ಕೊಂಕಣಿ ನಾಟಕ ಸಭಾ ವಾರ್ಷಿಕೋತ್ಸವ ಸಂಭ್ರಮ

ಕೊಂಕಣಿ ನಾಟಕ ಸಭಾ (ರಿ) ಮಂಗಳೂರು, ಇದರ 80ನೇ ವಾರ್ಷಿಕೋತ್ಸವವು ಡೊನ್ ಬೊಸ್ಕೊ ಹೊಲ್ ನಲ್ಲಿ ದಿನಾಂಕ 24.09.2023ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೊಂಕಣಿ ನಾಟಕ ಸಭಾದ ಅಧ್ಯಕ್ಷರಾದ ವಂ| ಡೊ| ರೊಕಿ ಡಿಕುನ್ಹಾ ಕಾಪುಚಿನ್ ರವರು ವಹಿಸಿದ್ದರು. ಮಂಗಳೂರು ಕಥೊಲಿಕ್ ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಎಲೋಶಿಯಸ್ ಪಾವ್ಲ್ ಡಿಸೊಜಾರವರು ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಕೊಂಕಣಿ ನಾಟಕ ಸಭಾದ ನಿಕಟಪೂರ್ವ ಅಧ್ಯಕ್ಷ ಹಾಗೂ ಮೈಸೂರಿನ ಕೃಪಾಲಯದ ರೆಕ್ಟರ್ ವಂ| ಡೊ| ಪಾವ್ಲ್ ಮೆಲ್ವಿನ್ ಡಿಸೊಜಾ ಕಾಪುಚಿನ್, ಅನಿವಾಸಿ ಉದ್ಯಮಿ ಶ್ರೀ ಕ್ಲೇವಿ ಲಿಯೊ ರೊಡ್ರಿಗಸ್, ದಾಯ್ಜಿವರ್ಲ್ದ್ ಮೀಡಿಯಾದ ಶ್ರೀ ವಾಲ್ಟರ್ ನಂದಳಿಕೆ ಮತ್ತು ಉದ್ಯಮಿ ಶ್ರೀ ಸಂತೋಷ್ ಸಿಕ್ವೇರಾರವರು ಅತಿಥಿ‍ಗಳಾಗಿ ಭಾಗವಹಿಸಿದ್ದರು.

ಕೊಂಕಣಿ ನಾಟಕ ಸಭಾದ ಉಪಾಧ್ಯಕ್ಷ ಶ್ರೀ ಲಿಸ್ಟನ್ ಡಿಸೊಜಾ ಸ್ವಾಗತಿಸಿದರು. ಸಭಾದ ಕಾರ್ಯಾದರ್ಶಿ ಶ್ರೀ ಫ್ಲಾಯ್ಡ್ ಡಿಮೆಲ್ಲೊ ವರದಿ ವಾಚಿಸಿ, ಕೋಶಾಧಿಕಾರಿ ಶ್ರೀ ಜೆರಾಲ್ಡ್ ಕೊನ್ಸೆಸೊ ವಂದನಾರ್ಪಣೆ ಗೈದರು. ಸಹಾಯಕ ಕಾರ್ಯಾದರ್ಶಿ ಶ್ರೀ ಕ್ಲೀಟಸ್ ಲೋಬೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

2023 ವರ್ಷದ ಕಲಾಕಾರ್ ಪುರಾಸ್ಕರವನ್ನು ಜೆಪ್ಪು ಸೆಮಿನರಿಯ ವಂ| ಡೊ| ರೊನಾಲ್ಡ್ ಸೆರಾವೊ, ಖ್ಯಾತ ನಾಟಕಕಾರ ಶ್ರೀ ಪ್ರಾನ್ಸಿಸ್ ಫೆರ್ನಾಂಡಿಸ್ ಮತ್ತು ಸಂಗೀತಗಾರ ಹಾಗೂ ನಟ ಶ್ರೀ ಪ್ರೇಮ್ ಕುಮಾರ್, ನಂದಿಗುಡ್ಡಾರವರಿಗೆ ಪ್ರಧಾನ ಮಾಡಲಾಯಿತು. ಕೊಂಕಣಿ ನಾಟಕ ಸಭೆಗಾಗಿ ದೀರ್ಘ ಸೇವೆ ಸಲ್ಲಿಸಿದ್ದ 8 ವ್ಯಕ್ತಿ ಗಳನ್ನು ಸನ್ಮಾನಿಸಲಾಯಿತು.

Related posts

ವಿಶ್ವ ಕೊಂಕಣಿ ಕೇಂದ್ರಾಂತ್ ಸಿ.ಎ. ಪವರ್ 25 ಶಿಬಿರ

ವಿಶ್ವ ಕೊಂಕಣಿ ಕೇಂದ್ರ್ : ವಿಶ್ವಸ್ಥ ಮಂಡಳಿಕ್ ವಿಂಚವ್ಣ್  

ಮ್ಯಾಂಗಲೋರ್ ಕೊಂಕಣ್ಸ್ ದುಬೈ ಸಾದರ್ ಕರ್ತಾ , ಫ್ಯಾಮಿಲಿ ಫಿಯೆಸ್ಟಾ 2024