ನನ್ನ ಮತ ನನ್ನ ಧ್ವನಿಗೆ, ಮುಖವಾಡಕ್ಕಲ್ಲ !

ಲೋಕಸಭಾ ಚುನಾವಣಾ ಕಣ ರಂಗೇರಿದೆ. ಎರಡು ಕಾರಣಗಳಿಂದಾಗಿ ಈ ಸಾರಿಯ ಚುನಾವಣೆ ಹಿಂದೆಂದೂ ಕಾಣದ ಕುತೂಹಲವನ್ನು ಕೆರಳಿಸಿದೆ. ಹತ್ತು ವರ್ಷ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರ ಸರಣಿ ವೈಫಲ್ಯಗಳ ಹೊರತಾಗಿಯೂ, ಸ್ವಪಕ್ಷೀಯರ ತೀವ್ರ ವಿರೋಧವನ್ನು ಕಡೆಗಣಿಸಿ ಬಿಜೆಪಿ ಅವರಿಗೆ ಮೂರನೇ ಅವಧಿಗೆ ಚುನಾವಣಾ ಟಿಕೆಟ್ ನೀಡಿದ್ದು ಒಂದಾದರೆ, ಎರಡನೆಯದ್ದು ಕಾಂಗ್ರೆಸ್, ಹಿರಿತಲೆಗಳಿಗೆ ಮಣೆಹಾಕುವ ತನ್ನ ಹಳೆಯ ಸಂಪ್ರದಾಯವನ್ನು ಮುರಿದು ಯುವ ನಾಯಕ ಮಿಥುನ್ ರೈ ಅವರಿಗೆ ಟಿಕೆಟ್ ನೀಡಿದೆ! ನಳಿನ್ ಕುಮಾರ್ ಕಟೀಲ್ ಅವರು ದೇಶದ ಇತರೆಡೆಯ ಬಿಜೆಪಿ ಅಭ್ಯರ್ಥಿಗಳು ಮಾಡಿದಂತೆಯೇ ತಮ್ಮ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುವ ಬದಲು, ‘ಮೋದಿ ಮುಖ ನೋಡಿ – ನನಗೆ ಮತ ನೀಡಿ’ ಎಂದು ಮತಯಾಚನೆಗೆ ಇಳಿದಿದ್ದರೆ, ಅತ್ತ ಮಿಥುನ್ ರೈಯವರು ಪಕ್ಷದ, ಹಿರಿಯ ನಾಯಕರ ಹೆಸರುಗಳನ್ನು ಬಳಸಿಕೊಂಡು ಮತಯಾಚಿಸದೆ ಮಂಗಳೂರಿನ ಪ್ರಮುಖ ಸಮಸ್ಯೆಗಳ ಕುರಿತು ಮಾತನಾಡುತ್ತಾ, ಅವುಗಳನನ್ನು ಪರಿಹರಿಸಲು ತನಗೊಂದು ಅವಕಾಶವನ್ನು ಕೊಡಿ ಎಂದು ಮತಭೇಟೆಗೆ ಇಳಿದಿದ್ದಾರೆ. ನರೇಂದ್ರ ಮೋದಿ ಹಾಗೂ ಮಿಥುನ್ ರೈ ಇಬ್ಬರಿಗೂ ಕರಾವಳಿಯಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಮೋದಿಯವರ ಅಭಿಮಾನಿಗಳು ನಳಿನ್ ಕುಮಾರರ ವೈಫಲ್ಯ ಸರಣಿಗಳನ್ನು ಕಡೆಗಣಿಸಿ, ಕೇವಲ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಒಂದೇ ಇರಾದೆಯೊಂದಿಗೆ ನಳಿನ್ ಕುಮಾರ್ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರೆ, ಮಿಥುನ್ ಅಭಿಮಾನಿಗಳು ಕರಾವಳಿ ಬದಲಾಗಬೇಕು ಎಂಬ ಧೃಡ ಸಂಕಲ್ಪದೊಂದಿಗೆ ಪ್ರಚಾರ ಕಾರ್ಯಗಳಲ್ಲಿ ತೊಡಗಿದ್ದಾರೆ. ಮಾತ್ರವಲ್ಲ ರಾಜಕೀಯದಿಂದ ಮೈಲು ದೂರ ಅಂತರ ಕಾಪಾಡುವ ಶಿಕ್ಷಿತ ವರ್ಗದ ಯುವಕರು ಕೂಡಾ ಸ್ವಯಂಪ್ರೇರಿತವಾಗಿ ಮಿಥುನ್ ಪರ ಮತಯಾಚನೆ, ಪ್ರಚಾರ ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ವಿದೇಶಗಳಲ್ಲಿ ಇರುವ ಎರಡೂ ಕಡೆಯ ಅಭಿಮಾನಿಗಳೂ ಸೋಶಿಯಲ್ ಮೀಡಿಯಾದ ಮೂಲಕ ತಾವು ಬೆಂಬಲಿಸುವ ನಾಯಕರ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಒಟ್ಟಾಗಿ ಕರಾವಳಿಯ ಚುನಾವಣಾ ಕಣ ‘ಈಗ ಮಾಡಿಲ್ಲ ಅಂದ್ರೆ ಮತ್ತೆಂದೂ ಮಾಡಲು ಆಗಲ್ಲ’ ಎಂಬ ಸಂಕಲ್ಪವಾಗಿ ಬದಲಾಗಿರುವುದು ಈ ಚುನಾವಣೆಯ ವೈಶಿಷ್ಟ್ಯ.

ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಎರಡು ವೀಡಿಯೋ ಕ್ಲಿಪ್‌ಗಳು  ಕೆಲದಿನಗಳಿಂದ ಭಾರೀ ಸದ್ದು ಮಾಡುತ್ತಿವೆ. ಎರಡೂ ವೀಡಿಯೋಗಳೂ ಮಹಿಳೆಯರದ್ದೇ! ಒಂದು ಮಿಥುನ್ ರೈಯವರನ್ನು ಬೆಂಬಲಿಸುವ ಲಾವಣ್ಯ ಬಲ್ಲಾಳ್ ಅವರದ್ದಾದರೆ, ಇನ್ನೊಂದು ಮೋದಿಯವರನ್ನು ಬೆಂಬಲಿಸುವ ಜೊಸಿಟಾ ಅನುಲಾ ರೊಡ್ರಿಗಸ್ ಎಂಬವರದ್ದು. ವೈಯಕ್ತಿಕವಾಗಿ ನನಗೆ ಇಬ್ಬರ ಪರಿಚಯವೂ ಇಲ್ಲ. ಲಾವಣ್ಯ ಅವರ ವೀಡಿಯೋ ನೋಡಿ ಅವರ ಬಗ್ಗೆ ಮಾಹಿತಿ ಕಲೆಹಾಕಿದಾಗ, ಅವರು ರೇಡಿಯೋ ಮಿರ್ಚಿ 98.3 FM  ನಲ್ಲಿ ರೇಡಿಯೋ ಜಾಕಿ ಹಾಗೂ ಟೈಮ್ಸ್ ಆಫ್ ಇಂಡಿಯಾದಲ್ಲಿ ಪತ್ರಕರ್ತರಾಗಿ ಅನುಭವ ಇದ್ದವರು ಎನ್ನುವುದು ತಿಳಿಯಿತು. ಜೊಸಿಟಾರವರ ಕುರಿತು ಮಾಹಿತಿ ಕಲೆಹಾಕುವಾಗ, ಅವರು ಕೆಲತಿಂಗಳ ಹಿಂದೆ ತೆರೆ ಕಂಡು, ತೋಪೆದ್ದು ಹೋದ ಜಾಂವಯ್ ನಂಬರ್ 1 ಎಂಬ ಕೊಂಕಣಿ ಚಿತ್ರದ ನಾಯಕಿ ನಟಿ, ಸದ್ಯಕ್ಕೆ ಹೊಸ ಅವಕಾಶಗಳ ಹುಡುಕಾಟದಲ್ಲಿದ್ದಾರೆ ಎಂದೂ ತಿಳಿಯಿತು.

ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನಮ್ಮ ಸಂವಿಧಾನ ನಮಗೆಲ್ಲರಿಗೂ ಕೊಟ್ಟಿದೆ, ಹಾಗಾಗಿ ಇವರಿಬ್ಬರೂ ತಾವು ಅಭಿಮಾನ ಹೊಂದಿರುವ ತಮ್ಮ ನೆಚ್ಚಿನ ಅಭ್ಯರ್ಥಿಯ ಕುರಿತು ಮಾತನಾಡಿ ಅವರಿಗೆ ಮತ ಚಲಾಯಿಸುವಂತೆ ಕೋರಿಕೊಂಡಿರುವುದರಲ್ಲಿ ತಪ್ಪೇನಿಲ್ಲ, ನನಗೆ ಆ ಕುರಿತು ಯಾವ ತಕರಾರೂ ಇಲ್ಲ. ಆದರೆ, ಇವರಿಬ್ಬರು ಮಾತನಾಡುವ ರೀತಿ, ತಮ್ಮ ವಿಚಾರಗಳನ್ನು ವ್ಯಕ್ತಮಾಡಲು ಅವರು ಬಳಸಿಕೊಂಡ ಕಾರಣಗಳು, ಇವುಗಳನ್ನು ತುಲನೆ ಮಾಡಿ ನೋಡಿದ ಮೇಲೆ ಕೆಲವು ವಿಚಾರಗಳನ್ನು ಹೇಳಲೇಬೇಕಾದ ಅನಿವಾರ್ಯತೆ ಇದೆ.

