ಶಿಕ್ಷಕರ ದಿನ ಪ್ರಯುಕ್ತ – ಶಿಕ್ಷಕರು, ಆರಕ್ಷರು, ಯೋಧರು, ಪತ್ರಕರ್ತರಿಗೆ ರೋಹನ್ ಕಾರ್ಪೊರೇಶನ್ ಕೊಡುಗೆ

ರು ಎಂದ ಮೇಲೆ, ಎಲ್ಲರಿಗೂ ಸೂರು ಇರಬೇಕು. ನಮ್ಮ ಪ್ರಧಾನ ಮಂತ್ರಿಗಳೇ ಹೇಳುತ್ತಾರೆ – ಸಬ್‌ಕಾ ಸಾಥ್ – ಸಬ್‌ಕಾ ವಿಕಾಸ್!  ಈ  ಚಿಂತನೆಯನ್ನಿಟ್ಟುಕೊಂಡು ಇದೇ   ಸಪ್ಟೆಂಬರ್ 1 ರಿಂದ ರೋಹನ್ ಸಿಟಿಯಲ್ಲಿ, ಶಿಕ್ಷಕರ ದಿನದ ಸಲುವಾಗಿ – ಶಿಕ್ಷಕರು, ಆರಕ್ಷರು, ಯೋಧರು ಮತ್ತು ಪತ್ರಕರ್ತರಿಗೆ, ಸೀಮಿತ ಅವಧಿಗೆ ಫ್ಲ್ಯಾಟಿನ ಮಾರಾಟ ಬೆಲೆಯ ಮೇಲೆ ಶೇಕಡಾ 10% ವಿಶೇಷ ರಿಯಾಯತಿ ನೀಡಲಾಗುವುದು”  ಎಂದು ಸ್ಮಾರ್ಟ್ ಸಿಟಿ ಮಂಗಳೂರಿನ ಸ್ಮಾರ್ಟ್ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀ ರೋಹನ್ ಮೊಂತೇರೊ ಹೇಳಿದರು.

ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ, ಮೂರು ದಶಕಗಳಿಂದ, ಗುಣಮಟ್ಟದ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು  ನಿರ್ಮಿಸಿ, ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಮುದ್ರೆಯೊತ್ತಿರುವ, ರೋಹನ್ ಕಾರ್ಪೋರೇಶನ್ ನಿರ್ಮಾಣ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಶ್ರೀ ಮೊಂತೇರೊ, ಕೊಡಿಯಾಳ್‌ಬಯ್ಲ್, ಮಂಗಳೂರಿನ ಓಶಿಯನ್ ಪರ್ಲ್‌ ಹೋಟೆಲಿನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತಿದ್ದರು.

“ಮಂಗಳೂರು ನಗರದ ಹೃದಯಭಾಗ, ಬಿಜೈಯ ಮುಖ್ಯರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೋಹನ್ ಸಿಟಿಯಲ್ಲಿ ಒಟ್ಟು 546 ಅಪಾರ್ಟ್‌ಮೆಂಟ್‌ಗಳಿದ್ದು,  10 %  ರಿಯಾಯತಿಯ ವಿಶೇಷ ಯೋಜನೆ, ಒಂದು ತಿಂಗಳ ಸೀಮಿತ ಅವಧಿಯವರೆಗೆ ( ಸಪ್ಟೆಂಬರ್ ಅಂತ್ಯದವರೆಗೆ) ಚಾಲ್ತಿಯಲ್ಲಿದ್ದು – ಈ ಯೋಜನೆಯ ಪ್ರಯೋಜನವನ್ನು ಶಿಕ್ಷಕರು, ಆರಕ್ಷರು, ಯೋಧರು, ಪತ್ರಕರ್ತರ ಕುಟುಂಬ ಸದಸ್ಯರೂ ಪಡೆದುಕೊಳ್ಳಬಹುದು” ಎಂದು ಶ್ರೀ ಮೊಂತೇರೊ ಈ ಸಂದರ್ಭದಲ್ಲಿ ತಿಳಿಸಿದರು.

