ಶಕುಂತಲಾ ಆರ್ ಕಿಣಿ

mm
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.

ಸಂಗೀತಜ್ಞಾನಮು ಭಕ್ತಿ ವಿನಾ

“ಎಲ್ಲಿ ಕೆಲಸ ಮಾಡ್ತಾ ಇದ್ದೀರಿ” ಎನ್ನುವ ಪ್ರಶ್ನೆಗೆ “ಆಕಾಶವಾಣಿಯಲ್ಲಿ” ಅಂತ ಉತ್ತರ ಕೊಟ್ಟರೆ ಸಾಕು “ನೀವು ಹಾಡುಗಾರರಾ”? ಎಂಬ ಪ್ರಶ್ನೆ ಹಿಂಬಾಲಿಸಿ ಬರುವುದು ಸಾಮಾನ್ಯವಾಗಿ ನನ್ನ ವೃತ್ತಿ ಜೀವನದ ಅನುಭವದ ಮಾತು. ಆಕಾಶವಾಣಿ ಅಂದರೆ ಹಾಡುಗಾರರಾಗಿರಬೇಕು ಎನ್ನುವುದು ಜನರ ಸಾಮಾನ್ಯ ತಿಳುವಳಿಕೆ. ಆದರೆ ಸಂಗೀತವೂ ಒಂದು ಶಾಸ್ತ್ರ, ಖುಷಿ ಬಂದಂತೆ ಹಾಡುವಂಥದಲ್ಲ, ಅದಕ್ಕೆ ತಾಳ, ಶ್ರುತಿಗಳ ಲೆಕ್ಕಾಚಾರ ಇದೆ ಅನ್ನುವ ಸಂಗತಿ ನನಗೆ ತಿಳಿದದ್ದು ಆಕಾಶವಾಣಿಗೆ ಸೇರಿದ ಮೇಲೆಯೇ. ಅಲ್ಲದೆ ತನ್ನಷ್ಟಕ್ಕೆ …

Read More »

ಭಾವಗಾನ ತೋರಿದ ಒಲವಿನ ಹಾದಿ

ನನ್ನ “ಬಾನುಲಿ ಬರವಣಿಗೆ” ಎಂಬ ಹಿಂದಿನ ಒಂದು ಕಂತಿನಲ್ಲಿ “ಭಾವಗಾನ”ದ ಬಗ್ಗೆ ಅಲ್ಪಸ್ವಲ್ಪ ಬರೆದಿದ್ದೆ. ಸಮಯ ಸಿಕ್ಕಾಗ ಮತ್ತೆ ವಿಸ್ತಾರವಾಗಿ ಬರೆಯುವೆ ಎಂದೂ ಹೇಳಿದ್ದೆ.1992 ರ ಸುಮಾರಿಗೆ ನಿಲಯನಿರ್ದೇಶಕರಾಗಿ ಬಂದ ಶ್ರೀ ವೆಂಕಟೇಶ ಗೋಡಖಿಂಡಿಯವರು ಸ್ವತಹ “ಎ’ ಶ್ರೇಣಿಯ ಗಾಯಕರು ಹಾಗೂ ಬಾನ್ಸುರಿ ವಾದಕರು. ಅವರು ಮಂಗಳೂರು ಕೇಂದ್ರದ ನಿರ್ದೇಶಕರಾಗಿ ಬಂದ ಮೇಲೆ ಸಂಗೀತದ ಕಾರ್ಯಕ್ರಮಗಳಿಗೆ ಸ್ವಲ್ಪ ಹೆಚ್ಚಿನ ಕಾಯಕಲ್ಪವಾಯಿತು. ಅಲ್ಲದೆ ನಮ್ಮಲ್ಲಿ ಸಾಕಷ್ಟು ಸಂಖ್ಯೆಯ ಸಂಗೀತದ ನಿಲಯದ ಕಲಾವಿದರೂ ನೇಮಕಗೊಂಡ …

Read More »