ಲಾವಣ್ಯ ಅವರ ವಿಡಿಯೊ ನೋಡೋಣ – ನಮ್ಮ ಜಿಲ್ಲೆಯ ಜನರು ಭಾರಿ ಬುದ್ಧಿವಂತರು ಎಂಬುದಾಗಿ ಇತರರು ಹೇಳುತ್ತಾರೆ. ಆದರೆ ಅದೇ ಬುದ್ಧಿವಂತಿಕೆಯನ್ನು ನಮ್ಮ ಜನರು ಮತಚಲಾಯಿವಾಗ ಉಪಯೋಗಿಸುವುದಿಲ್ಲ ಎಂಬರ್ಥದಲ್ಲಿ ಮಾತನಾಡಿರುವ ಅವರು ನಳಿನ್ ಕುಮಾರ್ ಕಟೀಲ್ ಅವರು ಸಂಸತ್ತಿನಲ್ಲಿ ಮಾತನಾಡಲು ಪರದಾಡುವ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಅದೇ ನಳಿನ್ ಕುಮಾರ್ ಊರಿಗೆ ಬಂದು ನಮಗೆ ಅನ್ಯಾಯವಾದರೆ ಇಡೀ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂದು ಆವಾಜ್ ಹಾಕುತ್ತಾರೆ. ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್’ಗಳನ್ನು ಉಳಿಸಿಕೊಳ್ಳಲು ನಮ್ಮ ಜಿಲ್ಲೆಯ ಹೆಮ್ಮೆಯ ವಿಜಯಾ ಬ್ಯಾಂಕನ್ನು ಬಲಿಕೊಟ್ಟಾಗ ಮಾತನಾಡುವುದು ಬಿಡಿ ತೊದಲುವುದೂ ಇಲ್ಲ! ನಮ್ಮ ಏರ್ ಪೋರ್ಟ್, ಬಂದರುಗಳನ್ನು ಅದಾನಿಯವರಿಗೆ ಸಮರ್ಪಿಸಿದಾಗಲೂ ಮೌನವಾಗಿಯೇ ಇದ್ದರು. ನಳಿನ್ ಹತ್ತು ವರ್ಷಗಳಿಂದ ಏನು ಕೆಲಸ ಮಾಡಿದ್ದಾರೆ ಎಂದು ಯಾರನ್ನಾದರೂ ಕೇಳಿದರೆ ಅವರು ಪಂಪ್‍‌ವೆಲ್ ವೃತ್ತದಲ್ಲಿದ್ದ ಕಳಶವನ್ನು ಅಲ್ಲಿಂದ ತೆಗೆದು ಬದಿಗಿಟ್ಟಿದ್ದಾರೆ ಎಂದು ಚಟಾಕಿ ಹಾರಿಸುತ್ತಾರೆ.  ಅಷ್ಟೊಂದು ಶಾಲಾ ಕಾಲೇಜುಗಳು ಇರುವ ನಮ್ಮ ಊರಿನಲ್ಲಿ ಕಲಿತವರಿಗೊಂದು ಉದ್ಯೋಗ ಕೊಡಲು ಕಂಪೆನಿಗಳಿಲ್ಲ. ಇಲ್ಲಿನ ಕೋಮುಗಲಭೆ, ಬಂದ್ ಇತ್ಯಾದಿಗಳಿಂದ ರೋಸಿ ಹೋಗಿರುವ ಐಟಿ ಕಂಪೆನಿಗಳು ಮಂಗಳೂರಿನಲ್ಲಿ ಹೂಡಿಕೆ ಮಾಡಲು ತಯಾರಿಲ್ಲದ ಕಾರಣ ನಮ್ಮ  ಯುವಕರು ಉದ್ಯೋಗಕ್ಕಾಗಿ ಪರರಾಜ್ಯ/ಪರದೇಶಗಳಿಗೆ ವಲಸೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಯಾವುದೇ ಜಾತಿ ಮತ ಸೂಚಕ ಶಬ್ಧಗಳನ್ನು ಬಳಸದೇ, ಅತಿರೇಕದ ಹೇಳಿಕೆಗಳನ್ನು ಕೊಡದೇ, ಕೇವಲ ವಾಸ್ತವಾಂಶಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು, ಸಂಸತ್ತಿನಲ್ಲಿ ಹೋಗಿ ಮಾತನಾಡಲು ಬೇಕಾದಷ್ಟು ವಿದ್ಯಾರ್ಹತೆ, ಕ್ಷಮತೆ ಇರುವ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರಿಗೆ ಮತನೀಡಿ ಎಂಬ ಕೋರಿಕೆಯೊಂದಿಗೆ ತಮ್ಮ ಮಾತನ್ನು ಕೊನೆಗೊಳಿಸಿದ್ದಾರೆ.

ಇದನ್ನೇ ಅನುಸರಿಸಿ ಜೊಸಿಟಾರವರು, ನಳಿನ್ ಕುಮಾರ್ ಸಾಧನೆಗಳನ್ನು ವಿವರಿಸಿ ವೀಡಿಯೋ ಮಾಡಿದ್ದರೆ ನಾನಿದ್ದನ್ನು ಬರೆಯುವ ಅವಶ್ಯಕತೆಯೇ ಇರಲಿಲ್ಲ. ಆದರೆ ಅವರ ವಿಡಿಯೋ ಅವರ ಪರಿಚಯದೊಂದಿಗೆ ಶುರುವಾಗುತ್ತದೆ. ತನ್ನ ಹೆಸರು ಹಾಗೂ ವಯಸ್ಸನ್ನು ಹೇಳಿ ತಾನು ಮೊದಲನೇ ಸಾರಿ ಮತ ಚಲಾಯಿಸುವವಳು ಎಂದಷ್ಟೇ ಹೇಳಿ ಮುಂದುವರಿಯುತ್ತಿದ್ದರೆ, ಅಭ್ಯಂತರವಿರಲಿಲ್ಲ. ಆದರೆ ಆಕೆ ತಾನು ರೋಮನ್ ಕ್ಯಾಥೊಲಿಕ್ ಎಂದು ತನ್ನ ಧರ್ಮದ ಹೆಸರು ಬಳಸಿ ತಾನೊಬ್ಬ ಹೆಮ್ಮೆಯ ಭಾರತೀಯಳು ಎನ್ನುತ್ತಾ ಮಾಡೆಲಿಂಗ್ ಹಾಗೂ ಸಿನಿ ಕ್ಷೇತ್ರದ ತನ್ನ ಸಾಧನೆಗಳನ್ನು ವಿವರಿಸುತ್ತಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ, ಆಯಶ್ಮಾನ್ ಭಾರತ್ ಕೊಟ್ಟಿದ್ದಾರೆ, ದಿನಕ್ಕೆ 27 ಕಿಲೋಮೀಟರ್ ರಸ್ತೆ ಅಭಿವೃಧ್ಧಿಯಾಗುತ್ತಿದೆ, ಮಹಿಳೆಯರ ಉಜ್ವಲ ಭವಿಶ್ಯಕ್ಕಾಗಿ 6 ಕೋಟಿ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಕೊಟ್ಟಿದ್ದಾರೆ ಹಾಗಾಗಿ, ಜಾತಿ ಮತ ಧರ್ಮಗಳನ್ನು ಬದಿಗಿಟ್ಟು ನರೇಂದ್ರ ಮೋದಿಯವರಿಗೆ ಮತಚಲಾಯಿವಂತೆ ಕೇಳಿಕೊಂಡು ತಮ್ಮ ಮಾತನ್ನು ಕೊನೆಗೊಳಿಸಿದ್ದಾರೆ. ತಾನೊಬ್ಬ ರೋಮನ್ ಕ್ಯಾಥೋಲಿಕ್ ಎಂದು ತನ್ನನ್ನು ಪರಿಚಯಿಕೊಂಡಾಕೆ, ಜಾತಿ ಮತ ಧರ್ಮಗಳನ್ನು ಬದಿಗಿಟ್ಟು ಮೋದಿಯವರಿಗೆ ಮತ ನೀಡಿ ಎನ್ನುವುದೇ  ಆಕೆಯ ನಟನೆಯಷ್ಟೇ ಹಾಸ್ಯಾಸ್ಪದವಾಗಿದೆ! ಇರಲಿ,  ದಿನಕ್ಕೆ 27 ಕಿಲೋಮೀಟರ್‌ನಂತೆ ರಸ್ತೆ ಮಾಡಿದ ನರೇಂದ್ರ ಮೋದಿಯವರು ಕೆಲವೇ ಮೀಟರ್‌ಗಳಷ್ಟು ಇರಬಹುದಾದ ಪಂಪ್‌ವೆಲ್ ಫ್ಲೈ ಓವರ್‌ನ ಕೆಲಸ ಯಾಕೆ ಇನ್ನೂ ಪೂರ್ಣಗೊಳಿಸಿಲ್ಲ ಎಂದು ಆಕೆ ಹೇಳಿಲ್ಲ.