ಅಪಾರ್ಟ್‌ಮೆಂಟ್ ಮಾರಾಟ ಬೆಲೆಯ ಬಗ್ಗೆ ಕೇಳಲಾದ ಪ್ರಶ್ನೆಗೆ  ಚದರ ಅಡಿಗೆ ರೂ. 6,600/-  ಮಾರಾಟ ಬೆಲೆಯಿದ್ದು, ಈ ಮಾರಾಟ ಬೆಲೆಯ ಮೇಲೆ  10%  ರಿಯಾಯತಿ ದೊರೆಯಲಿದೆ. 546 ಅಪಾರ್ಟ್‌ಮೆಟ್‌ಗಳಲ್ಲಿ 70% ದಷ್ಟು ಅಪಾರ್ಟ್‌ಮೆಂಟ್‌ಗಳು ಈಗಾಗಲೇ ಮಾರಾಟವಾಗಿದ್ದು, ಈ ಹಿಂದಿನ ರೂ. 31,000/- ಕಂತಿನ ಯೋಜನೆಯೂ ಚಾಲ್ತಿಯಲ್ಲಿರುತ್ತದೆ” ಎಂದು ಶ್ರೀ ಮೊಂತೇರೊ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ  ಡಿಯೋನ್  ಮೊಂತೇರೊ, ಶ್ರೀಮತಿ ಸುಮನಾ, ಶ್ರೀ ಲೆಸ್ಲಿ ಪಿಂಟೊ ಮತ್ತು ಶಮೀನಾ ಸೋನ್ಸ್ ಹಾಜರಿದ್ದರು.  ಶ್ರೀ ಟೈಟಸ್ ನೊರೊನ್ಹಾ ಮಾಧ್ಯಮ ಸಂಯೋಜಕರಾಗಿ ಸಹಕರಿಸಿದರು. ಶ್ರೀ ಸಾಹಿಲ್  ಕಾರ್ಯಕ್ರಮ ನಿರೂಪಿಸಿದರು.

ರೋಹನ್ ಸಿಟಿ –  ಇದುವರೆಗಿನ ರೋಹನ್ ಕಾರ್ಪೊರೇಷನ್ ಇದರ ಅತಿದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾಗಿದೆ. ಈ ಯೋಜನೆಯು 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546  ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ.  ಡ್ಯುಪ್ಲೆಕ್ಸ್, 6 ಬಿಎಚ್‌ಕೆ, 4 ಬಿಎಚ್‌ಕೆ, 1405 ರಿಂದ 1900 ಚದರ ಅಡಿ 3 ಬಿಎಚ್‌ಕೆ, 1075 ರಿಂದ 1135 ಚದರ ಅಡಿ 2 ಬಿಎಚ್‌ಕೆ ಮತ್ತು 700 ರಿಂದ 815 ಚದರ ಅಡಿ 1 ಬಿಎಚ್‌ಕೆ ಫ್ಲ್ಯಾಟುಗಳೊಂದಿಗೆ ವಸತಿ ಆಯ್ಕೆಗಳು ರೋಹನ್ ಸಿಟಿಯಲ್ಲಿ ಲಭ್ಯ ಇವೆ.

ವಸತಿ ಪ್ರದೇಶದ ಜೊತೆಗೆ, 284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆಗಳು ರೋಹನ್ ಸಿಟಿಯಲ್ಲಿವೆ.  ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಮತ್ತು ವಾಣಿಜ್ಯ ಸ್ಥಳಗಳೊಂದಿಗೆ, ಆಧುನಿಕ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ, ರೋಹನ್ ಸಿಟಿ ನಿವಾಸಿಗಳಿಗೆ ಉತ್ಕೃಷ್ಟ ಜೀವನ ನಡೆಸಲು ಅನುಕೂಲ ವಾತಾವರಣವನ್ನು ನೀಡುತ್ತದೆ ಮತ್ತು ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರ ಕೇಂದ್ರವಾಗಿದೆ.