“ಮಾತುಕತೆ”- ಎಂಬ ಅನುಭವ ಮಂಟಪ

ಪ್ರತಿಯೊಂದನ್ನೂ ಮೊದಲೇ ಬರೆದು ಸಹಿ ಪಡೆದೇ ಪ್ರಸಾರಿಸಬೇಕಾದ ಕಟ್ಟುನಿಟ್ಟಿನ ಶಿಸ್ತುಬದ್ಧ ವ್ಯವಸ್ಥೆಯಲ್ಲಿ 1985ರ ಸುಮಾರಿಗೆ ಅಂತ ನೆನಪು,”ಹರಟೆ’ ಎಂಬ ಅರ್ಧ ಗಂಟೆಯ ಪಟ್ಟಾಂಗದ ಕಾರ್ಯಕ್ರಮವೊಂದು ಅವತರಿಸಿತು. ಈ ಪಟ್ಟಾಂಗದ ಮಾದರಿಯ ಕಾರ್ಯಕ್ರಮ ಆಕಾಶವಾಣಿಯ ಬೇರೆ ನಿಲಯಗಳಲ್ಲಿ ಮೊದಲೇ ಇತ್ತು. ಅಲ್ಲದೆ ನಮ್ಮ ಕೇಂದ್ರದಲ್ಲಿ “ತ್ಯಾಂಪನ ಮಾಹಿತಿ” ಎಂಬ ತುಳು ಹಾಗೂ “ಮಾತಿನ ಮಂಜಣ್ಣ” ಎಂಬ ಕನ್ನಡ ಕಾರ್ಯಕ್ರಮಗಳು ಕೃಷಿರಂಗದಲ್ಲಿ ಪ್ರಸಾರವಾಗುತ್ತಿದ್ದುವು. ಈ ಕಾರ್ಯಕ್ರಮಗಳಲ್ಲಿ ಮಾತಿನ ಮಲ್ಲ ಕೆ.ಆರ್.ರೈಗಳು ತ್ಯಾಂಪಣ್ಣನಾಗಿ, ಕೆ.ಶ್ಯಾಮ ಭಟ್ಟರು …

Read More »

ಬಿಟ್ಟೆನೆಂದರೆ ಬಿಡದೀ ಮಾಯೆ

ನೋಡನೋಡುತ್ತಿದ್ದಂತೆಯೇ ಆಕಾಶವಾಣಿ ಮಂಗಳೂರು ಕೇಂದ್ರದ ದಶಮಾನೋತ್ಸವ ಸಮಾರಂಭ ಮೂರುದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. “ದಶಾಂಗ” ಎಂಬ ಹೆಸರಿನ ಈ ಕಾರ್ಯಕ್ರಮದ ಮೊದಲನೆಯ ದಿನ ಡಾ. ಎಂ. ಬಾಲಮುರಳೀಕೃಷ್ಣ ಅವರ ಹಾಡುಗಾರಿಕೆ, ಎರಡನೆಯ ದಿನ “ನಾಮದ ಬಲವೊಂದಿದ್ದರೆ ಸಾಕೋ’ ಎಂಬ ನಾಟಕ, ಮೂರನೆಯ ದಿನ ಡಾ.ಕೆ.ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ಹಾಗೂ ಅದರ ಬಳಿಕ ಖ್ಯಾತ ಸುಗಮ ಸಂಗೀತ ಕಾರ್ಯಕ್ರಮ – ಹೀಗೆ ಕಿಕ್ಕಿರಿದ ಜನರ ಮುಂದೆ ಪುರಭವನದಲ್ಲಿ ನಡೆದ ಈ …

Read More »

ಬೇಕೆಂದಾಗ ಸಿಗದ ತರಬೇತಿಯ ನುಣುಪು

ಈಗ ಆಕಾಶವಾಣಿಯಲ್ಲಿ ಉದ್ಘೋಷಕರ ಕೆಲಸ ನಿರ್ವಹಿಸಬೇಕೆಂದರೆ ವಾಣಿ ಸರ್ಟಿಫಿಕೇಟ್ ಪಡೆದಿರಬೇಕು. ವಾಣಿ ಸರ್ಟಿಫಿಕೇಟ್ ಅಂದರೆ ಆಕಾಶವಾಣಿಯು ಅಭ್ಯರ್ಥಿಗಳಿಗೆ ಅದು ನಡೆಸುವ ಲಿಖಿತ ಪರೀಕ್ಷೆ, ಧ್ವನಿ ಪರೀಕ್ಷೆ, ಸಂದರ್ಶನಗಳನ್ನು ದಾಟಿ ಬಂದ ಮೇಲೆ ಪ್ರಸಾರ ಪರಿಣತರಿಂದ ಥಿಯರೆಟಿಕಲ್ ಹಾಗೂ ಪ್ರಾಕ್ಟಿಕಲ್ ತರಬೇತಿಯನ್ನು ನೀಡಿದ ಬಳಿಕ ಪ್ರದಾನ ಮಾಡುವ ಪ್ರಮಾಣಪತ್ರ. ಉದ್ಘೋಷಕರ ಧ್ವನಿ ಗಾಳಿಯಲ್ಲಿ ಪ್ರಸಾರವಾಗಬೇಕೆಂದರೆ ಈಗ ಅವಶ್ಯವಾಗಿ ವಾಣಿ ಸರ್ಟಿಫಿಕೇಟ್ ಪಡೆದಿರಲೇ ಬೇಕು. ಆದರೆ ನಾವು ಕೆಲಸಕ್ಕೆ ಸೇರಿದ ಸಮಯದಲ್ಲಿ ನೀರಿಗೆ ಬಿದ್ದಾಗ …

