ಶಕುಂತಲಾ ಆರ್ ಕಿಣಿ

mm
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.

ಕರ್ತವ್ಯ ಕೊಠಡಿಯ ನೆನಪುಗಳು

ಕರ್ತವ್ಯ ಕೊಠಡಿ ಆಕಾಶವಾಣಿಯ ಪ್ರಮುಖ ಅಂಗಗಳಲ್ಲಿ ಒಂದು. ಇಲ್ಲಿ ಬೆಳಗ್ಗೆ ಐದು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆ ಇಪ್ಪತ್ತು ನಿಮಿಷದವರೆಗೂ ಕರ್ತವ್ಯದಲ್ಲಿರುವವರು ಪಾಳಿಯ ಪ್ರಕಾರ ಕೆಲಸ ಮಾಡುತ್ತಿರುತ್ತಾರೆ. ಕರ್ತವ್ಯ ಕೊಠಡಿ ಅನ್ನುವುದು ಆಕಾಶವಾಣಿಯ ಹೃದಯವಿದ್ದಂತೆ. ಹೇಗೆ ದೇಹದ ಎಲ್ಲ ನರನಾಡಿಗಳೂ ರಕ್ತ ಸರಬರಾಜಿನ ವ್ಯವಸ್ಥೆಯಲ್ಲಿ ಹೃದಯದ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತವೆಯೋ ಹಾಗೆ ಆಕಾಶವಾಣಿಯ ಎಲ್ಲ ವಿಭಾಗದವರೂ ಕರ್ತವ್ಯಕೊಠಡಿಯ ಜೊತೆ ಅನಿವಾರ್ಯವಾಗಿ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಆಡಳಿತ ವಿಭಾಗದವರು ಆಯಾದಿನದ ಬಟವಾಡೆಯಾಗುವ ಚೆಕ್ ಗಳನ್ನು …

Read More »

ಪಾಳಿಯ ಬದುಕಿನ ನೋವು ನಲಿವು

ನನ್ನ ಸಂದರ್ಶನದ ಸಮಯದಲ್ಲಿ ನನ್ನಲ್ಲಿ ಕೇಳಲಾದ ಪ್ರಶ್ನೆಗಳಲ್ಲೊಂದು -“ಇಲ್ಲಿಯ ಶಿಫ್ಟ್ ಗಳಿಗೆ ಹೊಂದಿಕೊಂಡು ಕೆಲಸ ಮಾಡಬಹುದೇ?” ಎಂಬುದಾಗಿ. ನಾನೋ ಕೆಲಸ ಸಿಗುವುದಾದರೆ ಶಿಫ್ಟೇ ಏಕೆ, ಇಪ್ಪತ್ತನಾಲ್ಕುಗಂಟೆಯೂ ಕೆಲಸ ಮಾಡಲು ಸಿದ್ಧ ಎಂಬಷ್ಟು ಉತ್ಸಾಹದಲ್ಲಿದ್ದೆ. ಆದರೆ ಶಿಫ್ಟಿನ ನಿಜವಾದ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಕೆಲಸಕ್ಕೆ ಸೇರಿದ ಮೇಲೆಯೇ ಅರಿವಾದದ್ದು. ಎಲ್ಲಕ್ಕೂ ಮೊದಲು ಒಂದು ಅಲರಾಂ ಗಡಿಯಾರವನ್ನು ಸಂಪಾದಿಸಿಕೊಂಡೆ. ಕರ್ಣಕಠೋರವಾದ ಸದ್ದನ್ನು ಹೊರಡಿಸುತ್ತಿದ್ದ ಆ ಗಡಿಯಾರ ನನ್ನನ್ನು ಮಾತ್ರವಲ್ಲ, ಹಾಸ್ಟೆಲಿನ ನನ್ನ …

Read More »