ಬಿಜೈ – ಮಂಗಳೂರು ನಗರದಲ್ಲಿಯೇ ಸುರಕ್ಷೆಗೆ ಹಾಗೂ ಎಲ್ಲಾ ಅನುಕೂಲಗಳಿಗೆ ಹೆಸರಾದ ಪ್ರದೇಶವಾಗಿದ್ದು, ಹಲವಾರು ದೇವಸ್ಥಾನಗಳಿಗೆ, ಪ್ರಖ್ಯಾತ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್, ಕದ್ರಿ ಪಾರ್ಕ್, ಕರ್ನಾಟಕ ಪಾಲಿಟೆಕ್ನಿಕ್‌ಗೆ ಇದು ನೆಲೆವೀಡು. ನಗರದ ಹೃದಯ ಭಾಗದಲ್ಲಿದ್ದರೂ ಸ್ವಚ್ಛ ಪರಿಸರ, ಶಾಂತ ವಾತಾವರಣಕ್ಕೆ ಬಿಜೈ ಇನ್ನೊಂದು ಹೆಸರಾಗಿದೆ. ವಿವಿಧ ಧರ್ಮಗಳ ಜನರು ಇಲ್ಲಿ ಅನ್ಯೋನ್ಯವಾಗಿ ಭ್ರಾತೃತ್ವದಿಂದ ಬದುಕುತ್ತಿದ್ದು,  ಬಿಜೈ – ಕಲೆ, ಸಂಸ್ಕೃತಿ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.

ಸೈಂಟ್ ಅಲೋಶಿಯಸ್ ಕಾಲೇಜು, ಲೂರ್ಡ್ಸ್ ಸೆಂಟ್ರಲ್ ಸ್ಕೂಲ್, ಎಸ್.ಡಿ.ಎಮ್ ಲಾ ಕಾಲೇಜು, ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ ಕಾಲ್ನಡಿಗೆಯ ದೂರದಲ್ಲಿವೆ. ತುರ್ತು ಅಗತ್ಯದ ಕಾಲಕ್ಕೆ ಹಲವಾರು ಆಸ್ಪತ್ರೆಗಳು ಹತ್ತಿರದಲ್ಲಿವೆ. ವಿಮಾನ ನಿಲ್ದಾಣ 10 ಕಿಮೀ ದೂರದಲ್ಲಿದ್ದು ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಈ ಯೋಜನೆಗೆ ಎಲ್ಲಾ ಆಧುನಿಕ ಸವಲತ್ತುಗಳನ್ನು ಸಜ್ಜುಗೊಳಿಸಲಾಗಿದೆ. ಕಣ್ಗಾವಲು ಮತ್ತು ರಕ್ಷಣಾ ವ್ಯವಸ್ಥೆ, ನಿರಂತರ ಕುಡಿಯುವ ನೀರು ಮತ್ತು ವಿದ್ಯುತ್, ವಿಶಾಲ ಪಾಕಿಂಗ್, ಗಾರ್ಡನ್‌ಗಳು ಹಾಗೂ ವಾಕಿಂಗ್‌ಟ್ರ್ಯಾಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಲಾಭದಾಯಕ ವ್ಯಾಪಾರದ ಬೆಳವಣಿಗೆಗೆ ಪೂರಕವಾದ ವಾಣಿಜ್ಯ ಮಳಿಗೆಗಳನ್ನು ಹೊಂದಿದೆ.

ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು :  2 ಹಂತಗಳಲ್ಲಿ 35,000 ಚದರ ಅಡಿ ಹೈಪರ್ ಮಾರುಕಟ್ಟೆ ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ ಮಂಗಳೂರಿನ ಹೃದಯಭಾಗದಲ್ಲಿ ಅತೀ ಸಮಂಜಸ ಬೆಲೆಗಳಲ್ಲಿ ಲಕ್ಸುರಿ ಸೌಲಭ್ಯಗಳು ಪ್ರಮುಖ ನ್ಯಾಶನಲ್ ಬ್ಯಾಂಕ್‌ಗಳಿಂದ ಪ್ರಾಜೆಕ್ಟ್ ಅಂಗೀಕೃತ ತ್ವರಿತ ಸಾಲ ಸೌಲಭ್ಯ ಸೇವೆ ಡೀಸೆಲ್ ಜನರೇಟರ್‌ಗಳೊಂದಿಗೆ 100% ಪವರ್ ಬ್ಯಾಕಪ್ ಸ್ವಯಂಚಾಲಿತ ಪವರ್ ಚೇಂಜ್ ಓವರ್ ವ್ಯವಸ್ಥೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ ಹಸಿರುವನ, ಉದ್ಯಾನವನ ಘನ ತ್ಯಾಜ್ಯ ಸಂಸ್ಕರಣಾ ಘಟಕ ಸೌರ ಶಕ್ತಿ ಸಂಗ್ರಹ ಘಟಕ ಲೈಟಿಂಗ್ ಆಟೊಮೇಷನ್ (ಮಂಗಳೂರಿನಲ್ಲಿ ಮೊದಲ ಬಾರಿಗೆ)

ಅಂತರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್‌ನ ವಿಶೇಷತೆಗಳು : ಸಂಪೂರ್ಣ ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ ಫ್ಯಾಮಿಲಿ ರೆಸ್ಟೋರೆಂಟ್ ಕಾಫಿ ಶಾಪ್ ಒಳಾಂಗಣ ಕ್ರೀಡೆ ಬಾಸ್ಕೆಟ್ ಬಾಲ್ ಕೋರ್ಟ್ ಬಾಡ್ಮಿಂಟನ್ ಕೋರ್ಟ್ ವಿಡಿಯೋ ಗೇಮ್ಸ್ ವಲಯ ಸುಸಜ್ಜಿತ ಜಿಮ್ ಸ್ಪಾ, ಯುನಿಸೆಕ್ಸ್ ಸಲೂನ್ ಆರ್ಯುವೇದಿಕ್ ವೆಲ್‌ನೆಸ್ ಸೆಂಟರ್ ೩ಡಿ ಥಿಯೇಟರ್ ಮಲ್ಟಿ-ಪರ್ಪಸ್ ಹಾಲ್ ಸ್ವಿಮ್ಮಿಂಗ್ ಪೂಲ್ ಜಾಗಿಂಗ್ ಟ್ರ್ಯಾಕ್ ಸೀನಿಯರ್ ಸಿಟಿಜನ್ ಪಾರ್ಕ್ ಚಿಣ್ಣರ ಆಟದ ವಲಯ ಸುಸಜ್ಜಿತ ಗ್ರಂಥಾಲಯ ವಿದ್ಯಾರ್ಥಿ ಕಲಿಕಾ ಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು.

: :  ಯಶಸ್ಸಿನ ರೂವಾರಿ – ರೋಹನ್ ಮೊಂತೇರೊ : :

ರೋಹನ್ ಮೊಂತೇರೊ ಯುವ ಪ್ರಾಯದಲ್ಲೇ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೆಜ್ಜೆಯನ್ನು ಇಟ್ಟಿದ್ದು, ಇಂದು ‘ರೋಹನ್ ಕಾರ್ಪೊರೇಷನ್’ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬೆಳೆದಿದ್ದಾರೆ.  ವೃತ್ತಿಯಲ್ಲಿ ಅವರ ಬದ್ಧತೆ ಮತ್ತು ಪರಿಶ್ರಮದಿಂದ ವಿಸ್ತಾರವಾದ ರಿಯಲ್ ಎಸ್ಟೇಟ್ ಉದ್ಯಮದ ಸಂಸ್ಥೆಯನ್ನು ನಿರ್ಮಿಸಲು ಸಾಧ್ಯವಾಗಿದೆ. ರೋಹನ್ ಮೊಂತೇರೊ ನಿರ್ಮಾಪಕರಾಗಿ ಎಲ್ಲಾ ಕೆಲಸಗಳಲ್ಲೂ ಸೂಕ್ಷ್ಮತೆ, ಅಚ್ಚುಕಟ್ಟು ಮತ್ತು ಪೂರ್ಣತೆಯನ್ನು ಹೊಂದಿದ್ದು, ಗ್ರಾಹಕರ ಅಭಿಮಾನವನ್ನು ಗಳಿಸಿದ್ದಾರೆ. ರೋಹನ್ ಮೊಂತೇರೊ ಇವರ ನಾಯಕತ್ವದಲ್ಲಿ ಅವರ ನಿರ್ಮಾಣ ಸಂಸ್ಥೆ, ಮಂಗಳೂರು ನಗರದಲ್ಲಿ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಜನಮನಗಳಲ್ಲಿ ನೆಲೆಸಿ, ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಪಕ್ಷಿಕೆರೆಯಲ್ಲಿ ಮತ್ತು ಕುಲಶೇಖರದಲ್ಲಿ ರೋಹನ್ ಎಸ್ಟೇಟ್, ಸುರತ್ಕಲ್‌ನಲ್ಲಿ ರೋಹನ್ ಎನ್‌ಕ್ಲೇವ್ ಮತ್ತು ಅವೆನ್ಯೂ ಸಂಪೂರ್ಣಗೊಂಡಿದ್ದು, ಪಂಪ್‌ವೆಲ್ ಬಳಿಯ ಕಪಿತಾನಿಯೊದಲ್ಲಿನ ರೋಹನ್ ಸ್ಕ್ವೇರ್ ನಿರ್ಮಾಣದ ಕೊನೆಯ ಹಂತದಲ್ಲಿದೆ.

