ನಮ್ಮ ಹಕ್ಕುಗಳ ಅರಿವು , ಇತರರ ಹಕ್ಕುಗಳಿಗೆ ಗೌರವ ; ನಿಜವಾದ ಸ್ವಾತಂತ್ರ್ಯ – ಜೋಸೆಫ್ ಮಥಾಯಸ್

“ನಮ್ಮ ದೇಶ ಸ್ವತಂತ್ರವಾಗಿ 76  ವರ್ಷಗಳೇ ಕಳೆದಿವೆ. ನಮ್ಮ ದೇಶ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ‍ಗಳಲ್ಲೊಂದು ಎಂಬುದು ಹೆಮ್ಮೆಯ ವಿಚಾರ.  ಆದರೆ ಇಂದು ನಾವೆಷ್ಟು ಸ್ವತಂತ್ರರು ?   ಎಂದು ಅತ್ಮಾವಲೋಕನ ಮಾಡಲು ಹೊರಟರೆ  ಅತ್ಯಾಚಾರ, ದರೋಡೆ, ಕೊಲೆ ಮತ್ತು ಭ್ರಶ್ಟಾಚಾರ ದೇಶದಲ್ಲಿ ತಾಂಡವವಾಡುತ್ತಿರುವಾಗ ಸ್ವ್ಯಾತಂತ್ರ್ಯದ ಸಫಲತೆಯ ಬಗ್ಗೆ ಮಾತನಾಡಲು ಧೈರ್ಯ ಸಾಲುವುದಿಲ್ಲ.  ವರ್ಷಕ್ಕೊಮ್ಮೆ ಧ್ವಜಾರೋಹಣ ಮಾಡುವುದರಿಂದ ಸ್ವಾತಂತ್ರ್ಯ ಸಾರ್ಥಕವಾಗುವುದಿಲ್ಲ. ಮೊತ್ತ ಮೊದಲು ನಾವು ನಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು ಮತ್ತು ಇತರರ ಹಕ್ಕುಗಳನು ಗೌರವಿಸುವುದನ್ನು ಕಲಿಯಬೇಕು. ಇನ್ನೊಬ್ಬರನ್ನು ಪ್ರಶ್ನಾರ್ಹರನ್ನಾಗಿಸುವ ಮೊದಲು  ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಕೆಟ್ಟ ಚಟಗಳಿಂದ ದೂರವಿದ್ದು, ದೇಶ ನನಗೇನು ಮಾಡಿದೆ  ಎನ್ನುವುದರ ಬದಲು ದೇಶಕ್ಕಾಗಿ ನಮ್ಮಿಂದೇನು ಮಾಡುವುದು ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ಯೋಚಿಸಬೇಕು.  ಆಗ ಮಾತ್ರ ನಮ್ಮ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ.” ಎಂದು ಅನಿವಾಸಿ ಉದ್ಯಮಿ, ಗಾಯಕ, ನಟ ಮತ್ತು ಕೊಡುಗೈ ದಾನಿ  ಶ್ರೀ ಜೋಸೆಫ್ ಮಥಾಯಸ್ ಅಭಿಪ್ರಾಯಪಟ್ಟರು.