ಆಯುಷ್ಮಾನ್ ಭಾರತದಂತಹ ಯೋಜನೆಗಳನ್ನು ಕೊಟ್ಟಂತಹ ಮೋದಿಯವರು, ಪೌರ ಕಾರ್ಮಿಕರನ್ನು ಮಲಗುಂಡಿಗಳಿಗೆ ಇಳಿಸಿ ಅವರಿಂದ ಕೆಲಸ ಮಾಡಿಸುವುದನ್ನು ಯಾಕೆ ನಿಲ್ಲಿಸಿಲ್ಲ, ಬದಲಾಗಿ ಅವರ ಕಾಲು ತೊಳೆದು ತಮ್ಮ ಇಮೇಜ್ ಬೆಳೆಸಲು ಪ್ರಯತ್ನಿಸಿದ್ದು ಯಾಕೆ ಎಂದು ಹೇಳಲೇ ಇಲ್ಲ! ಆರು ಕೋಟಿ ಉಚಿತ ಗ್ಯಾಸ್ ಕನೆಕ್ಷನ್ ಕೊಟ್ಟ ಮೋದಿಯವರ ಪಕ್ಷದ ಮಥುರಾ ಲೋಕಸಭಾ ಕ್ಷೇತ್ರದ ಲೋಕಸಭಾ ಅಭ್ಯರ್ಥಿ, ಸಿನೆಮಾ ನಟಿ ಹೇಮಾ ಮಾಲಿನಿಯವರು ಗ್ಯಾಸ್ ಕನೆಕ್ಷನ್ ಪಡೆದುಕೊಂಡ ಮನೆಯ ಮಹಿಳೆಯರ ಜೊತೆ ಫೋಟೋಗೆ ಪೋಸ್ ಕೊಡುವ ಬದಲು ಸೌದೆ ಹೊತ್ತ ಮಹಿಳೆಯ ಜೊತೆ ಪೋಸ್ ಕೊಡಬೇಕಾದ ಅನಿವಾರ್ಯತೆ ಯಾಕೆ ಎದುರಾಯಿತು ಎಂದೂ ಹೇಳಲಿಲ್ಲ. ಮಥುರಾ ಬದಿಗಿರಲಿ, ಸ್ವಂತ ತನ್ನದೇ ಮನೆಯಲ್ಲಿ ಮೋದಿಯವರ ಗ್ಯಾಸ್ ಬದಲು ಇಂಡಕ್ಷಲ್ ಸ್ಟವ್ ಯಾಕೆ ಉರಿಯುತ್ತಿದೆ ಅಂತಾನೂ ಹೇಳಿಲ್ಲ. ಅದೆಲ್ಲಾ ಬಿಡಿ, ಸ್ಟಾರ್ಟ್ ಅಪ್ ಇಂಡಿಯಾದಂತಹ ಯೋಜನೆಗಳಿಂದಾಗಿ ಉದ್ಯೋಗಳು ಸೃಷ್ಟಿಯಾಗಿವೆ ಎಂದಿರುವ ಆಕೆ, ಒಂದು ವೇಳೆ ಹಾಗೆ ಉದ್ಯೋಗಗಳು ಸೃಷ್ಟಿಯಾಗಿದ್ದೇ ನಿಜವಾದರೆ, ಆ ಉದ್ಯೋಗಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಬದಲು ಈ ವೀಡಿಯೋದಲ್ಲಿ ಬಿಜೆಪಿ ಪಕ್ಷದ ಪರವಾಗಿ ನಟಿಸುವ ಅಗತ್ಯವಾದರೂ ಏನಿತ್ತು ಎಂದಾದರೂ ವಿವರಿಸಬೇಕಿತ್ತು, ಅದೂ ಇಲ್ಲ!

ಈ ಎರಡು ವೀಡಿಯೋಗಳು, ಅದರಲ್ಲಿ ಮಾತನಾಡಿದ ಎರಡು ಮಹಿಳೆಯರ ಹಿನ್ನೆಲೆ, ಅವರು ತೆರೆದಿಟ್ಟ ವಾಸ್ತವಾಂಶಗಳು, ಬಣ್ಣಿಸಿದ ಅತಿರೇಕಗಳು ಇವನ್ನೆಲ್ಲಾ ತಾಳೆ ಹಾಕಿ ನೋಡಿದಾಗ ಒಂದಂತೂ ಸ್ಪಷ್ಟ, ಕರಾವಳಿ ಇಭ್ಭಾಗವಾಗಿದೆ! ಪರಿಣಾಮವಾಗಿ ಕರಾವಳಿಯ ಮತದಾರನ ಮುಂದೆ ಈಗ ಎರಡು ಆಯ್ಕೆಗಳಿವೆ – ಒಂದು ತನ್ನ ನೆಲದ ಹಿತಾಸಕ್ತಿ ಮತ್ತೊಂದು ಪೊಳ್ಳು ರಾಷ್ಟ್ರವಾದದ ಹೆಸರಿನಲ್ಲಿ ನಡೆಯುತ್ತಿರುವ ವ್ಯಕ್ತಿಪೂಜೆ! ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡುವುದು ಮತದಾರನ ಪ್ರಜ್ಞೆಗೆ ಒಂದು ಸವಾಲು ಎಂದರೂ ತಪ್ಪಾಗಲಾರದು.ಈ ಕುರಿತು ಇನ್ನೊಂದೆರಡು ವೀಡಿಯೋಗಳನ್ನು ನೋಡಲೇ ಬೇಕು.

ಇದು ನಳಿನ್ ಕುಮಾರ್ ಅವರು ಸಂಸತ್ತಲ್ಲಿ ಇಂಗ್ಲಿಷಿನಲ್ಲಿ ಮಾತನಾಡಿದ ವೀಡಿಯೊ. ಇಂಗ್ಲಿಷ್ ಭಾಷೆ ಗೊತ್ತಿದ್ದವರೆಲ್ಲಾ ಬುಧ್ಧಿವಂತರು ಅಥವಾ ಬುಧ್ಧಿವಂತರೆನಿಕೊಳ್ಳಬೇಕೆಂದರೆ ಇಂಗ್ಲಿಷ್ ಬರಲೇ ಬೇಕು ಎಂಬ ವಾದವನ್ನು ನಾನು ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದೇನೆ, ಈಗಲೂ ವಿರೋಧಿಸುತ್ತೇನೆ. ಆದರೆ ತಾನು ಪ್ರತಿನಿಧಿಯಾಗಿ ಹೋದ ವೇದಿಕೆಯಲ್ಲಿ ತನ್ನ ಜನರ ಸಮಸ್ಯೆಗಳನ್ನು ವಿವರಿಸಿ ಹೇಳುವ ಸಾಮರ್ಥ್ಯ ಒಬ್ಬ ಜನಪ್ರತಿನಿಧಿಗೆ ಇರಲೇ ಬೇಕು ಎಂಬುದರಲ್ಲಿ ನನಗೆ ಕಿಂಚಿತ್ ಸಂಶಯವಿಲ್ಲ. ನಳಿನ್ ಕುಮಾರ್ ಅವರು ಹೆಚ್ಚು ಓದಿಲ್ಲ, ಹಾಗಾಗಿ ಅವರು ಇಂಗ್ಲಿಷ್ ಮಾತನಾಡಲು ತೊದಲುತ್ತಾರೆ, ಅವರ ಪಕ್ಷವು ನಮ್ಮ ರಾಷ್ಟ್ರಭಾಷೆಯೆಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿರುವ ಹಿಂದಿ ಭಾಷೆಯೂ ಅವರಿಗೆ ಸರಿಯಾಗಿ ಬರದು ಎಂಬುದನ್ನೂ ಕ್ಷಮಿಸೋಣ ಬಿಡಿ.