Read More »

ವಾತಾನುಕೂಲಿ ಕೋಣೆಯಿಂದ ಬಯಲಿನ ಬಿಸಿಗೆ

ಆಕಾಶವಾಣಿಯು ವಿಶೇಷ ಸಂದರ್ಭಗಳಲ್ಲಿ ಆಗಾಗ ಆಹ್ವಾನಿತರ ಸಮ್ಮುಖದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಅಲ್ಲಿ ಧ್ವನಿಮುದ್ರಿಸಿದ ಕಾರ್ಯಕ್ರಮಗಳ ಆಯ್ದ ಭಾಗಗಳನ್ನು ನಿಲಯದಿಂದ ನಿಗದಿತ ದಿನ ಹಾಗೂ ಸಮಯಗಳಲ್ಲಿ ಪ್ರಸಾರ ಮಾಡುವ ಕ್ರಮ ಇದೆ. ಆಕಾಶವಾಣಿ ಸಂಗೀತ ಸಮ್ಮೇಳನಗಳು, ರಾಜ್ಯೋತ್ಸವ ಸಂಬಂಧೀ ಗೀತೆಗಳ ಹಾಗೂ ಕವಿಗೋಷ್ಠಿಯ ವಿಶೇಷ ಕಾರ್ಯಕ್ರಮಗಳು, ಆಕಾಶವಾಣಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸುವ ಕಾರ್ಯಕ್ರಮಗಳು, ಪ್ರಾದೇಶಿಕ ಹಾಗೂ ಜಾನಪದ ಸಂಗೀತದ ರಾಷ್ಟ್ರೀಯ ಕಾರ್ಯಕ್ರಮಗಳು, ರಾಜಭಾಷಾ ಹಿಂದಿ ಅನುಷ್ಠಾನ ಸಂಬಂಧೀ ಇಂದ್ರಧನುಷ್ ಕಾರ್ಯಕ್ರಮ, ಆಕಾಶವಾಣಿ ಹಬ್ಬ, …

Read More »

ಸಂಕ್ರಮಣದ ಹೊರಳಾಟದಲ್ಲಿ

ಮದುವೆ, ಮಗು – ಈ ಎರಡೂ ಹೊಸ ಸಂಗತಿಗಳಿಗೆ ನಾನು ಒಗ್ಗಿಕೊಳ್ಳುತ್ತಿದ್ದಂತೆಯೆ ನನ್ನನ್ನು ಆರಂಭದಿಂದ ಬಲ್ಲವರು, ನನ್ನನ್ನು ತಿದ್ದಿ ತೀಡಿದವರು, ತಪ್ಪುಗಳನ್ನು ಮನ್ನಿಸಿ ಒಪ್ಪಿನ ದಾರಿ ತೋರಿದವರು ಒಬ್ಬೊಬ್ಬರೇ ನಿವೃತ್ತಿ, ವರ್ಗಾವಣೆಗಳ ಮೂಲಕ ಹೊರಹೋಗತೊಡಗಿದರು. ಹೊಸಬರ ಪ್ರವೇಶವೂ ಭರದಿಂದ ಆರಂಭವಾಯಿತು. ಕೆಲವು ಹಿರಿಯರು ವರ್ಗಾವಣೆಗಳ ಮೂಲಕ, ಇನ್ನು ಕೆಲವು ಕಿರಿಯರು ಹೊಸ ನೇಮಕಾತಿಯ ಮೂಲಕ ಹಿಂಡು ಹಿಂಡಾಗಿ ಆಕಾಶವಾಣಿಯನ್ನು ಪ್ರವೇಶಿಸಿದರು. ದೊಡ್ಡ ದೊಡ್ಡ ವಟವೃಕ್ಷಗಳ ನೆರಳಿನಲ್ಲಿ ಕಿರು ಸಸಿಯಂತಿದ್ದ ನನ್ನ …

