ಎಂ.ಸಿ.ಸಿ. ಬ್ಯಾಂಕಿನ ಅಶೋಕನಗರ ಶಾಖೆಯನ್ನು ಉರ್ವ ಸ್ಟೋರ್‌ನಲ್ಲಿರುವ ಪಾರಿಜಾತಾ ಕಾಂಪ್ಲೆಕ್ಸ್‌ನ ನೆಲಮಹಡಿಗೆ ದಿನಾಂಕ ಸ್ಥಳಾಂತರಿಸಲಾಯಿತು.
ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಬಿಜೈ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಡಾ| ಜೆ.ಬಿ. ಸಲ್ಡಾನ್ಹಾರವರು ಸ್ಥಳಾಂತರಗೊಂಡ ಹೊಸ ಶಾಖೆಯನ್ನು ಉದ್ಘಾಟಿಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೊರವರು ಆಡಳಿತ ಮಂಡಳಿಯು ಒಂದು ವರ್ಷದ ಹಿಂದೆ ಗ್ರಾಹಕರ ಸಮಾವೇಶದಲ್ಲಿ ಕೊಟ್ಟ ಆಶ್ವಾಸನೆಯನ್ನು ಅಶೋಕನಗರ ಶಾಖೆಯ ಸ್ಥಳಾಂತರದ ಮೂಲಕ ಈಡೇರಿಸಿದೆ ಎಂದರು. ನಮ್ಮ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಕ್ಕನುಸಾರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಅತ್ಯಂತ ಬಲಾಢ್ಯ ಬ್ಯಾಂಕುಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಹಾಗೂ ಬ್ಯಾಂಕಿನ ಠೇವಣಿ ಡಿಐಸಿಜಿಸಿ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ ಎಂದರು. ಗ್ರಾಹಕ ಸೇವೆಯೇ ದೇವರ ಸೇವೆ ಎಂಬ ಧ್ಯೇಯದೊಂದಿಗೆ ನಮ್ಮ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾ ಬ್ಯಾಂಕಿನ ಬೆಳವಣಿಗೆಗೆ ಕಾರಣೀಭೂತರಾಗಲು ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ. ನಮ್ಮ ಬ್ಯಾಂಕಿನಲ್ಲಿ ಸಾರ್ವಜನಿಕ ಕ್ಶೇತ್ರದ ಬ್ಯಾಂಕಿನಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳು ದೊರಕುತ್ತವೆ ಎಂದರು. ನಮ್ಮ ಸೇವೆಯಲ್ಲಿ ಏನಾದರೂ ಕುಂದುಕೊರತೆಗಳು ಇದ್ದಲ್ಲಿ, ಗ್ರಾಹಕರು ತಮ್ಮ ಸಲಹೆ ಮತ್ತು ಸೂಚನೆಗಳೊಂದಿಗೆ ಆಡಳಿತ ಮಂಡಳಿಯ ಗಮನಕ್ಕೆ ತರಲು ವಿನಂತಿಸಿದರು. ಹಿಂದಿನಂತೆಯೇ ಇನ್ನು ಮುಂದೆಯೂ ನಮ್ಮ ಬ್ಯಾಂಕಿಗೆ ತಮ್ಮ ಸಹಕಾರ ಮತ್ತು ಪ್ರೋತ್ಸಾಹ ನೀಡಲು ಗ್ರಾಹಕರಿಗೆ ಕರೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ವಂದನೀಯ ಡಾ| ಜೆ.ಬಿ. ಸಲ್ಡಾನ್ಹಾರವರು, ಬ್ಯಾಂಕಿನ ಆಡಳಿತ ಮಂಡಳಿಯು ಅಶೋಕನಗರ ಶಾಖೆಯನ್ನು ಗ್ರಾಹಕರ ಅನುಕೂಲಕ್ಕಾಗಿ ನೆಲಮಹಡಿಗೆ ಸ್ಥಳಾಂತರಿಸುವ ಉತ್ತಮ ಕಾರ್ಯವನ್ನು ಮಾಡಿದೆ; ಹೊಸ ಸ್ಥಳಾಂತರಗೊಂಡ ಶಾಖೆಯಲ್ಲಿ ಲಭ್ಯವಿರುವ ಪಾರ್ಕಿಂಗ್ ಸೌಲಭ್ಯ ಮತ್ತು ಗ್ರಾಹಕರಿಗೆ ಸೂಕ್ತ ಹಾಗೂ ಅನುಕೂಲಕರ ಸ್ಥಳಾವಕಾಶ ಕಲ್ಪಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಂಕಿನ ಸಿಬ್ಬಂದಿಗಳ ನಗುಮೊಗದ ಗ್ರಾಹಕ ಸೇವೆಯೇ ಬ್ಯಾಂಕಿನ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಕೊಂಡಾಡಿದರು.
ವಂದನೀಯ ಜೋಸೆಫ್ ಮಾರ್ಟಿಸ್‌ರವರು ಬ್ಯಾಂಕಿನ ಗ್ರಾಹಕ ಕೇಂದ್ರಿತ ಕಾರ್ಯಗಳಿಗಾಗಿ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಎಂ.ಸಿ.ಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದು ಸಂತೋಷಕರ ಅನುಭವವಾಗಿದೆ ಎಂದು ಹೇಳಿದರು.
ಅಶೋಕನಗರ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ದಿಲೀಪ್ ವೇಗಸ್ ಇವರು ಸ್ಥಳಾಂತರ ಶಾಖೆಯ ಆಶೀರ್ವಚನ ಕಾರ್ಯ ನಡೆಸಿಕೊಟ್ಟರು. ಉರ್ವ ಚರ್ಚಿನ ಧರ್ಮಗುರುಗಳಾದ ವಂದನೀಯ ಬೆಂಜಮಿನ್ ಪಿಂಟೊರವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ದೇರೆಬೈಲ್ ಚರ್ಚಿನ ಧರ್ಮಗುರುಗಳಾದ ವಂದನೀಯ ಜೋಸೆಫ್ ಮಾರ್ಟಿಸ್‌ರವರು ಹೊಸ ಎಟಿಎಮ್ ಉದ್ಘಾಟಿಸಿದರು. ಗೌರವಾನ್ವಿತ ಅತಿಥಿಯಾಗಿದ್ದ ಶ್ರೀ ಫ್ರಾನ್ಸಿಸ್ ಅಲ್ಫ್ರೆಡ್ ಕೊನ್ಸೆಸ್ಸೊ, ಮಾಲಕರು ಕೊನ್ಸೆಸ್ಸೊ ಎಂಟರ್‌ಪ್ರೈಸಸ್ಸ್, ಮಂಗಳೂರು ಇವರು ಇ. ಸ್ಟಾಂಪಿಂಗ್ ವ್ಯವಸ್ಥೆಗೆ ಚಾಲನೆ ನೀಡಿದರು.
ಬ್ಯಾಂಕಿನ ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಅನಿಲ್ ಪತ್ರಾವೊ, ಹೆರಾಲ್ಡ್ ಜೋನ್ ಮೊಂತೇರೊ, ಡೇವಿಡ್ ಡಿ ಸೋಜ, ರೋಶನ್ ಡಿ.ಸೋಜ, ಡಾ| ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ ಮತ್ತು ಮಹಾಪ್ರಬಂಧಕ ಸುನಿಲ್ ಮಿನೇಜಸ್ ಹಾಜರಿದ್ದರು.
ಕನ್ಸಲ್ಟಿಂಗ್ ಇಂಜಿನಿಯರ್ ಶ್ರೀ ಕಾರ್ತಿಕ್ ಕಿರಣ್ ಮತ್ತು ಕಟ್ಟಡದ ಮಾಲಕ ಶ್ರೀ ಕ್ರಷ್ಣ ಕೌಶಲ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಶೋಕನಗರ ಶಾಖೆಯ ನಿರ್ದೇಶಕ ಶ್ರೀ ಸುಶಾಂತ್ ಸಲ್ಡಾನ್ಹಾ ಸ್ವಾಗತಿಸಿ ಪ್ರಬಂಧಕ ಲ್ಯಾನ್ಸಿ ಲೋಬೊರವರು ವಂದಿಸಿದರು. ವಿಯೊಲಾ ಪಿಂಟೊ, ಬಜ್ಪೆ ನಿರೂಪಿಸಿದರು.