ಅವರಿಗೆ ನಿಜಕ್ಕೂ ತಮ್ಮ ಜನರ ಸಮಸ್ಯೆಗಳನ್ನು ಆಡಳಿತ ಯಂತ್ರದ ಮುಂದೆ ಇಡಲೇ ಬೇಕೆಂದರೆ ಇನ್ನೊಂದು ಮಾರ್ಗವಿದೆ.  ತಾನು ಮಾತನಾಡಬಲ್ಲ ಭಾಷೆಯನ್ನು ಅರ್ಥಮಾಡಿಕೊಳ್ಳಲಾಗದ ಜನರಿರುವ ಊರಿನಲ್ಲಿ ಚುನಾವಣಾ ಭಾಷಣಗಳನ್ನು ಮಾಡುವಾಗ ಇವರು ಅನುವಾದಕರ ನೆರವು ಪಡೆಯುತ್ತಾರೆ. ಉದಾಹರಣೆಗೆ ನಮ್ಮ ಸಂಸದರು ಕೇರಳದಲ್ಲಿ ಮಾಡಿದ ಬಹು ಜನಪ್ರಿಯ ಒಂದು ರುಪಾಯಿಗೆ ಹದಿನೈದು ಡಾಲರ್ ಭಾಷಣ ಕೇಳಿ. ಸಂಸತ್ತಿನಲ್ಲಿ ತುಳು, ಕನ್ನಡ ಅರ್ಥವಾಗುವ, ಜತೆಗೇ ಹಿಂದಿ ಇಂಗ್ಲಿಷ್ ಮಾತನಾಡಲು ಬರುವ ಬಿಜೆಪಿ ಪಕ್ಷದ ಇತರ ಸಂಸದರಿದ್ದಾರೆ, ಅವರ ನೆರವನ್ನು ಪಡೆದುಕೊಂಡು ತಮ್ಮ ವಾದಗಳನ್ನು ಮಂಡಿಸಬಹುದಲ್ಲವೇ? ನಮ್ಮ ಸಂಸದರ ವೈಫಲ್ಯಗಳಿವೆ ಅವರಲ್ಲಿನ ಇಚ್ಛಾಶಕ್ತಿಯ ಕೊರತೆ ಕಾರಣವೇ ಹೊರತು ಅವರ ಭಾಷಾ ಜ್ಞಾನ ಖಂಡಿತಾ ಅಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ!

ನಮ್ಮ ಸಂಸದರ ಇಚ್ಛಾಶಕ್ತಿಯ ಕುರಿತು ಇನ್ನೂ ಸ್ಪಷ್ಟತೆಗಾಗಿ ಅವರು ಸಂಸತ್ತಿನಲ್ಲಿ ಮಾಡಿದ ಕನ್ನಡ ಭಾಷಣವನ್ನೊಮ್ಮೆ ಕೇಳಲೇಬೇಕು! ಅಡಿಕೆ ಬೆಳೆಗಾರರನ್ನು ಭಾದಿಸುತ್ತಿರವ ಕೊಳೆರೋಗದ ಬಗ್ಗೆ ತಯಾರಿಸಿರುವ ವರದಿಯನ್ನು ಅವರು ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ. ಸಮಸ್ಯೆಯ ವಿವರಣೆ ಕನ್ನಡ ಭಾಷೆಯಲ್ಲಿರುವ ಕಾರಣ ಅದನ್ನು ಅರ್ಥಮಾಡಿಕೊಳ್ಳಲಾಗದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಳಿನ್ ಕುಮಾರ್ ಅವರು ಮಾತು ಮುಗಿಸುವ ಮೊದಲೇ, ಧನ್ಯವಾದ್, ಥ್ಯಾಂಕ್ ಯೂ ಸೋ ಮಚ್ ಎಂದು ಸಾಗಹಾಕುತ್ತಾರೆ. ಇತರ ಸಂಸದರು ಬಹುತ್ ಇಂಪೋರ್ಟೆಂಟ್ ಹೈ ಯೇ ಅಂತ ಕೂಗಿದಾಗಲೂ ಸ್ಪೀಕರ್ ಅವರು ನಹೀ ಹೈ ಎಂದು ನಿರಾಕರಿಸುತ್ತಾರೆ. ಈ ಕುರಿತು ಸ್ವಲ್ಪವೂ ಪ್ರತಿರೋಧ ತೋರುವ ಗೋಜಿಗೆ ಹೋಗದ ನಮ್ಮ ಸಂಸದರು, ಇತರ ಸಂಸದರ ನೆರವು ಪಡೆದು ಕನ್ನಡ ತಿಳಿಯದ ಸ್ಪೀಕರ್ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಸಮಸ್ಯೆಯ ಆಳವನ್ನು ಬಿಡಿಸಿ ಹೇಳುವುದರ ಬದಲು, ‘ನನಗೆ ಬರೆದುಕೊಟ್ಟದ್ದನ್ನು ನಾನು ಓದಿದ್ದೇನೆ, ಅವರಿಗೆ ಕನ್ನಡ ಬರದಿದ್ದರೆ ನಾನೇನು ಮಾಡ್ಲಿ?’ ಎಂಬರ್ಥದಲ್ಲಿ ಸುಮ್ಮನಾಗಿ ತಮ್ಮ ಖುರ್ಚಿಯಲ್ಲಿ ಆಸೀನರಾಗುತ್ತಾರೆ!

ಇದು ಕರಾವಾಳಿಯಲ್ಲಿ ನಳಿನ್ ಕುಮಾರ್ ಪ್ರಬಲ ಎದುರಾಳಿ ಅಭ್ಯರ್ಥಿ ಮಿಥುನ್ ರೈ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರಿಗೆ ಮೂಡಬಿದಿರೆ ಕ್ಷೇತ್ರದಿಂದ ಟಿಕೆಟ್ ಬಹುತೇಕ ನಿಗದಿಯಾಗಿದ್ದು, ಕೊನೆಯ ಗಳಿಗೆಯಲ್ಲಿ ಕೈತಪ್ಪಿತು. ಇಂತಹ ಸನ್ನಿವೇಶಗಳ್ಳಿ ಟಿಕೆಟ್ ಆಕಾಂಕ್ಷಿಗಳು, ಅದರಲ್ಲೂ ಯುವ ಅಭ್ಯರ್ಥಿಗಳು ಪಕ್ಷವಿರೋಧಿ ಕೆಲಸಗಳಲ್ಲಿ ತೊಡಗುವುದು, ಇಲ್ಲವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಸಾಮಾನ್ಯ ಸಂಗತಿ. ಆದರೆ ಮಿಥುನ್ ರೈ ಇದ್ಯಾವುದರ ಗೋಜಿಗೂ ಹೋಗದೆ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಅನೇಕ ವಿರೋಧಗಳ ನಡುವೆಯೂ ಅವರಿಗೆ ಟಿಕೆಟ್ ಅಂತಿಮವಾಯಿತು. ಮರುಗಳಿಗೆಯೇ ಪ್ರಚಾರಕ್ಕಿಳಿದ ಅವರು ಮುಖ್ಯವಾಗಿ ಮೂರು ವಿಶಯಗಳನ್ನು ಮಾತನಾಡುತ್ತಿದ್ದಾರೆ. ಸರ್ವಧರ್ಮಗಳ ಶಾಂತಿ ತೋಟವಾದ ಮಂಗಳೂರಿನಲ್ಲಿ ಕೋಮು ಸೌಹಾರ್ದವನ್ನು ಪುನರ್‌ಸ್ಥಾಪಿಸುವುದು, ಮಂಗಳೂರಿನ ಯುವಕರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವುದು, ಹಾಗೂ ಮಂಗಳೂರನ್ನು ಸರ್ವತೋಮುಖವಾಗಿ ಅಬಿವೃದ್ದಿಪಡಿಸುವುದು.  ಅವರು ಜಾತಿ, ಮತ, ಧರ್ಮಗಳ ಬಗ್ಗೆ ಮಾತಾಡುತ್ತಿಲ್ಲ, ಪಕ್ಷದ ಹಿರಿಯ ನೇತಾರರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿಧ್ಧರಾಮಯ್ಯ ಮುಂತಾದವರ ಹೆಸರನ್ನು ಹೇಳಿ, ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿಲ್ಲ. ಕಡಿಯಿರಿ, ಕೊಲ್ಲಿರಿ, ಬೆಂಕಿ ಹಚ್ಚಿರಿ ಎನ್ನುವ ಉದ್ರೇಕದ ಮಾತುಗಳನ್ನಾಡುತ್ತಿಲ್ಲ. ಅವರ ಭಾಷಣಗಳಲ್ಲಿ ನನಗೆ ಪ್ರಮುಖವಾಗಿ ಕಂಡುಬಂದಿರುವುದು ಎರಡು ಸಂಗತಿಗಳು – ಮಂಗಳೂರಿನ ಸಮಸ್ಯೆಗಳನ್ನು ಅವರು ಅರ್ಥ ಮಾಡಿಕೊಂಡಿರುವುದು, ಮತ್ತು ಅದನ್ನು ಪರಿಹರಿಸಲು ನನಗೊಂದು ಅವಕಾಶ ಕೊಡಿ ಎನ್ನುವ ಅವರ ಕೋರಿಕೆ!

ಎಪ್ರಿಲ್ 18 2019

ನನ್ನ ಅಮೂಲ್ಯ ಮತವನ್ನು ಯಾರಿಗೆ ಚಲಾಯಿಸಬೇಕೆಂಬ ನಿರ್ಧಾರವನ್ನು ನಾನು ಮಾಡಿಯಾಗಿದೆ. ಸಂಸತ್ತಿಗೆ ಹೋಗಿ ನನ್ನ ಸಮಸ್ಯೆಗಳನ್ನು ಹೇಳಲು ನನಗಂತೂ ಸಾಧ್ಯವಿಲ್ಲ, ಹಾಗಾಗಿ ಸಂಸತ್ತಿನಲ್ಲಿ ನನ್ನ ಧ್ವನಿಯಾಗಿ ಮಾತಾಡಬಲ್ಲ ಪ್ರತಿನಿಧಿಯೊಬ್ಬರನ್ನು ಆರಿಸಿ ಸಂಸತ್ತಿಗೆ ಕಳಿಸುವ ನಿರ್ಧಾರ ಮಾಡಿದ್ದೇನೆ. ಹಾಗಾಗಿ ನನ್ನ ಮತ ಮುಖವಾಡಕ್ಕಲ್ಲ, ನನ್ನ ಧ್ವನಿಗೆ!

