಸ್ ಆಂಗ್ ಪಾಪುಡ್ನ್ ದೀಸ್‌ಭರ್ ಫೊಳೊಂಕ್ ಆಯ್ತೊ ಜಾತಾಲೊ ಮಾತ್. ಮೆಡಿಕಲ್ ಕೊಲೆಜಿಚೆ ವಿದ್ಯಾರ್ಥಿ, ಹಾವ್ಜ್ ಸರ್ಜನ್ ಆಂಗಾರ್ ದವೆ  ಕೋಟ್ ಶಿರ್ಕಾವ್ನ್ ಎಕೆಕ್ಲೆಚ್ ಆಸ್ಪತ್ರೆಚ್ಯಾ ಗೇಟಿ ಭಿತರ್ ರಿಗ್ತಾನಾ, ಅಂಬುಲೆನ್ಸಾಚೆಂ ಚಾಲಕ್ ಎಕೆಕ್ಲೆಚ್ ಆಪ್ಲಿಂ ವಾಹನಾಂ ಆಸ್ಪತ್ರೆಚ್ಯಾ ಗೇಟಿ ಭಾಯ್ರ್ …

Read More »

ಮನಸ್ಸು,ಬುದ್ಧಿಗಳಿಗೆ ಸಾಣೆ ಹಿಡಿದ ಹೊರಾಂಗಣ ಧ್ವನಿಮುದ್ರಣಗಳು

ಆಕಾಶವಾಣಿಯಲ್ಲಿ ಸಾಮಾನ್ಯವಾಗಿ ಓ.ಬಿ ಎಂದು ಕರೆಯಲಾಗುವ, ಸ್ಟುಡಿಯೋದ ಹೊರಗೆ ನಡೆಸುವ ಧ್ವನಿಮುದ್ರಣ ಇಲ್ಲವೇ ಪ್ರಸಾರಕಾರ್ಯಗಳು ನಮ್ಮನ್ನು ಆಕಾಶವಾಣಿಯ ನಾಲ್ಕು ಗೋಡೆಗಳಿಂದಾಚೆಗೆ ಹೋಗಿ ಜನರೊಡನೆ ಬೆರೆಯುವ ಅವಕಾಶ ನೀಡುತ್ತವೆ. ಈ ಓ.ಬಿ ಗಳಲ್ಲಿ ಆಕಾಶವಾಣಿಯೇ ಬೇರೆ ಬೇರೆ ಊರುಗಳಲ್ಲಿ ಏರ್ಪಡಿಸುವ ಸಂಗೀತಕಛೇರಿ, ಯಕ್ಷಗಾನ, ಕವಿಗೋಷ್ಠಿ ಮುಂತಾದ ಕಾರ್ಯಕ್ರಮಗಳಿರಬಹುದು, ಅಥವಾ ಯಾವುದೇ ಸರಕಾರಿ ಇಲ್ಲವೇ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಮಹತ್ವವುಳ್ಳ ಸಮ್ಮೇಳನ, ಸಮಾರಂಭಗಳಿರಬಹುದು ಅಥವಾ ನಾವು ಕೆಲವು ಆಯ್ದ ಪ್ರದೇಶದ ವ್ಯಕ್ತಿ, ಶಾಲೆ, ಮಹಿಳಾಮಂಡಲಗಳನ್ನು …

Read More »

ದಾಕ್ಷೆಣ್ ಕರಿನಾಕಾ, ಘಟ್ಟ್ ಜೇವ್

ಹಿಂ ಉತ್ರಾಂ ಆತಾಂ ಆಯ್ಕೊಂಕ್ ಮೆಳಾನಾಂತ್ ಕಿತ್ಯಾಕ್ ತಿಂ ಕೋಣ್‌ಯಿ ವಾಪರಿನಾಂತ್. ಗರಜ್‌ಶಿ ನಾ. ಪುಣ್ ಮ್ಹಜಿ ಆಜಿ ಎಕ್ ಉತ್ರಾಂವಳ್ ವಾಪರ‍್ತಾಲಿ:  ಸಿರಿಗಣ ಶಿಕ್–ರೆ ಪುತಾ ವ್ಹಡಾಂಗೆಲಿ ಸಯ್ರಿಕ್ ಯೆತಾ ಮಾಸಾಚಿ ಫೊಡ್ ಖಾಂವ್ಚ್ಯಾಕ್ ಮೆಳ್ಟಾ  ಹೆ ಉತ್ರಾವಳಿಂತ್ ಸಮ್ಜೊಂಕ್ ಆಸ್ಚೆಂ ಧಾರಾಳ್ ಆಸಾ ಆನಿ ವಾಕ್ಯಾಂ ಮದೆಂ ವಾಚ್ಲ್ಯಾರ್ ಆನಿಕ್‌ಯಿ ಆಸಾ. ಪುಣ್ ಘರ‍್ಚೊ ಯೆಜ್ಮಾನ್ ಯಾ ಕೆಟರಿಂಗ್‌ವಾಲೆ ಹಿಂ ಉತ್ರಾಂ ವಾಪರಿನಾಂತ್. ಆತಾಂ, ಬೀಫ್ ಆಸ್ಲ್ಯಾರಿ …

Read More »