ಶ್ರೀ ಮಥಾಯಸ್ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಯುವಮಂಡಲ ಪ್ರಶಸ್ತಿ ವಿಜೇತ ಅಶೋಕನಗರ ಯುವಕ ಸಂಘ(ರಿ) ಇವರು ಮಂಗಳವಾರ, ಅಗೋಸ್ತ್ 15  ರಂದು ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ 2023 ರ ಸಾಲಿನ  ಸ್ವಾತಂತ್ರ್ಯ ದಿನಾಚರಣೆ ಮತ್ತು ಫಲಾನುಭವಿಗಳಿಗೆ ವೈದ್ಯಕೀಯ ನೆರವು, ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಹಿರಿಯ ನಾಗರಿಕರಿಗೆ ಸೀರೆ – ಧೋತಿ  ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಳೆದ 16  ವರ್ಷಗಳಿಂದ ಶ್ರಿ ಜೋಸೆಫ್ ಮಥಾಯಸ್, ಅಶೋಕನಗರ ಯುವಕ ಸಂಘ(ರಿ) ಇವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುವ ವೈದ್ಯಕೀಯ ನೆರವು, ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಹಿರಿಯ ನಾಗರಿಕರಿಗೆ ಸೀರೆ – ಧೋತಿ ವಿತರಣೆಯ ಜೊತೆಗೆ ಗಾಲಿಕುರ್ಚಿ, ಜೀವನೋಪಾಯಕ್ಕಾಗಿ ಸೈಕಲ್ ಮತ್ತು ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆಯ ಪೋಷಕರಾಗಿದ್ದಾರೆ. ಯೋಜನೆಯ ಆರಂಭದಲ್ಲಿ ಸಾಥ್ ನೀಡಿದ ಹೆನ್ರಿ ಡಿ’ಸೊಜಾರವರು 2018ರಲ್ಲಿ ದೈವಾಧೀನರಾದ ನಂತರ ಯೋಜನೆಯ ಸಂಪೂರ್ಣ ಪ್ರಾಯೋಜಕತ್ವವನ್ನು ಶ್ರೀ ಜೋಸೆಫ್ ಮಥಾಯಸ್ ಅವರೇ ವಹಿಸಿಕೊಂಡು ತಮ್ಮ ಮಾತಾ – ಪಿತರಾದ ದಿ| ಮೇರಿ ಮಥಾಯಸ್ ಮತ್ತು ದಿ| ಲೋರೆನ್ಸ್ ಮಥಾಯಸ್ ಇವರ ಸ್ಮರಣಾರ್ಥ ವಿತರಣೆಯನ್ನು ಮುಂದುವರಿಸಿಕೊಂಡು ಬಂದಿರುತ್ತಾರೆ.

1961  ರಲ್ಲಿ ಆರಂಭವಾಗಿ, 1991 ರಲ್ಲಿ ನೋಂದಾವಣೆಯಾಗಿ, 1986  ರಲ್ಲಿ ಬೆಳ್ಳಿಹಬ್ಬ ಮತ್ತು 2011  ರಲ್ಲಿ ಸುವರ್ಣ ಸಂಭ್ರಮವನ್ನು ಆಚರಿಸಿರುವ ಅಶೋಕನಗರ ಯುವಕ ಸಂಘ(ರಿ) 2013 ರಲ್ಲಿ, ಭಾರತ ಸರಕಾರದ  ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವಕ ಕೇಂದ್ರ ಮಂಗಳೂರು ಇವರಿಂದ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಯುವಮಂಡಲ ಪ್ರಶಸ್ತಿಗೆ ಭಾಜನವಾಗಿರುತ್ತದೆ.  ಕಳೆದ 26 ವರ್ಷಗಳಿಂದ ವೈದ್ಯಕೀಯ ನೆರವು, ಗಾಲಿಕುರ್ಚಿ, ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಹಿರಿಯ ನಾಗರಿಕರಿಗೆ ಸೀರೆ – ಧೋತಿ ಮತ್ತು ಜೀವನೋಪಾಯಕ್ಕಾಗಿ ಸೈಕಲ್, ಹೊಲಿಗೆಯಂತ್ರ ವಿತರಣೆ ಇವೇ ಮುಂತಾದ ಸಮಾಜಮುಖಿ ಕೆಲಸಗಳನ್ನು ಅಶೋಕನಗರ ಯುವಕ ಸಂಘ(ರಿ) ಮಾಡುತ್ತಾ ಬಂದಿದ್ದು, ಶ್ರೀ ಜೋಸೆಫ್ ಮಥಾಯಸ್ ಅವರು ಈ ಯೋಜನೆಯಲ್ಲಿ 16  ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವುದಲ್ಲದೇ, ಪ್ರತೀ ವರ್ಷ ಅಗೋಸ್ತ್ 15 ರಂದು ಕಾರ್ಯಕ್ರಮಕ್ಕಾಗಿಯೇ ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಾರೆ  ಎಂಬ ವಿವರವನ್ನು ಶ್ರೀ ಚೇತನ್ ಕುಮಾರ್ ತಮ್ಮ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣದಲ್ಲಿ ನೀಡಿದರು.

ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಉದ್ಯಮಿ, ಸಮಾಜಸೇವಕ ಮತ್ತು ಕರಾವಳಿಯ ಖ್ಯಾತ ನಿರೂಪಕ ಶ್ರೀ ಲೆಸ್ಲಿ ರೇಗೊ, ಬೆಂದೂರ್, ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ, ಸಮಾಜಸೇವಕ ಮತ್ತು ಧಾರ್ಮಿಕ ಮುಂದಾಳು ಶ್ರೀ ಎ. ದಾಮೋದರ ಮತ್ತು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ನಿರೂಪಕ, ಗಾಯಕ ಶ್ರೀ ಅರುಣ್  ದಾಂತಿ, ಪೆರ್ನಾಲ್, ಕವಿ ಶ್ರೀ ರೋಶನ್ ಸಿಕ್ವೇರಾ, ಬಜ್ಪೆ, ಉದ್ಯಮಿ,  ಸಮಾಜಸೇವಕ  ಶ್ರೀ ಜಯಕುಮಾರ್ ಮತ್ತು ಪತ್ರಕರ್ತ ಶ್ರೀ ಎಚ್ಚೆಮ್, ಪೆರ್ನಾಲ್ ಇವರನ್ನು ಸಭೆಗೆ ಪರಿಚಯಿಸಿ, ಶಾಲು ಮತ್ತು ಫುಷ್ಪ ಗುಚ್ಛದೊಂದಿಗೆ ಸ್ವಾಗತಿಸಿಲಾಯಿತು.

ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಉದ್ಘಾಟಕ ಶ್ರೀ ಲೆಸ್ಲಿ ರೇಗೊ, ಮುಖ್ಯ ಅತಿಥಿ ಶ್ರೀ ಎ. ದಾಮೋದರ, ಸಮಾರಂಭದ ಅಧ್ಯಕ್ಶತೆ ವಹಿಸಿದ್ದ ಶ್ರೀ ಜೋಸೆಫ್ ಮಥಾಯಸ್ ಜೊತೆಗೆ ಸಂಘದ ಗೌರವಾಧ್ಯಕ್ಷ ಶ್ರೀ ಜೋಸೆಫ್ ಲೋಬೊ ಮತ್ತು ಅಧ್ಯಕ್ಷರಾದ ಶ್ರೀ ಜಯರಾಮ್ ದೀಪ ಪ್ರಜ್ವಲಿಸುವುದರ ಜೊತೆಗೆ ವಿದ್ಯುಕ್ತವಾಗಿ ಉದ್ಘಾಟಿಸಿದರು.

5 ಮಂದಿ ಫಲಾನುಭವಿಗಳಿಗೆ ವೈದ್ಯಕೀಯ ನೆರವು, ಸುಮಾರು 20  ಮಂದಿ ಹಿರಿಯ ನಾಗರಿಕರಿಗೆ ಸೀರೆ – ಧೋತಿ ಮತ್ತು ಬಾಲವಾಡಿಯಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಸಮಾರಂಭದ ಅಧ್ಯಕ್ಷರು, ಉದ್ಘಾಟಕರು, ಮುಖ್ಯ ಅತಿಥಿ ಮತ್ತು ಗೌರವ ಅತಿಥಿಗಳು ವಿತರಿಸಿದರು. ಗಾಲಿಕುರ್ಚಿ, ಸೈಕಲ್ ಮತ್ತು ಹೊಲಿಗೆಯಂತ್ರದ ಆವಶ್ಯಕತೆ ಇರುವ ಫಲಾನುಭವಿಗಳ ಮಾಹಿತಿ ಈ ಬಾರಿ ಸಂಘಕ್ಕೆ ಲಭ್ಯವಿಲ್ಲದ ಕಾರಣ, ಸಮಾರಂಭದಲ್ಲಿ ವಿತರಿಸುವುದು ಸಾಧ್ಯವಾಗಿಲ್ಲವಾದರೂ, ಮಾಹಿತಿ ಲಭ್ಯವಾದೊಡನೆ ಫಲಾನುಭವಿಗಳ ಮನೆಗೆ ಸಂಘದ ಪದಾಧಿಕಾರಿಗಳು ಖುದ್ದಾಗಿ ತೆರಳಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಚೇತನ್ ಕುಮಾರ್ ಈ ಸಂದರ್ಭದಲ್ಲಿ  ಮಾಹಿತಿ ನೀಡಿದರು.