► ಓಸ್ಕರ್ ವಗ್ಗ

The specified slider id does not exist.

 

DONATE
ಕಿಟಾಳ್ ತುಮ್ಕಾಂ ಮೊಗಾಚೆಂ? ಪಾಟ್ಲ್ಯಾ 10 ವರ್ಸಾಂ ಪಾಸುನ್ ಖಳಾನಾಸ್ತಾನಾ ನಿರಂತರ್ ಫಾಯ್ಸ್ ಜಾವ್ನ್ ಆಸ್ಚ್ಯಾ ಕಿಟಾಳಾರ್ ಹಜಾರೊಂ ಪಾನಾಂನಿ ವಿಂಚ್ಣಾರ್ ಕೊಂಕ್ಣಿ ಸಾಹಿತ್ಯ್ ಆಸಾ. ಪಾಟ್ಲ್ಯಾ ಧಾ ವರ್ಸಾಂನಿ ಬಾಂದುನ್ ಹಾಡ್ಲೆಲೆಂ ಕೊಂಕ್ಣಿ ಸಾಹಿತ್ಯಾಚೆಂ ದಾಯ್ಜ್ ಮುಕಾರುನ್ ವ್ಹರುಂಕ್ ತುಮ್ಚ್ಯಾ ಖುಶೆಚಿ ವರ್ಗಣಿ ದೀವ್ನ್ ಆಮ್ಕಾಂ ಪಾಟಿಂಬೊ ದಿಯಾ. ಸಕಯ್ಲೊ ಬುತಾಂವ್ ದಾಂಬುನ್ ಗೂಗಲ್ ಪೇ, ಪೋನ್ ಪೇ, ಬ್ಯಾಂಕ್ ಟ್ರಾನ್ಸ್‌ಪರ್, ಡೆಬಿಟ್ ಕ್ರೆಡಿಟ್ ಕಾರ್ಡಾ ಮಾರಿಫಾತ್ ವರ್ಗಣಿ ದಿವ್ಯೆತ್. ದೇವ್ ಬರೆಂ ಕರುಂ.

Join KITTALL WhatsApp Group, connect to KONKANI Literature

Nobody had feels yet. And how do you feel?
0 :thumbsup: Thumbs up
0 :heart: Love
0 :joy: Joy
0 :heart_eyes: Awesome
0 :blush: Great
0 :cry: Sad
0 :rage: Angry