Read More »

ಪಾಳಿಯ ಜೋಳಿಗೆಯಲ್ಲಿ ಕಂದಯ್ಯನ ಕೇಕೆ

ಆಕಾಶವಾಣಿಯ ಕೆಲಸಗಳು ಒಂದೊಂದೇ ಕರಗತವಾಗುತ್ತಾ ಹೋಗುತ್ತಿದ್ದಂತೆ ನಾನು ನಿರಾಳವಾಗುತ್ತಲಿದ್ದೆ. ಆದರೆ ನನ್ನ ಉದ್ಯೋಗಪರ್ವಕ್ಕೂ ಮುನ್ನವೇ ನನ್ನ ಜಾತಕ ಹಿಡಿದು ಅಲೆಯುತ್ತಿದ್ದ ಅಪ್ಪಯ್ಯನ ವರಬೇಟೆ ಇನ್ನಷ್ಟು ಹೆಚ್ಚಾಯಿತು. ಕೆಲವು ವರ ಮಹಾಶಯರು ಹುಡುಗಿ ಕಲಿತದ್ದು ನಮಗೆ ಜಾಸ್ತಿಯಾಯಿತು ಅನ್ನುವ ಆಕ್ಷೇಪ ಎತ್ತಿದರೆ ಬ್ಯಾಂಕ್ ಉದ್ಯೋಗದಷ್ಟು ವರ್ಗಾವಣೆಯ ಅವಕಾಶಗಳು ಆಕಾಶವಾಣಿಯ ಉದ್ಯೋಗದಲ್ಲಿ ಇಲ್ಲದ ಕಾರಣ ಬ್ಯಾಂಕ್ ಉದ್ಯೋಗಿ ವರ ಮಹಾಶಯರು ಮೂತಿ ತಿರುವಿದರು. ಕಲಿತು ಕೆಲಸದಲ್ಲಿರುವ ಹುಡುಗಿ ಅಡುಗೆ ಮಾಡಿಯಾಳೇ, ನಮ್ಮ ಮಾತು ಕೇಳಿಯಾಳೇ …

Read More »

ಧ್ವನಿ ತರಂಗಗಳಾಗಿ ಗಾಳಿಯಲ್ಲಿ ಲೀನವಾದ ಬಾನುಲಿ ಬರವಣಿಗೆ

ನಾನು ಸೇರಿದ ಕೆಲವು ದಿನಗಳಲ್ಲೆ ಪ್ರತಿದಿನ ಮಧ್ಯಾನ್ಹ ಒಂದುಗಂಟೆ ಮೂವತ್ತೈದು ನಿಮಿಷಕ್ಕೆ ಚಿತ್ರಗೀತೆಗಳ ನಡುವೆ ಐದು ನಿಮಿಷಗಳ ಅವಧಿಯ”ಸಕಾಲಿಕ” ಎಂಬ ಶೀರ್ಷಿಕೆಯ ಒಂದು ಹೊಸ ಕಾರ್ಯಕ್ರಮ ಆರಂಭವಾಗಿ ಆಯಾ ದಿನದ ವೈಶಿಷ್ಟ್ಯ ಅಥವಾ ಆ ದಿನಗಳಲ್ಲಿನ ಪ್ರಚಲಿತ ವಿದ್ಯಮಾನಗಳ ಕುರಿತು ಬರೆದು ಅದನ್ನು ಪ್ರಸ್ತುತಪಡಿಸುವ ಹೊಣೆ ದಿನಕ್ಕೊಬ್ಬರಿಗೆ ಹಂಚಿಹಾಕಿದ್ದರು. ಆ ಕಾರ್ಯಕ್ರಮ ನನಗೂ ಪಾಳಿಯಂತೆ ಹತ್ತು ಹದಿನೈದು ದಿನಕ್ಕೊಮ್ಮೆ ಮಾಡಲು ಸಿಗುತ್ತಿತ್ತು. ಈ ಸಕಾಲಿಕದ ದೆಸೆಯಿಂದ ಹಲವಾರು ವಿಷಯಗಳ ಕುರಿತು …

Read More »