ಕೊಂಕಣಿಯ ಕಂಕಣ ತೊಟ್ಟು

ಆಕಾಶವಾಣಿಯ ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗಲೇ, ಕೊಂಕಣಿ ಭಾಷಾಜ್ಞಾನ ಅಪೇಕ್ಷಣೀಯ ಎಂಬ ಒಂದು ಉಪವಾಕ್ಯ ಅದರಲ್ಲಿತ್ತು. ಅದಕ್ಕೆ ತಕ್ಕಂತೆ ನನ್ನನ್ನು ಕೊಂಕಣಿ ವಿಭಾಗಕ್ಕೆ ಸಹಾಯಕಿಯಾಗಿ ವಾರದಲ್ಲೆರಡು ದಿನ ಕೆಲಸ ಮಾಡುವಂತೆ ಡ್ಯೂಟಿಚಾರ್ಟಿನಲ್ಲಿ ತೋರಿಸಲಾಗುತ್ತಿತ್ತು. ಆಗ ಕೊಂಕಣಿ ವಿಭಾಗದ ಮುಖ್ಯಸ್ಥರಾಗಿದ್ದವರು ಶ್ರೀ ಚೇತನ್ ಕುಮಾರ್ ನಾಯ್ಕ್ ಅವರು. ಕಾರವಾರ ಕಡೆಯವರು. ಅವರ ಕೊಂಕಣಿಗೂ ನನ್ನ ಕೊಂಕಣಿಗೂ ಸ್ವಲ್ಪ ವ್ಯತ್ಯಾಸವಿತ್ತು. ತುಂಬಾ ಹಾಸ್ಯ ಪ್ರವೃತ್ತಿಯವರು. ಎಂಥ ಗಂಭೀರ ಸನ್ನಿವೇಶದಲ್ಲೂ ನಗಿಸಿ ಹಗುರಾಗಿಸುವ ಕಲೆಗಾರಿಕೆ ಅವರದು. …

Read More »

ಬಾನುಲಿ ಎಂಬ ಜೀವನ ಶಾಲೆ

ಇನ್ನೂ ನಾನು ನನ್ನ ಉದ್ಘೋಷಣೆಯ ಹಾಗೂ ಪಾಳಿಯ ಕೆಲಸಗಳನ್ನು ಕಲಿಯುತ್ತಿದ್ದಂತೆ ಬೇರೆ ವಿಭಾಗಗಳಲ್ಲೂ ಕೆಲಸ ಮಾಡುವ ಅವಕಾಶಗಳು ಒಂದರ ಹಿಂದೆ ಒಂದರಂತೆ ಬರುತ್ತಿದ್ದುವು.ಬೇಸರ,ಬಿಗುಮಾನವಿಲ್ಲದೆ ಅವುಗಳನ್ನು ನಾನು ಸ್ವೀಕರಿಸುತ್ತಾ ಹೋದೆ. ಆಗ ತುಂಬಾ ನಾಟಕಗಳು ನಿರ್ಮಾಣವಾಗುತ್ತಿದ್ದುವು. ಕೆ.ಆರ್.ರೈಗಳು ಆರೋಗ್ಯಜಾಗೃತಿಯನ್ನು ಕುರಿತು  ತುಳುವಿನಲ್ಲಿ ಬರೆದ “ಗಿಲೀಟಿನ ಮಾಲು” ಎಂಬ ನಾಟಕದಲ್ಲಿ ಮಗುವಿನ ಪ್ರಾಣಾಂತಿಕ ಸ್ಥಿತಿಯಲ್ಲಿ ಅಳುವ ತಾಯಿಯಾಗಿ ನನ್ನನ್ನು ಅಭಿನಯಿಸುವಂತೆ ಕೇಳಿಕೊಂಡರು.ಸುಮ್ಮನೆ ಅಳುವುದು ಎಷ್ಟು ಕಷ್ಟವೆಂದು ಅವತ್ತೇ ಗೊತ್ತಾದದ್ದು.ಬಾಯಿಗೆ ಸೆರಗು ಅಡ್ಡ ಹಿಡಿದು ನಕ್ಕಿದ್ದೇ …

Read More »