7 comments

 1. ಮೆಲ್ಕ ಮಿಯಾರ್‌

  ವಿರೋಧ್‌ ಪಾಡ್ತ್‌ ಆನಿ ದುಸ್ಮಾನಾ ಮಧ್ಲೊ ಫರಕ್‌ ಸಮ್ಜಾವ್ಯಾಂ
  ಲೋಕ್‌ ಸಭಾ ಚುನಾವ್‌ ಜಾಂವ್ಕ್‌ ಫಕತ್‌ ಥೊಡೆಚ್‌ ಘಂಟೆ ಬಾಕಿ ಆಸಾತ್.‌ ಸಕ್ಡಾಂನಿ ಕೊಣಾಕ್‌ ವೋಟ್‌ ಘಾಲಿಜೆ ಮ್ಹಣೊನ್‌ ಆಪ್ಲೊ ನಿರ್ಧಾರ್‌ ಘೆತ್ಲಾ. ಆನಿ ಸಕ್ಡಾಂಕ್‌ ಆಪಾಪ್ಲೊ ನಿರ್ಧಾರ್‌ ಘೆಂವ್ಕ್‌ ಹಾಂಗಾಸರ್‌ ಹಕ್ಕ್‌ ಆಸಾ. ಬಾಯ್ಲೆನ್‌ ಬಿಜೆಪಿಕ್‌ ವೋಟ್‌ ಘಾಲ್ಯಾರ್‌, ಘೊವಾನ್‌ ಕಾಂಗ್ರೆಸಾಕ್‌ ವೋಟ್‌ ಘಾಲ್ಯೆತ್‌, ವಾ ಪುತಾನ್‌ ಕಮ್ಯೂನಿಸ್ಟ್‌ ಪಾಡ್ತಿಕ್‌ ವೋಟ್‌ ಘಾಲ್ಯೆತ್.‌ ಪ್ರಜಾಪ್ರಭುತ್ವಾನ್‌ ಹಾಂಗಾಸರ್‌ ಸಕ್ಡಾಂಕ್‌ ಆಪಾಪ್ಲೆಂ ಹಕ್ಕ್‌ ಚಲಂವ್ಕ್‌ ಭರ್ಪೂರ್‌ ಅವ್ಕಾಸ್‌ ದಿಲಾ. ಹೆಂ ಹಕ್ಕ್‌ ಕೊಣಾಥಾವ್ನ್‌ ಯೀ ಆಡಾಂವ್ಕ್‌ ಜಾಯ್ನಾ.
  ಕಿಟಾಳಾರ್‌ ಯೀ ಹ್ಯಾ ವಿಶಿಂ ಜಾಯ್ತಿ ಭಾಸಾಭಾಸ್‌ ಚಲ್ಲ್ಯಾ. ಮುಕೆಲ್‌ ಜಾವ್ನ್‌ ಸಾಮಾಜಿಕ್‌ ಜಾಳಿಜಾಗ್ಯಾಂನಿ ವೆಕ್ತ್‌ ಜಾಂವ್ಚಾ ಅಭಿಪ್ರಾಯೆ ವಿಶ್ಯಾಂತ್‌ ಹಾಂಗಾಸರ್‌ ಚರ್ಚಾ ಜಾಲ್ಲ್ಯಾ. ಹಿ ಸಂತೊಸಾಚಿ ಗಜಾಲ್.‌ ಕಿತ್ಯಾಕ್‌ ಮ್ಹಳ್ಳ್ಯಾರ್‌. ಏಕ್‌ ಭಲಾಯ್ಕೆಭರಿತ್‌ ಪ್ರಜಾಪ್ರಭುತ್ವಾಂತ್‌ ಚರ್ಚೆಕ್‌ ಅವ್ಕಾಸ್‌ ಆಸಾಜೆ.
  ಪುಣ್‌ ಏಕ್‌ ವಿಚಾರ್‌ ಆಮಿ ಹಾಂಗಾಸರ್‌ ಮತಿಂತ್‌ ದವ್ರಿಜೆ ಪಾಡ್ತಾ. ಭಾಸಾಭಾಸ್‌ ಚಲಯ್ತಾನಾ ಆಮಿ ಸಕ್ಡಾಂಚಾ ಅಭಿಪ್ರಾಯೆಂಕ್‌ ಅವ್ಕಾಸ್‌ ದೀಜೆ ಪಡ್ತಾ. ಕಾಂಗ್ರೆಸ್‌, ಬಿಜೆಪಿ, ಯಾ ಕಮ್ಯುನಿಸ್ಟ್…‌ ಹರ್ಯೆಕ್ಲ್ಯಾಂಕ್‌ ಆಪಾಪ್ಲಿ ಅಭಿಪ್ರಾಯ್‌ ಆಸ್ತಾ. ಪುಣ್‌ ಕೊಣೆಂಯ್‌ ಎಕ್ಲ್ಯಾನ್‌ ಬಿಜೆಪಿ ಪಾಡ್ತಿಕ್‌ ಫುಗಾರ್ನ್‌ ಆಪ್ಲೆಂ ವಾಕ್ಮೂಲ್‌ ದಿಲೆಂ ತರ್‌ ತಾಚೆ ವಯ್ರ್‌ ʼಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರʼ ಸೊಡ್ಚೆಂ ಪ್ರಜಾಪ್ರಭುತ್ವಾಚೆಂ ಲಕ್ಷಣ್‌ ನ್ಹಂಯ್.‌
  ಖಂಡಿತ್‌ ಜಾವ್ನ್‌ ಹರ್‌ ಎಕ್ಲ್ಯಾಕ್‌ ಆಪಾಪ್ಲೊ ವಾದ್‌, ಆಪಾಪ್ಲೆ ವಿಚಾರ್‌ ಸಮರ್ಥನ್‌ ಕರುಂಕ್‌ ಹಕ್ಕ್‌ ಆಸಾ. ತಶೆಂ ಮ್ಹಣೊನ್‌ ಆಪ್ಣಾನ್‌ ಚಲ್‌ ಲ್ಲಿಚ್‌ ವಾಟ್‌ ಸಾರ್ಕೆಂ ಮ್ಹಳ್ಳೆಂ ಹಠ್‌ ಪ್ರಜಾಪ್ರಭುತ್ವ್‌ ಚಿಂತ್ಪಾಕ್‌ ಮಾರಕ್‌ ಜಾಂವ್ಕ್‌ ಪಾವ್ತಾ. ಕೊಣೀ ಕೊಣಾಕೀ ವೋಟ್‌ ಘಾಲುಂದಿ. ಉಗ್ತ್ಯಾನ್‌ ತ್ಯಾ ವಿಶಿಂ ಪಾಚಾರುಂದಿ. ತಾಂತುಂ ಆಮ್ಕಾಂ ಕಾಂಯ್‌ ಫರಕ್‌ ಪಡಾನಾ. ಕಿತ್ಯಾಕ್‌ ಮ್ಹಳ್ಳ್ಯಾರ್‌, ಮ್ಹಜೊ ವೋಟ್‌ ಹಾಂವೆಂಚ್‌ ಘಾಲ್ಚೊ. ಹಾಂವೆಂ ಕೊಣಾಕ್‌ ವೋಟ್‌ ಘಾಲಾ, ತೊ ಮಾತ್ರ್‌ ಸಾರ್ಕೊ ಮನಿಸ್‌, ಉರ್‌ ಲ್ಲೆ ಸರ್ವ್‌ ನಾಲಾಯಕ್‌ ಮ್ಹಳ್ಳೆಂ ಚಿಂತಾಪ್‌ ಫ್ಯಾಸಿಸ್ಟ್‌ ಸಂಸ್ಕೃತಿಕ್‌ ಆಸ್ಪದ್‌ ದಿತಾ.
  ದೆಸಾಚಾ ಆಧುನಿಕ್‌ ರಾಜಕೀಯ್‌ ಇತಿಹಾಸಾ ವಯ್ರ್‌ ದೀಷ್ಟ್‌ ಘಾಲ್ಯಾರ್‌ ದೋನ್‌ ರಿತಿಚೆ ಮುಕೆಲಿ ದಿಸೊನ್‌ ಯೆತಾತ್.‌ ಪಯ್ಲೆ: ವಿವಿಧ್ಪಣಾಥಂಯ್‌ ಏಕತಾ ದೆಖ್‌ ಲ್ಲೆ. ದುಸ್ರೆ: ಸಗ್ಳೊ ಅಧಿಕಾರ್‌ ಆಪ್ಣಾಚಾ ಹಾತಾಂತ್‌ ದವ್ರಿಲ್ಲೆ. ನೆಹ್ರು ಆನಿ ವಾಜಪೇಯಿ ಪಯ್ಲ್ಯಾ ವರ್ಗಾಂತ್‌ ಯೆತಾತ್.‌ ದುಸ್ರ್ಯಾಂಚಾ ಚಿಂತ್ಪಾಕ್‌ ಮಾನ್‌ ದಿಂವ್ಚಿ ಸಂಸ್ಕೃತಿ ತಾಂಚಿ ಜಾವ್ನಾಸ್‌ ಲ್ಲಿ. ವಿಶೇಸ್‌ ಮ್ಹಳ್ಳ್ಯಾರ್‌, ವೆವೆಗ್ಳ್ಯಾ ಪಾಡ್ತಿಚೆ ತರೀ, ವಾಜಪೇಯಿಕ್‌ ನೆಹ್ರು ವಯ್ರ್‌ ಅಭಿಮಾನ್‌ ಆಸ್‌ ಲ್ಲೊ. ಸಬಾರ್‌ ಪಾವ್ಟಿಂ ತಾಣೆ ಹ್ಯಾ ವಿಶಿಂ ಉಗ್ತ್ಯಾನ್‌ ಸಾಂಗ್ಲಾಂ.
  ಇಂದಿರಾ ಗಾಂಧಿ ಆನಿ ನರೇಂದ್ರ ಮೋದಿ ದುಸ್ರ್ಯಾ ವರ್ಗಾಂತ್‌ ಯೆತಾತ್.‌ ಅಧಿಕಾರ್‌ ಕೇಂದ್ರೀಕರಣ್‌ ಹಾಂಕಾಂ ಪಸಂದಾಯೆಚೆಂ. ಸಗ್ಳೊ ಅಧಿಕಾರ್‌ ಆಪ್ಲ್ಯಾಚ್‌ ಹಾತಾಂತ್‌ ಆಸಾಜೆ ಮ್ಹಳ್ಳಿ ಹಾಂಚಿ ಆಶಾ. ತ್ಯಾ ದೆಕುನ್‌ ಚ್‌ ಇಂದಿರಾ ಗಾಂಧಿನ್‌ ಸಬಾರ್‌ ವರ್ಗಾಚೆಂ ವಿರೋಧ್ಪಣ್‌ ಸೊಸಿಜೆ ಪಡ್ಲೆಂ. ನರೇಂದ್ರ ಮೋದಿ ಅಜೂನೀ ಅಧಿಕಾರಾರ್‌ ಆಸಾ. ತ್ಯಾ ದೆಕುನ್‌ ಆತಾಂಕ್‌ ಹಾಚೆ ವಿಶಿಂ ಕಿತೆಂಚ್‌ ಸಾಂಗೊಂಕ್‌ ಜಾಯ್ನಾ.
  ಪುಣ್‌ ಆಮಿ ಹಾಂಗಾಸರ್‌ ಏಕ್‌ ವಿಷಯ್‌ ಮತಿಂತ್‌ ದವ್ರಿಜೆ. ಹರ್‌ ಏಕ್‌ ಭಯೋತ್ಪಾದಕ್‌ ಯೀ ಎಕಾ ವರ್ಗಾಕ್‌ ವಿಲನ್‌ ಜಾತಾನಾ, ಅನ್ಯೇಕಾ ವರ್ಗಾನ್‌ ಹಿರೊ ಜಾವ್ನಾಸ್ತಾ. ಹರ್ಯೆಕ್‌ ಯೀ ಆಪ್ಣಾನ್‌ ಪಳೆಂವ್ಚಾ ದಿಷ್ಟಿವಯ್ರ್‌ ಹೊಂದ್ವೊನ್‌ ಆಸ್ತಾ. ತ್ಯಾ ದೆಕುನ್‌ ಚ್‌ ನೆಹ್ರು ಆನಿ ವಾಜಪೇಯಿ ಬರಿಂ ದುಸ್ರ್ಯಾಂಚಾ ಚಿಂತ್ಪಾಕ್‌ ಮಾನ್‌ ದಿಂವ್ಚಿ ವಿಶಾಲ್‌ ವಾಟ್‌ ಆಮಿ ವಿಂಚಿಜೆ ಪಾಡ್ತಾ. ಆಪ್ಣಾಚಾ ಪಸಂದಾಯೆಚಾ ಮುಕೆಲ್ಯಾ ಥಂಯ್‌ ಫಕತ್‌ ಬರೆ ಗುಣ್‌ ಪಳೆಂವ್ಚೆಂ ಮನ್ಶಾಸಹಜ್‌ ಸಂಯ್ಭ್.‌ ಹೆಂಚ್‌ ಸಂಯ್ಭ್‌ ವಿರೋಧ್‌ ಪಾಡ್ತಿಚಾಂಕ್‌ ಯೀ ಆಸಾಮು? ʼವಿರೋಧ್‌ ಪಾಡ್ತಿಚೊʼ ಆನಿ ʼದುಸ್ಮಾನಾʼ ಮಧ್ಲೊ ಫರಕ್‌ ಆಮಿ ಸಮ್ಜಾಜೆ.
  ರಾಜಕೀಯಾಂತ್‌ ಕೊಣೀ ಎಕಾ ಪಾಡ್ತಿಂತ್‌ ಶಾಶ್ವತ್‌ ಆಸ್ತಿತ್‌ ಮ್ಹಣೊನ್‌ ಸಾಂಗೊಂಕ್‌ ಜಾಯ್ನಾ. ಆಜ್‌ ಕಾಂಗ್ರೆಸಾಂತ್‌ ಆಸ್‌ ಲ್ಲೊ ಮುಕೆಲಿ ಫಾಲ್ಯಾಂ ಬಿಜೆಪಿಂತ್‌ ಆಸೊಂಕ್‌ ಪುರೊ. ಹಾಚೆಂ ಉಲ್ಟೆಂಯೀ ಘಡೊಂಕ್‌ ಆಸಾ. ಪ್ರಸ್ತುತ್‌ ಬಿಜೆಪಿ ಮುಕೆಲಿ ಜಯಪ್ರಕಾಶ್‌ ಹೆಗ್ಡೆ ಎಕಾ ಕಾಳಾರ್‌ ‌ಕಾಂಗ್ರೆಸಾಂತ್‌ ಆಸ್‌ ಲ್ಲೊ! ರಾಜಕೀಯಾಂತ್‌ ಕೊಣೀ ಶಾಶ್ವತ್‌ ದುಸ್ಮಾನ್‌ ಯೀ ನ್ಹಂಯ್‌, ಈಷ್ಟ್‌ ಯೀ ನ್ಹಂಯ್‌ ಮ್ಹಳ್ಳೆಂ ಚಿಂತಾಪ್‌ ಆಸಾ. ತರ್‌ ಹ್ಯಾ ರಾಜಕಾರಣಿಂಚಾ ಪಾಟ್ಲಾವ್ದಾರಾಂನಿ ಕಿತ್ಯಾಕ್‌ ದುಸ್ಮಾನ್ಕಾಯೆಚಿ ವಾಟ್‌ ದರಿಜೆ?
  ಎಲಿಸಾಂವ್‌ ಮ್ಹಳ್ಳ್ಯಾರ್‌ ಪ್ರಜಾಪ್ರಭುತ್ವಾಚೆಂ ಫೆಸ್ತ್‌ ಮ್ಹಣೊನ್‌ ಆಮಿ ಮ್ಹಣ್ತಾಂವ್.‌ ಹ್ಯಾ ಫೆಸ್ತಾಂತ್‌ ಹರ್ಯೆಕ್‌ ಚಿಂತ್ಪಾಚೆ ಭಾಗ್‌ ಘೆತ್ಲ್ಯಾರ್‌ ಮಾತ್ರ್‌ ಹಾಂಗಾಸರ್‌ ಸೊಭಾಯ್‌ ಯೆತಾ. ಹಾಂಗಾಸರ್‌ ಚಿಂತ್ಪಾಂಚಿ ವ್ಹಾಳ್‌ ವ್ಹಾಳೊಂದಿ. ದುಸ್ಮಾನ್ಕಾಯ್‌ ನ್ಹಂಯ್.‌ ಆಮ್ಚೆ ವಿಚಾರ್‌ ಆಮಿ ಮಾಂದ್ಯಾಂ. ಪುಣ್‌ ಆಪುಣ್ ಚ್‌ ಸಾರ್ಕೊಂ ಮ್ಹಳ್ಳೆಂ ಹಠ್‌ ನಾಕಾ. ಆಪ್ಣಾಕ್‌ ಕೋಣ್‌ ಸಾರ್ಕೆಂ ದಿಸ್ತಾ, ತಾಕಾಚ್‌ ವೋಟ್‌ ದಿವ್ಯಾಂ.