‘ರೋಹನ್ ಸಿಟಿ’ ಹೆಚ್ಚು ಅನುಕೂಲಕರ ಹೂಡಿಕೆ ತಾಣವಾಗಿ, ಹೂಡಿಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ಅದರ ಹೇರಳವಾದ ವಾಣಿಜ್ಯ ಘಟಕಗಳೊಂದಿಗೆ, ನಗರವು ವಾಣಿಜ್ಯೋದ್ಯಮಿಗಳು, ಸ್ಟಾರ್ಟ್‌ಅಪ್ಸ್‌ಗಳು ಮತ್ತು ಸ್ಥಾಪಿತ ವ್ಯವಹಾರಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ವೈವಿಧ್ಯಮಯ ವಾಣಿಜ್ಯ ಸ್ಥಳಗಳ ಲಭ್ಯತೆಯು, ಉದ್ಯಮಿಗಳು ತಮ್ಮ ಉದ್ಯಮಗಳನ್ನು ಪ್ರಾರಂಭಿಸಲು ಪ್ರಶಸ್ತವಾದ ಸ್ಥಳವಾಗಿದೆ, ಹಾಗೆಯೇ ಅಸ್ತಿತ್ವದಲ್ಲಿರುವ ವ್ಯವಹಾರಗಳ ವಿಸ್ತರಣೆಯ ಅಗತ್ಯಗಳನ್ನು ಪೂರೈಸುತ್ತದೆ. ಇದಲ್ಲದೆ, ಹೂಡಿಕೆದಾರರು ವಾಣಿಜ್ಯ ಆಸ್ತಿಗಳನ್ನು ಖರೀದಿಸುವ ಅವಕಾಶವನ್ನು ಬಳಸಿ, ನಗರದ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಪರಿಸರದ ಲಾಭವನ್ನು ಪಡೆಯಬಹುದು. ‘ರೋಹನ್ ಸಿಟಿ’ಯಲ್ಲಿ ಹೂಡಿಕೆ ಮಾಡಿ, ಫ್ಲ್ಯಾಟುಗಳನ್ನು ಖರೀದಿಸಿ, ಬಾಡಿಗೆ ಮಾರುಕಟ್ಟೆಯಿಂದ ಲಾಭ ಪಡೆದು, ಸ್ಥಿರವಾದ ಆದಾಯವನ್ನು ಖಾತ್ರಿಪಡಿಸಿಕೊಳ್ಳಬಹುದು. ಹೀಗಾಗಿ ದೃಢವಾದ ಮಾರುಕಟ್ಟೆ, ಸಾಕಷ್ಟು ಅವಕಾಶಗಳು ಮತ್ತು ಅನುಕೂಲಕರ ವ್ಯಾಪಾರ ಪರಿಸರ ವ್ಯವಸ್ಥೆಯೊಂದಿಗೆ, ‘ರೋಹನ್ ಸಿಟಿ’ ಉತ್ತಮ ಹೂಡಿಕೆಗಳನ್ನು ಮಾಡಲು ಮತ್ತು ಸಮೃದ್ಧ ನಗರ ಕೇಂದ್ರದ ಪ್ರತಿಫಲವನ್ನು ಪಡೆಯಲು ಬಯಸುವವರಿಗೆ ಆಕರ್ಷಕ ಆಯ್ಕೆಯಾಗಿದೆ.

ಹೆಚ್ಚಿನ ವಿವರಗಳಿಗಾಗಿ ರೋಹನ್ ಸಿಟಿ, ಬಿಜೈ ಮುಖ್ಯರಸ್ತೆಯ ಕಛೇರಿ ಅಥವಾ ದೂರವಾಣಿ 9845607725/ 9845607724 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ www.rohancity.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದಾಗಿದೆ.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. Editor : H M Pernal