ಉದ್ಘೋಷಣೆಯ ಮೊದಲ ಪಾಠಗಳು

ಕೆ.ಆರ್.ರೈಗಳು ತುಂಬ ಹೃದ್ಯವಾಗಿ ಕೆಲಸವನ್ನು ಕಲಿಸಿಕೊಟ್ಟರು.ಆದರೂ ಅದರಲ್ಲಿ ನಯಗಾರಿಕೆಯನ್ನು ತುಂಬಿದವರು ಹಲವರು.ನಾನು ಕೆಲಸಕ್ಕೆ ಸೇರಿದ ದಿನಗಳಲ್ಲಿ ನಮ್ಮ ಉದ್ಘೋಷಕರಲ್ಲಿ ಹಿರಿಯರಾದ ಶಂಕರ್ ಭಟ್,ಕೆ.ಟಿ.ಕೃಷ್ಣಕಾಂತ್ ಮುಂತಾದವರು ಕೆಲವು ದಿನ ರಜೆಯಲ್ಲಿದ್ದ ಕಾರಣ ,ಕರ್ತವ್ಯಾಧಿಕಾರಿಗಳಾಗಿದ್ದ ಎಚ್.ಸಿ.ವೆಂಕಟೇಶ್ ಎಂಬವರು ಅನೌನ್ಸರ್ ಕೆಲಸವನ್ನು ಮಾಡುತ್ತಿದ್ದರು.ಅವರು ಪ್ರಸಾರದ ಹಲವು ಸೂಕ್ಷ್ಮಗಳನ್ನು,ಉದ್ಘೋಷಣೆಯಲ್ಲಿ ಮಾಡಬೇಕಾದ ಸ್ವರದ  ಏರಿಳಿತಗಳ ಬಗ್ಗೆ ಹೇಳಿಕೊಟ್ಟರು.ಅಷ್ಟೇ ಅಲ್ಲದೆ ಹಳ್ಳಿಯಿಂದ ಬಂದ  ಮೊದ್ದುಮಣಿಯಂತಿದ್ದ ನನಗೆ ಪಟ್ಟಣದ ಕೆಲವು ಶಿಷ್ಟಾಚಾರಗಳನ್ನು,ಡ್ಯೂಟಿರೂಮಿನ ದೂರವಾಣಿ ಕರೆಗಳನ್ನು ಸ್ವೀಕರಿಸುವುದು,ನಯವಾಗಿ ಉತ್ತರಿಸುವುದು ಇತ್ಯಾದಿಗಳನ್ನು ಕಿರಿಯ ತಂಗಿಗೆ …

Read More »

ತಂತಿರೂಪದಲ್ಲಿ ಬಂದ ಭಾಗ್ಯದ ಸಂದೇಶ.

ಮೇ ತಿಂಗಳ ಉರಿಬಿಸಿಲಿನ ಸಮಯ. ನಮ್ಮ ಹಳ್ಳಿಯಲ್ಲಿ ಮನೆ ಮನೆಯಲ್ಲೂ ಹಲಸಿನಕಾಯಿ ಹಪ್ಪಳ ಮಾಡುವ ತರಾತುರಿ. ಯಾಕೆಂದರೆ ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಕರಿಮೋಡ ಕಾಣಿಸಿಕೊಂಡು ಆತಂಕ ಮೂಡಿಸುತ್ತಿತ್ತು. ಬಲಿತ ಹಲಸಿನಕಾಯಿಗಳನ್ನು ಆದಷ್ಟು ಬೇಗ ಹಪ್ಪಳವಾಗಿಸಿ ಅಮ್ಮನ ಡಬ್ಬಗಳಲ್ಲಿ ಶೇಖರಿಸಿಟ್ಟುಕೊಳ್ಳದೇ ಹೋದಲ್ಲಿ ಮಳೆಗಾಲದಲ್ಲಿ ಹಾಗೂ ವರ್ಷವಿಡೀ ನಮಗೆ ಹಳ್ಳಿಯಲ್ಲಿ ಯಾರೇ ನೆಂಟರು ಬರಲಿ, ಮನೆಮಕ್ಕಳಿಗೇ ಇರಲಿ ದಿಢೀರ್ ಎಂದು ಒದಗುವ ಏಕೈಕ ಆಪ್ತರಕ್ಷಕ ಕುರುಕಲು ತಿಂಡಿಯಾದ ಹಪ್ಪಳವನ್ನು ಮಾಡಿ ಶೇಖರಿಸಲು ಕಷ್ಟವಾಗುತ್ತಿತ್ತು. ಪೇಟೆಯಲ್ಲಿರುವ …

Read More »

ಕನಸುಗಳ ಬೆನ್ನಟ್ಟಿ ಕದ್ರಿಗುಡ್ಡದತ್ತ.