 2. Gladson Almedia

  ಪ್ರತಿಯೊಬ್ಬರಿಗೂ ಅವರಿಗೆ ಬೇಕಾಗಿರುವ ರಾಜಕೀಯ ನಾಯಕರನ್ನು, ಪಕ್ಷವನ್ನು ಬೆಂಬಲಿಸುವ ಹಕ್ಕಿದೆ. ಪ್ರತಿಯೊಬ್ಬರು ಅಂಥ ಒಂದು ನಿಲುವನ್ನು ತೆಗೆದುಕೊಳ್ಳಲೇಬೇಕು. ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲವೆನ್ನುವವರು ಹಿಪಾಕ್ರಿಟ್ಸ್ ಯಾಕೆಂದರೆ ನಮ್ಮ ದೈನಂದಿನ ಜೀವನದ ಪ್ರತಿಯೊಂದೂ ನಿರ್ಧಾರವಾಗೋದು ದೇಶದ ರಾಜಕೀಯದಿಂದಲೇ. ಹಾಗಾಗಿ ಮತದಾನ ನಮ್ಮ ಹಕ್ಕೆಂದ ಮೇಲೆ, ನಮಗೆ ಬೇಕಾಗುವ ನಾಯಕ, ಪಕ್ಷವನ್ನು ಆರಿಸುವುದು, ಬೆಂಬಲಿಸೋದೂ ನಮ್ಮ ಹಕ್ಕು. ಆದರೆ ಇಂಥದೊಂದು ನಿಲುವ ಸ್ವಂತದ್ದಾಗಿರಬೇಕೇ ಹೊರತು, ಯಾರೋ ಒಬ್ಬರು ನಮ್ಮ ಮೇಲೆ ಹೇರಿದ್ದೋ ಇಲ್ಲವೋ ನಮಗೆ ಮಾರಿದ್ದೋ ಆಗಿರಬಾರದು. ಲಾವಣ್ಯರವರ ಮಾತಿನಲ್ಲಿರುವ ಸ್ಪಷ್ಟತೆ, ತಮ್ಮ ಕ್ಷೇತ್ರದ ಸಂಸದರಿಂದ ಒಬ್ಬ ಮತದಾರೆಯಾಗಿ ಆಕೆ ಏನನ್ನು ನಿರೀಕ್ಷಿಸುತ್ತಿದ್ದಾರೆಂಬ ಖಚಿತ ನಿಲುವು, ಸದ್ಯದ ಸಂಸದರ ಕಳೆದ ಎರಡು ಅವಧಿಗಳಲ್ಲಿ ಏನನ್ನು ಮಾಡಿದ್ದಾರೆ, ಏನನ್ನು ಮಾಡಿಲ್ಲ, ಏನನ್ನು ಮಾಡಬೇಕಾಗಿತ್ತು, ಏನನ್ನು ಮಾಡಬೇಕಾದಿದ್ದಿಲ್ಲವೆಂದು ನೇರವಾಗಿ ಹೇಳುವ ಪರಿ ಅವರ ಜೊಸಿಟಾರ ನಿಲುವುಗಿಂತ ಭಿನ್ನವಾಗಿಸುತ್ತದೆ. ಲಾವಣ್ಯ ತನ್ನ ಮಾತುಗಳಲ್ಲಿ ತನ್ನ ಧರ್ಮ ಯಾವುದು, ವೃತ್ತಿ ಯಾವುದೆಂದು ಹೇಳುವ ಗೋಜಿಗೋಗಿಲ್ಲ ಬಟ್ ತಾನೊಬ್ಬ ವೋಟರೆಂದೇ ಗುರುತಿಸಿಕೊಳ್ಳುತ್ತಾರೆ. ಆದರೆ ಜೊಸಿಟಾರದ್ದು ಸ್ವಂತದ ನಿಲುವಲ್ಲ, ಮಾತುಗಳು ಸ್ಕ್ರಿಪ್ಟೆಡ್. ನಟಿ ಎಂದ ಮೇಲೆ ಸ್ಕ್ರಿಪ್ಟ್ ಇರಲೇಬೇಕು ತಾನೇ? ಹಾಗಾಗಿ ಧರ್ಮ, ವೃತ್ತಿಯನ್ನು ಮಧ್ಯೆ ತಂದು, ತಾನೊಬ್ಬ ಕ್ರಿಶ್ಚಿಯನ್ ಆದರೂ ಬಿಜೆಪಿ, ಮೋದಿಯನ್ನು ಬೆಂಬಲಿಸುತ್ತೇನೆಂದು ಹೇಳಲೇ ವಿಡಿಯೋ ಮಾಡಿದ ಹಾಗಿದೆ. ಕ್ರಿಶ್ಚಿಯನ್ನೊಬ್ಬರು ಮೋದಿಯನ್ನು, ಬಿಜೆಪಿಯನ್ನು ಬೆಂಬಲಿಸಬಾರದೇ, ಬೆಂಬಲಿಸುದಿಲ್ಲವೇ? ಆದರೆ ಮತದಾರನ ಇಂಗಿತಕ್ಕಿಂತ ಮತವನ್ನು ಪಡೆಯುವವನ ಇಂಗಿತವನ್ನು ವ್ಯಕ್ತಪಡಿಸಲು ಹೋಗಿ ತಮ್ಮ ಇಮ್ಮೇಚ್ಯೂರಿಟಿ ಹಾಗೂ ದೇಶದ ಆಗುಹೋಗುಗಳ ಬಗ್ಗೆ ಇರುವ ನಿಕೃಷ್ಟ ಜ್ಞಾನವನ್ನು ಬಹಿರಂಗಗೊಳಿಸಿದ್ದಾರೆ. ನಿಮ್ಮ ಮಾತು ಸರಿಯಾಗಿಯೇ ಇದೆ. ಆಕೆ ಮೋದಿ ಹಾಗೂ ಬಿಜೆಪಿಯನ್ನು ಬೆಂಬಲಿಸಿದ್ದು ತಪ್ಪೇ ಅಲ್ಲ. ಆದು ಅವರ ಆಯ್ಕೆ. ಆದರೆ ಆಕೆಯ ಆಯ್ಕೆಯ ಮಧ್ಯೆ ಆಕೆಯ ಧರ್ಮವನ್ನು ತಂದಿಟ್ಟದ್ದು ತಪ್ಪು. ಬಟ್ ಆಕೆ ಸ್ಕ್ರಿಪ್ಟಿಗೆ ತಕ್ಕ ಹಾಗೆ ನಟನೆ ಮಾಡಿದ್ದಾರಷ್ಟೇ. ಜಾಂವಯ್ No 1 ನಾಯಕ ನಟಿಗೆ ತಾನು ಬೆಂಬಲಿಸುತ್ತಿರುವ ನಾಯಕ ಎಂದೂ ಉತ್ತಮ ಜಾಂವಯ್ ಆಗಲಿಲ್ಲವೆಂಬ ಅರಿವಿದ್ದ ಹಾಗಿಲ್ಲ. ಬಾಟಮ್ ಲೈನ್ ಇಸ್ ಎರಡೂ ಜಾಂವಯ್‍ಗಳು ಫೇಯ್ಲ್, ಒಬ್ಬರು ಬಾಕ್ಸಾಫೀಸ್‍ನಲ್ಲಿ, ಇನ್ನೊಬ್ಬರು ಪಿಎಮ್ಮಾಫೀಸಿನಲ್ಲಿ…

 3. mm
  Naveen Kulshekar

  Opunn ek katholik dhormaci choli poilech pavtim vote galtam ani apnna ho vote Nalin Kumar katilak mhollea ortha bhxen je obhiprai Jositan dileat taka hanv virodh kortam Obhiprai promanne ami katholikanim bjp k vote dizai mhonn, Nalin Kumaran kitem borem kelam tem Tika kollit asa? Mongllurak gorjecheo zai purteo sowloteo asat? Highway number 66 hachem rundavpachem kaam pattlea dha vorsa thavn zavnunch asa ,pumpwel flyover azun zavnk na kitlim accidentamm zatat ani kitlim mornnam zatat, haka zovabdar konn hem to Zanna?