ಸೌಹಾರ್ದದ ಸಹಬಾಳ್ವೆಯೇ ನಿಜವಾದ ಸ್ವಾತಂತ್ರ್ಯ  – ಶ್ರೀ ಲೆಸ್ಲಿ ರೇಗೊ

ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಮಾತನಾಡಿದ ಉದ್ಯಮಿ, ನಿರೂಪಕ ಮತ್ತು ಸಮಾಜ ಸೇವಕ ಶ್ರೀ ಲೆಸ್ಲಿ ರೇಗೊ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು “ಅಂದಿನ ಸಮಾಜದಲ್ಲಿ ಇಂದಿನಂತೆ ಜಾತಿ –  ಧರ್ಮಾಧಾರಿತ ದ್ರುವೀಕರಣಗಳು ಇರಲೇ ಇಲ್ಲ.  ಜಾತಿ – ಮತ – ಧರ್ಮದ ಗೋಡೆಗಳೇ ಇಲ್ಲದ ತೆರೆದ ಅಂಗಳದಲ್ಲಿ ನಾವೆಲ್ಲರೂ ಸೇರಿ ದೀಪಾವಳಿ – ಬಕ್ರೀದ್ – ಕ್ರಿಸ್ಮಸ್ ಹಬ್ಬಗಳನ್ನು ಆಚರಿಸುತ್ತಾ ತುಂಬು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೆವು. ಇಂತಹ ಸ್ವಾತಂತ್ಯ ನಶಿಸಿಹೋಗುತ್ತಿದೆಯೇನೊ ಎಂಬ ಆತಂಕದ ನಡುವೆ ಇಂದಿನ ಸಮಾರಂಭ  ಆಶಾಭಾವ ಮೂಡಿಸುವುದರ ಜೊತೆಗೆ, ಸಂತೋಷವನ್ನು ಹಂಚುವ – ಸಂತೋಷವನ್ನು ಸ್ವೀಕರಿಸುವ ಮತ್ತು ಈ ಎರಡು ವರ್ಗಗಳ ನಡುವೆ ಸೇತುವಾಗಿ ಕೆಲಸ ಮಾಡುವ ಸಂಘವನ್ನು ಕಂಡು ಮನಸ್ಸು ಮುದಗೊಂಡಿತು” ಎಂದು ಮಾರ್ಮಿಕವಾಗಿ ನುಡಿದರು.

ಮುಂದುವರೆದು ಶ್ರೀ ರೇಗೊ ” ನಮ್ಮ ಸ್ವಾತಂತ್ರ್ಯಕ್ಕೆ 76  ವರ್ಷಗಳಾಯಿತು ಎಂದು ಹೆಮ್ಮೆಪಡುವುದು ಸರಿ. ಆದರೆ ಸ್ವಾತಂತ್ರ್ಯದ ಕನಸು ನನಸಾಗಿದೆಯೆ ?  ಸಂತೋಷವನ್ನು ಹಂಚುವುದರಲ್ಲಿ – ಹಂಚುವ ಕಾಯಕಕ್ಕೆ ಕೊಂಡಿಯಾಗಿ ಕೆಲಸ ಮಾಡುವಲ್ಲಿ ಸ್ವಾತಂತ್ರ್ಯದ ಸಾರ್ಥಕತೆಯಿದೆ. ನಿಜವಾದ ರಾಷ್ಟ್ರ‍ೀಯತೆ ಇರುವುದೇ ಭಾವೈಕ್ಯದಲ್ಲಿ. ಸೌಹಾರ್ದದ ಸಹಬಾಳ್ವೆಯೇ ನಿಜವಾದ ಸ್ವಾತಂತ್ರ್ಯ ” ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಶ್ರೀ ಜೋಸೆಫ್ ಮಥಾಯಸ್ ಪರಿವಾರಕ್ಕೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿ ಶ್ರೀ ಎ. ದಾಮೋದರ ಮಾತನಾಡಿ “ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ತುಂಬಾ ಶ್ರಮ ಪಟ್ಟಿದ್ದಾರೆ. ಪ್ರಾಣ ತೆತ್ತಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರ ಬಲಿದಾನವನ್ನು ನಾವು ಸ್ಮರಿಸಬೇಕಾಗಿದೆ. ಅಶೋಕನಗರ ಯುವಕ ಸಂಘ ಇತರ ಸಂಘಗಳಂತೆ ಬರೀ ವಾರ್ಷಿಕೋತ್ಸವ, ನಾಟಕಗಳಿಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ಸೀಮಿತಗೊಳಿಸದೆ ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಈ ಸಂಘ ಇತರ ಸಂಘಗಳಿಗೆ ಮಾದರಿಯಾಗಿದೆ.” ಎಂದು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸದಸ್ಯರನ್ನು ಅಭಿನಂದಿಸಿದರು.