ಗಿರಿಜಾ ಆಕಾಶವಾಣಿಯ ಉದ್ಯೋಗದ ಬಗ್ಗೆ ಹೇಳಿದಾಗ ಅದು ಯಾವ ರೀತಿಯ ಕೆಲಸ,ಏನು,ಎತ್ತ ಎಂದು ಒಂದೂ ತಿಳಿದರಲಿಲ್ಲ. ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ,ಮಾತನಾಡುವ ಕೆಲಸ,ಲೆಕ್ಕಪಕ್ಕ ಬರೆಯುವಂಥದಲ್ಲ ಇತ್ಯಾದಿ ಆಕೆ ಹೇಳಿದ್ದರೂ ನಿಜವಾದ ಕೆಲಸದ ಸ್ವರೂಪ ತಿಳಿದಿರಲಿಲ್ಲ.ಆದರೂ ಪೂರ್ಣಕಾಲಿಕವಾದ ಸ್ಥಿರ ಉದ್ಯೋಗ ಅನ್ನುವುದಷ್ಟೇ ನನಗೆ ಮುಖ್ಯವಾಗಿತ್ತು.ಅಕೌಂಟ್ಸ್ ಬರೆಯುವ ಕೆಲಸ ಅಲ್ಲ ಅನ್ನುವುದು ಇನ್ನೊಂದು ಸಮಾಧಾನಕರ ಅಂಶವಾಗಿತ್ತು.ಯಾಕೆಂದರೆ ಎಸ್.ಎಸ್.ಎಲ್.ಸಿ ಯಲ್ಲಿ ಗಣಿತವನ್ನು ಮೂಗಿಗೆ ಕೈ ಹಿಡಿದು ಪಾಸಾದ ಕಷ್ಟ ನನಗೆ ಮಾತ್ರ ಗೊತ್ತು.ಅಲ್ಲದೆ ಕೊಂಕಣಿಭಾಷಾ ಜ್ನಾನ ಅಪೇಕ್ಷಣೀಯ …

Read More »

ಎಲ್ಲಿಗೆ ಪಯಣ ಯಾವುದೋ ದಾರಿ

ಕಳೆದ ಕಂತಿನಲ್ಲಿ ವಸುಂಧರಾ ಎಂಬವರು ನನ್ನ ಮೇಲೆ ಬೀರಿದ ಪ್ರಭಾವದ ಬಗ್ಗೆ ಬರೆದಿದ್ದೆ. ಯುವವಾಣಿ ಕಾರ್ಯಕ್ರಮ ನೀಡಿ ಬಂದ ಮೇಲೆ ಕಾರ್ಯಕ್ರಮ ಪ್ರಸಾರ ಆಗುವ ವರೆಗೆ ಮಾತ್ರ ಆ ಗುಂಗು ಎಂದು ಭಾವಿಸಿದ್ದೆ. ಆದರೆ ಅದು ಅಲ್ಲಿಗೇ ನಿಲ್ಲಲಿಲ್ಲ. ಸ್ನಾತಕೋತ್ತರ ಪದವಿ ಮುಗಿದ ಕೂಡಲೇ ನಾನು ಮಾಡಿದ ಮೊದಲ ಕೆಲಸವೆಂದರೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಕೆಲಸಕ್ಕಾಗಿ ಅರ್ಜಿ ಗುಜರಾಯಿಸಿದ್ದು. ಆ ಕೆಲಸ ನನಗೆ ಸೂಕ್ತವಾದದ್ದೆ, ಇಲ್ಲವೇ ಎಂದು ಕೂಡಾ ನೋಡಲಿಲ್ಲ. ಒಟ್ಟಿನಲ್ಲಿ …

Read More »

ಮೊದಲ ಪ್ರೇರಣೆಗಳು

ನನ್ನ ಅಮ್ಮನ ಹದಿನಾಲ್ಕು ಬಾಣಂತನಗಳಲ್ಲಿ ಚೊಚ್ಚಲ ಹಾಗೂ ನಡುವಿನ ಒಂದೆರಡು ಮಕ್ಕಳು ಗತಿಸಿದ ಕಾರಣ, ಉಳಿದವರಲ್ಲಿ ನಾನು ಎಂಟನೆಯ ಸಂತಾನ. ಮೊದಲ ನಾಲ್ಕು ಗಂಡು ಮಕ್ಕಳು, ಮತ್ತೆ ಹುಟ್ಟಿದ ಮೂವರು ಹೆಣ್ಣುಮಕ್ಕಳ ಬೆನ್ನಿಗೆ ಹುಟ್ಟಿದ ಹೆಣ್ಣುಮಗು ನಾನು. ಆದುದರಿಂದ ನನ್ನ ಹುಟ್ಟು ಅಂಥ ಸಂಭ್ರಮಿಸುವ ಸಂಗತಿಯಾಗಿರಲಿಲ್ಲ. ಮನೆ ತುಂಬ ಮಕ್ಕಳು, ನೆಂಟರು, ಅವಿಭಕ್ತ ಕುಟುಂಬದ ಸದಸ್ಯರ ನಡುವೆ ಹತ್ತರಲ್ಲಿ ಹನ್ನೊಂದಾಗಿ ನಾನು ಬೆಳೆದೆ. ಹುಟ್ಟಿ ಎಷ್ಟೋ ವರ್ಷಗಳ ವರೆಗೆ ನನ್ನ ಹುಟ್ಟಿದ …

Read More »