 4. James Fernandes

  There are various ways to get ‘buy one, get two’ publicity.. She gets noticed twice or even thrice here.

 5. Nanu Marol Thottam

  “ Nanna Matha Nanna Dhvanige , Mukhavadakkalla “ – A wonderful article from Oscar Vagga. Although it’s a Congress pro article , Oscar has kept the reality infront of Audience or Voters without any bias.As a responsible citizen of the country it’s a right of every individual to question and reminds the duties of Elected represantatives.It’s unfortunate and bad luck of the people of our Twin districts of Electing Mr Nalin Kumar and Ms Shobha has our represantatives.Honestly if we sit and make a list of their Achievements it’s a big void in their respective profiles .
  Once a person entered into a Public life may it be a politician , A Sports Person or a Artist he or she is having extra responsibility towards Society and they Should be extra careful on this.And I am saddned from the Immature statement by So called Model , Actress Josita.Everybody should feel proud about their first Voting but shouldn’t be like this.Madam ….Whether you vote for Modi , Nalin or Mithun it’s entirely your choice.But don’t advocate us with your false statement.Ist up all your Candidate is Nalin Kumar [ If your residence is in Mangalore ] not for Modi as you mentioned.But unfortunately Nalin Kumar doesn’t have any agenda to justify his 10 years Tenure hence He is making you people as scape goats for their Benefits.Madam when You asking us to not to Look on Caste and Religion Why you are mentioning that You are Roman Catholic.All are Proud Indians made by Simply voting Nalin or Modi nobody will become Proud Indians.What Idea You have about Ayushman Bharat ??? What Idea you have about so called road developments ???? What Idea you have about free Gas connections ???? Can we have some details please Madam ????
  First Look out In your own area Madam.What Action did your MP has taken to stop Illegal Businesses and Activities ???? What action your MP has taken to maintain communal Harmony.Is this is the same MP Who said I will burn South Canara ???? Correct me Madam if I am wrong.What Action your MP has taken for the Good Education specially for Girls.Girls are discontinuing the Education After Failing in 10 or 11th.Is your MP is having any Road Map to stop this ?????? How many IAS or IPS Officers are selected from our Twin Districts ????? Why North Indian People only grabbing the Oportunities ???? Please ask your MP Madam.To be honest madam explaining Development works are not Like reading the Script of Bundle Movies.Next time come well prepared with Facts and Numbers.
  Good Oscar, You had enlighten our younger generation.Your article is a eyeopener for all Voters.Congratulations and keep writing such eye opening articles.
  – Nanu Marol Thottam

 6. mm
  Alphonse Mendonsa

  It’s laughable that a RC lady endorsing Modi without knowing head and tail of his development (if any) and failures (plenty major being demonetisation, GST). She should have checked the facts before uttering such nonsense written speech. The other lady Lavanya spoke on issues putting all the facts to the viewers to judge themselves and vote wisely supporting Congress candidate Mithun Rai..
  Other videos highlights the utter failures of Nalin Kateel. It’s shocking that an useless MP asking to vote for him looking at Modi and not his achievements.
  Finally, as Oscar pointed out, we must vote for that person who works on issues facing us and bring them to the higher authorities to act and not sit tight on them. Yes, his foremost duty must be to work for his people, his constituency and once that goal achieved, worry about National leader.

 7. mm
  ಫಿಲಿಪ್ ಮುದಾರ್ಥಾ

  ಇದು ಒಂದು ಒಳ್ಳೆಯ ಲೇಖನ. ಓದಿ ಸಂತೋಶ ಆಯ್ತು. ಈ ಭಾರಿ ತನ್ನ ವೋಟನ್ನು, ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಕೊಡ್ತೇನೆ; ಯಾಕೆ ಕೊಡ್ತೇನೆ ಎಂದು ಸವಿಸ್ತಾರವಾಗಿ ಬರೆದಿದ್ದಾರೆ. ಆದರೆ, ಇದನ್ನು ಓದಿ ಯಾರ ಮನಸ್ಸು ಬದಲಾಗುತ್ತದೆ? ಬಿಜೆಪಿಗೆ ಶಾಸ್ವತ ಸಮರ್ಪಿತರು ಇದರ ಪ್ರಥಮ ಎರಡು ಪಂಕ್ತಿಗಳನ್ನೂ ಒದದೆ ಮುಂದೆ ಹೋಗುತ್ತಾರೆ ಅದು ಖಚಿತ! ಆ ಕೆಲಸ ಇಲ್ಲದ (ಬೇಲೆ ದಾಂತಿನಾ, ಕಾಮ್ ನಾತ್‌ಲ್ಲ್ಯಾ…) ರೋಮನ್ ಕ್ಯಾಥೊಲಿಕ್ ಹುಡುಗಿಯನ್ನು ಬಳಸಿ, ಸುಶಿಕ್ಷಿತ ಯುವ ಕ್ರೈಸ್ತರು ಕೂಡಾ ತಮ್ಮ ವೋಟನ್ನ ಮೋದಿಯವರು ಪ್ರಧಾನಿ ಆಗಿ ಬರಬೇಕೆಂಬ ಒಂದೇ ಕಾರಣ ಮುಂದಿಟ್ಟು ಬಿಜೆಪಿಗೆ ಕೊಡುತ್ತಾರೆ? ಅಂದು ಹೇಳಿ, ಬಿಜೆಪಿಗೆ ಮತ ಕೊಡದಿದ್ದರೆ ನೀವು ಸುಶಕ್ಶಿತ ಮತ್ತು ನವವಿಚಾರಧಾರೆಯ ಯುವಕರು ಅಲ್ಲ; ಸಾಂಪ್ರದಾಯಿಕ ಆಂತ ಹೇಳಿ ಅದೃಡ ಕ್ರೈಸ್ತರನ್ನು ದಾರಿ ತಪ್ಪಿಸಲು ನೋಡಿದ್ದಾರೆ.
  ಕಾಂಗ್ರೆಸಿನವರು, ಈ ಅದೃಡ ಕ್ರೈಸ್ತರು ಯಾರು? ಅವರು ಮೋದಿಯವರಿಗೆ ಯಾಕೆ ವೋಟು ಕೊಡುತ್ತಾರೆ? ಅವರಿಗೆ ಸರ್ವಾಧಿಕಾರ ಬೇಕಾ? ಅವರಿಗೆ ಎಲ್ಲಿಗೆ ಹೋಗಬೇಕು ? ಯಾವಾಗ ಹೋಗ ಬೇಕು? ಯಾರ ಓಟ್ಟಿಗೆ ಹೊಗಬೇಕು? ಏನು ಊಟ ಮಾಡ ಬೇಕು? ಎಂದು ಬಿಜೆಪಿ ಮತ್ತು ಅವರ 5 – 6 ವೇದಿಕೆಗಳು ಹೇಳ ಬೇಕಾ?, Amnesia pub attack, Padil homestay attack and attacks on Churches ಇನ್ನು 2019 ರಲ್ಲಿ ಬೇಕಾ? ಎಂದು ಆಲೋಚಿಸಬೇಕು. ಹೇಗೆ ವೋಟು ಕಾಂಗ್ರೆಸಿಗೆ ಕೊಟ್ಟಲ್ಲಿ, ಅದು ಗುಲಾಮಗಿರಿ ಅಲ್ಲ, ಕೇಸರಿ ಗುಲಾಮಗಿರಿಯಿಂದ ಮುಕ್ತಾರಾಗುವುದು ಹೇಗೆ? ಈ ಸಂದೇಶ ಮಿಥುನರು ವೀಡಿಯೊ ಮಾಡಿ “non-committed” ಮತದಾರರಿಗೆ ಬಿಡುಗಡೆ ಮಾಡಬೇಕು.

Leave a Reply

Your email address will not be published. Required fields are marked *

Disclaimer : Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kittall.com will not be responsible for any defamatory message posted under this article. Please note that sending false messages to insult, defame, intimidate, mislead or deceive people or to intentionally cause public disorder is punishable under law. It is obligatory on kittall.com to provide the IP address and other details of senders of such comments, to the authority concerned upon request. Hence, sending offensive comments using kittall.com will be purely at your own risk, and in no way will kittall.com be held responsible.

Kindly Share ....Please do not COPY !