ಸಮಾರಂಭಕ್ಕೆ ಗೌರವ ಅತಿಥಿಯಾಗಿ ಆಗಮಿಸಿದ ಶ್ರೀ ಅರುಣ್ ದಾಂತಿ, ಪೆರ್ನಾಲ್ ಮಾತನಾಡಿ ” ಶ್ರಿ ಜೋಸೆಫ್ ಮಥಾಯಸ್ ಓರ್ವ ಉತ್ತಮ ಗಾಯಕ, ಸಿನೆಮಾ ನಟ, ಕೊಡುಗೈ ದಾನಿ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಹೃದಯವಂತ. ದೇವರಿಗೆ ಎಲ್ಲೆಡೆ ಹಾಜರಿರಲು ಸಾಧ್ಯವಿಲ್ಲದ ಕಾರಣ ತಾಯಂದಿರನ್ನು ದೇವರು ಸೃಷ್ಠಿಸಿದ್ದಾನೆ ಎಂಬ ಮಾತಿದೆ. ಆದರೆ ನನಗನ್ನಿಸುವುದು ದೇವರು ತನ್ನ ಕಕ್ಕುಲತೆಯನ್ನು ಧಾರೆಯೆರೆದು ತನ್ನಂತೆಯೆ  ಜನರಿಗೆ ಸಹಾಯವಾಗಲು ಪಿತೃಸ್ವರೂಪಿ ಜೋಸೆಫ್ ಮಥಾಯಸರನ್ನು ಸೃಷ್ಠಿಸಿರಬಹುದು. ಸರಳ ವ್ಯಕ್ತಿತ್ವದ ಶ್ರೀ ಮಥಾಯಸ್ ಕುಪ್ಪೆಪದವು ನಂತಹ ಒಂದು ಸಣ್ಣ ಹಳ್ಳಿಯಿಂದ ಬಂದು, ಮುಂಬಯಿ – ದುಬೈ ತಲುಪಿ ಇಂದು ಅವರ ಕಂಪೆನಿಯಲ್ಲಿ ನೂರಾರು ಜನರಿಗೆ ಜೀವನೋಪಾಯವನ್ನು ಕಲ್ಪಿಸಿದ್ದಾರೆ. ಅವರ ಹೃದಯವಂತಿಕೆಗೆ ದೇವರು ಅವರ ಉದ್ಯಮವನ್ನು ಆಶೀರ್ವದಿಸಿ  ಪ್ರಪಂಚದಾದ್ಯಂತ ವಿಸ್ತರಿಸುವಂತಾಗಲಿ ಎಂಬುದೇ ನನ್ನ ಹಾರೈಕೆ.”

