ಕಥೋಲಿಕ್ ಶಿಕ್ಷಣ ಮಂಡಳಿಯ ಅನುದಾನರಹಿತ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಮಂಗಳೂರಿನ ಶಾಂತಿ ಕಿರಣ್, ಬಜ್ಜೋಡಿಯಲ್ಲಿ ಸೆಪ್ಟೆಂಬರ್ ೧೨ ರಂದು ‘ಸೇ ನೋ ಟು ಡ್ರಗ್ಸ್’ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಮಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕರಾದ ಡಾ. ಕರೆನ್ ಪಿ ಕ್ಯಾಸ್ಟೆಲಿನೊ, ಸಂಪನ್ಮೂಲ ವ್ಯಕ್ತಿಗಳಾಗಿ ಡ್ರಗ್ ದುರುಪಯೋಗ, ವ್ಯಸನ, ಲಕ್ಷಣಗಳು ಮತ್ತಿತರ ವಿಶಯಗಳ ಮೇಲೆ ಬೆಳಕು ಚೆಲ್ಲಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಬಜಾಲ್ ಲಿಂಕ್ ಇಂಟಿಗ್ರೇಟೆಡ್ ಪುನರ್ವಸತಿ ಕೇಂದ್ರದ, ನಿರ್ವಾಹಕರಾದ ಶ್ರೀಮತಿ ಲಿಡಿಯಾ ಲೋಬೋ ಅವರು ಅಪ್ರಾಪ್ತ ಮಕ್ಕಳನ್ನು ಡ್ರಗ್ ಸಮಸ್ಸೆಯಿಂದ ದೂರವಿಡುವಲ್ಲಿ ಶಾಲಾ ಶಿಕ್ಷಕರ ಪಾತ್ರವನ್ನು ವಿವರಿಸಿದರು.
ಪ್ರಾರ್ಥನಾ ಗೀತೆಯ ಮೂಲಕ ಕಲಾಪ ಆರಂಭಗೊಂಡಿತು. ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಆಂಟೋನಿ ಶೇರಾ ಸ್ವಾಗತಿಸಿದರು ಮತ್ತು ನೆರೆದ ಶಿಕ್ಷಕರಿಗೆ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು
ಮಧ್ಯಾಹ್ನ ಊಟದೊಂದಿಗೆ ಕಾರ್ಯಾಗಾರ ಮುಕ್ತಾಯವಾಯಿತು.
■ ಸುದ್ದಿ : ಕೆನರಾ ಕಮ್ಯುನಿಕೇಷನ್ ಸೆಂಟರ್, ಮಂಗಳೂರು