ಫೋನ್- ಇನ್ ಕಾರ್ಯಕ್ರಮಗಳ ಮೂಲಕ ಶ್ರೋತೃಗಳ ಎದೆ ಬಾಗಿಲಿಗೆ

ಮೊದಲು ಕೇವಲ ಏಕಮುಖ ಸಂವಹನವಷ್ಟೇ ಸಾಧ್ಯವಿದ್ದ ಆಕಾಶವಾಣಿಯಲ್ಲಿ ದ್ವಿಮುಖ ಸಂವಹನ ಪ್ರಕ್ರಿಯೆ ಆರಂಭವಾಯಿತು. 1994 ರ ಸುಮಾರಿಗೆ ಶ್ರೀ ರಾಘವನ್ ಅವರು ಸಹಾಯಕ ನಿಲಯನಿರ್ದೇಶಕರಾಗಿದ್ದ ಕಾಲದಲ್ಲಿ ಶ್ರೋತೃಗಳ ಫೋನ್ ಕರೆಗಳನ್ನು ಚೀಟಿಯಲ್ಲಿ ಬರೆದು ಉದ್ಘೋಷಕರಿಗೆ ಹಸ್ತಾಂತರಿಸುವ ಹೊಸ ಪ್ರಯೋಗ ಆರಂಭವಾಯಿತು. ಆ ಚೀಟಿಯಲ್ಲಿದ್ದ ಪ್ರಶ್ನೆಗಳಿಗೆ ಸ್ಟುಡಿಯೋದಿಂದ ಉತ್ತರಿಸುವ ವಿಧಾನವನ್ನು ಆರಂಭಿಸಿದಾಗ ಅಷ್ಟು ಮಾತ್ರಕ್ಕೇ ನಾವು ಹಾಗೂ ಶ್ರೋತೃಗಳು ಪುಲಕಿತರಾಗಿ ಹೋಗುತ್ತಿದ್ದೆವು. ಈ ವಿಧಾನದಲ್ಲಿ ಮೊದಲ ಬಾರಿ ನಡೆಸಿಕೊಟ್ಟ “ಪ್ರಜಾವೇದಿಕೆ” ಕಾರ್ಯಕ್ರಮದಲ್ಲಿ ನಾನು …

Read More »

ಕಂಪ್ಯೂಟರ್ ಕ್ರಾಂತಿಯ ಸುಳಿಯಲ್ಲಿ

1981ರಲ್ಲಿ ನಾನು ಆಕಾಶವಾಣಿಗೆ ಸೇರುವ ಸಮಯದಲ್ಲಿ ಪ್ರಸಾರ ವ್ಯವಸ್ಥೆಯಲ್ಲಿ ಬಳಸಲಾಗುದ್ದುದು ಟೇಪುಗಳನ್ನು ಮತ್ತು ಧ್ವನಿಮುದ್ರಿಕೆ(ತಟ್ಟೆಗಳು)ಗಳನ್ನು. ಟೇಪುಗಳನ್ನು ಭೆಲ್ ಎಂಬ ಕಪ್ಪು ಪೈಂಟ್ ಬಳಿದ ಟೇಪ್ ಡೆಕ್ ನಲ್ಲೂ ಧ್ವನಿಮುದ್ರಿಕೆಗಳನ್ನು ಟರ್ನ್ ಟೇಬಲ್ ಎಂಬ ಯಂತ್ರದಲ್ಲೂ ಪ್ಲೇ ಮಾಡಲಾಗುತ್ತಿತ್ತು. ಭೆಲ್ ಟೇಪ್ ಡೆಕ್ ಯಂತ್ರದಲ್ಲೇ ಧ್ವನಿಮುದ್ರಣದ ಕೆಲಸವನ್ನೂ ಮಾಡಲಾಗುತ್ತಿತ್ತು. ಭೆಲ್ ಯಂತ್ರಕ್ಕೆ ಟೇಪನ್ನು ಸುತ್ತುವ ಸುತ್ತು ಬಳಸು ದಾರಿಯ ವಿಧಾನವನ್ನು ಕಲಿಯಲಿಕ್ಕೇನೇ ಕೆಲವು ದಿನ ಹಿಡಿದಿತ್ತು. ಒಮ್ಮೆ ಪಂಡಿತ್ ಮಲ್ಲಿಕಾರ್ಜುನ ಮನ್ಸೂರರ “ಅಕ್ಕ …

Read More »

ನೆನಪಾಗಿ ಕಾಡುವ ನಾಟಕದ ಪಾತ್ರಗಳು

ನಾನು ಆಕಾಶವಾಣಿಗೆ ಸೇರಿದ ಹೊಸತರಲ್ಲಿ ಹಲವಾರು ನಾಟಕಗಳಲ್ಲಿ ಭಾಗವಹಿಸಿದ್ದೆನಾದರೂ ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಬಿ ಹೈ ಗ್ರೇಡ್ ಅಂಗೀಕೃತ ನಾಟಕ ಕಲಾವಿದೆಯಾಗಿಯೂ ತುಳು ಭಾಷೆಯಲ್ಲಿ ಬಿ ಗ್ರೇಡ್ ಕಲಾವಿದೆಯಾಗಿಯೂ ಅಧಿಕೃತ ಮೊಹರು ದೊರಕಿದ ಬಳಿಕ ಕೆಲವು ಉತ್ತಮ ನಾಟಕಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು.  ನಾನು ಭಾಗವಹಿಸಿದ ನೂರಾರು ನಾಟಕಗಳಲ್ಲಿ ಕೆಲವು ಮಾತ್ರ ಅವುಗಳ ವಿಶಿಷ್ಟತೆಯಿಂದಾಗಿ ನೆನಪಲ್ಲಿ ಉಳಿದಿವೆ.ಅವುಗಳಲ್ಲಿ ಮೊದಲನೆಯದು ರಕ್ತಾಕ್ಷಿ ನಾಟಕ. ಕುವೆಂಪು ಅವರು ಸಾವಿರದೊಂಬೈನೂರ ಮೂವತ್ತರ ದಶಕದಲ್ಲಿ ಬರೆದ …

Read More »