ಮುಂದುವರಿದು ಶ್ರೀ ದಾಂತಿ “ನಮ್ಮಲ್ಲಿ ಕೋಟ್ಯಾಧಿಪತಿಗಳು ತುಂಬಾ ಜನರಿದ್ದಾರೆ. ಆದರೆ ಎಲ್ಲರಿಗೆ ಕೊಡುವ, ಹಂಚಿಕೊಳ್ಳುವ ಹೃದಯವಂತಿಕೆ ಇರುವುದಿಲ್ಲ. ಜೋಸೆಫ್ ಮಥಾಯಸ್ ಪ್ರತೀ ವರ್ಷ ದುಬಾರಿ ವಿಮಾನಯಾನ ಮಾಡಿ ಬರೀ ಈ ಕಾರ್ಯಕ್ರಮಕ್ಕೋಸ್ಕರ ಊರಿಗೆ  ಬರುತ್ತಾರೆ. ಫಲಾನುಭವಿಗಳಿಗೆ ನೇರ ನೆರವು ನೀಡುತ್ತಾರೆ. ಇಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ. ನಾನು ಅವರ ದುಬೈ ನಿವಾಸಕ್ಕೆ ಭೇಟಿ ನೀಡಿದ್ದೇನೆ. ಅವರ ಸರಳತೆ, ಮನುಷ್ಯ ಪ್ರೇಮ ಮಾತ್ರವಲ್ಲ, ಪ್ರಾಣಿ -ಪಕ್ಷಿ ಸಂಕುಲಗಳ ಮೇಲಿನ ಮಮತೆಯನ್ನೂ ನೋಡಿದ್ದೇನೆ. ಪ್ರಾಣಿ – ಪಕ್ಷಿಗಳನ್ನು ಪ್ರೀತಿಸುವವರು ಯಾವತ್ತೂ ಸೂಕ್ಷ್ಮ ಸಂವೇದಿಗಳು ಮತ್ತು ಜೀವನ್ಮುಖಿಗಳಾಗಿರುತ್ತಾರೆ ಎಂಬುದಕ್ಕೆ  ಜೋಸೆಫ್ ಮಥಾಯಸ್ ಜ್ವಲಂತ ಉದಾಹರಣೆ. ನಾನು ಕಂಡ ಅಪರೂಪದ ಜೀವನ್ಮುಖಿ ವ್ಯಕ್ತಿತ್ವ  ಜೋಸೆಫ್ ಮಥಾಯಸ್ ಅವರದ್ದು” ಎಂದು ಶ್ರೀ ಜೋಸೆಫ್ ಮಥಾಯಸ್ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.

ಕವಿ ರೋಶು, ಬಜ್ಪೆ ಮತ್ತು ಪತ್ರಕರ್ತ ಎಚ್ಚೆಮ್, ಪೆರ್ನಾಲ್ ಸಾಂದರ್ಭಿಕವಾಗಿ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.

ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಶ್ರೀ ಜೋಸೆಫ್ ಲೋಬೊ, ಅಧ್ಯಕ್ಷ ಶ್ರ‍ೀ ಜಯರಾಮ್ ಉಪಸ್ಥಿತರಿದ್ದು, ಉಪಾಧ್ಯಕ್ಷರುಗಳಾದ  ಶ್ರೀ ಪ್ರಭಾಕರ್ ಎಸ್. ಮತ್ತು ಶ್ರೀ ನಿರಂಜನ್, ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ವಸಂತ ಕುಮಾರ್, ಜತೆ ಕಾರ್ಯದರ್ಶಿಗಳಾದ  ಶ್ರೀ ಬಾಲಕೃಷ್ಣ ದೇವಾಡಿಗ, ಶ್ರೀ ಕೆ. ವಸಂತ ಕುಮಾರ್, ಕೋಶಾಧಿಕಾರಿ ಶ್ರೀ ನವೀನ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಶ್ರೀ ಪ್ರಶಾಂತ್ ಆರ್, ಜೊತೆ ಕ್ರೀಡಾ ಕಾರ್ಯದರ್ಶಿ ಶ್ರೀ ದಯಾನಂದ ಶೆಟ್ಟಿ, ಸಮಿತಿ ಸದಸ್ಯರುಗಳಾದ ಶ್ರೀ ರಿತೇಶ್ ಕುಮಾರ್, ಶ್ರ‍ೀ ನಿತಿನ್ ಮಾಡ, ಶ್ರೀ ಶ್ರೀನಿವಾಸ ಕರ್ಕೇರ, ಶೀ ದಾಮೋದರ ಶೆಟ್ಟಿ ಹಾಜರಿದ್ದರು.

ಸಂಘದ ವತಿಯಿಂದ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಚೇತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪಟ : ಶೈಲೇಶ್ ಕುಮಾರ್, ನೀಲಂ ಸ್ಟುಡಿಯೊ

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

1 comment

Avatar
Lawrence Monteiro Ullal ( Ex ASI/RO CRPF) August 16, 2023 - 8:14 am

Good initiative. I deserve it (from my collegemate)

Reply

Leave a Comment

© All Right Reserved. Kittall Publications. Editor : H M Pernal