ಸಂತ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಡ್ರಗ್ ಡಿಸ್ಕವರಿ, ಡೆವಲಪ್‌ಮೆಂಟ್ ಕಾರ್ಯಕ್ರಮ

ಡಾ. ರೆಡ್ಡೀಸ್ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್ ಮತ್ತು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಜೊತೆ ಸಹಯೋಗದಲ್ಲಿ, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು 2024 ರ ಜೂನ್ 10 ರಿಂದ 21 ರ ವರೆಗೆ ‘ಡ್ರಗ್ ಡಿಸ್ಕವರಿ & ಡೆವಲಪ್‌ಮೆಂಟ್’ ಕುರಿತು ಎರಡು ವಾರಗಳ ಬೇಸಿಗೆ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮವನ್ನು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯಲ್ಲಿ ಇನ್ನೋವೇಶನ್, ಸ್ಟ್ರಾಟಜಿ ಮತ್ತು ಸರ್ಕಾರಿ ವ್ಯವಹಾರಗಳ ಮುಖ್ಯಸ್ಥೆಯಾದ ಪ್ರೊಫೆಸರ್ ಶ್ವೇತವಲ್ಲಿ ರಘುವನ್ ಅವರು ನಿರ್ವಹಿಸಿದರು. ಔಷಧ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಒಂದು ಸಮಗ್ರ ತಿಳಿವಳಿಕೆಯನ್ನು ಒದಗಿಸುವುದು ಮತ್ತು ಔಷಧ (ಔಷಧ ಪತ್ತೆ ಮತ್ತು ಅಭಿವೃದ್ಧಿ) ಕ್ಷೇತ್ರದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು, ಕೈಗೆಟುಕುವ ನಾವಿನ್ಯತೆಗಳ ಮೂಲಕ ಮಾನವ ಆರೋಗ್ಯವನ್ನು ಸುಧಾರಿಸಲು ಕೊಡುಗೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. 2024ರ ಕಾರ್ಯಕ್ರಮವನ್ನು ರಸಾಯನ ಶಾಖಾ ವಿಭಾಗ, ರಸಾಯನ ವಿಜ್ಞಾನ ಶಾಲೆಯು ಸಮನ್ವಯಿಸಿತು.

ಭಾರತವು ವಿಶ್ವದ ಔಷಧ ಕೇಂದ್ರವಾಗಿದ್ದು, ಒಟ್ಟು ವಿಶ್ವ ಔಷಧ ರಫ್ತಿನಲ್ಲಿ ಶೇಕಡಾ 20 ರಷ್ಟು ಪಾಲು ಹೊಂದಿದ್ದು,  , ವಿಶ್ವದಾದ್ಯಂತ ತಯಾರಿಸಲ್ಪಡುವ ಎಲ್ಲಾ ಲಸಿಕೆಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಲಸಿಕೆಗಳನ್ನು ಭಾರತವೇ ಪೂರೈಸುತ್ತಿದ್ದು, ವಿಶ್ವದ ಅತಿದೊಡ್ಡ ಲಸಿಕೆ ಪೂರೈಕೆದಾರ ಕೂಡ ಆಗಿದೆ. ಪರಿಣಾಮವಾಗಿ, ಈ ಕ್ಷೇತ್ರದಲ್ಲಿ ಉತ್ತಮ ಮಾರುಕಟ್ಟೆ ಇದೆ. ಆದಾಗ್ಯೂ, ವಿದ್ಯಾರ್ಥಿಗಳಿಗೆ ಔಷಧ (ಔಷಧ ಪತ್ತೆ ಮತ್ತು ಅಭಿವೃದ್ಧಿ) ಕ್ಷೇತ್ರದ ಒಟ್ಟು ಪ್ರಕ್ರಿಯೆಯ ಬಗ್ಗೆ ಪೂರ್ಣ ತಿಳಿವಳಿ ಇರುವುದಿಲ್ಲ; ಭಾರತದಲ್ಲಿನ ಕೋರ್ಸ್‌ಗಳು ಕೇವಲ ಒಂದು ಅಥವಾ ಎರಡು ತಾಂತ್ರಿಕ ಕೌಶಲ್ಯ ಅಭಿವೃದ್ಧಿಗೆ ಮಾತ್ರ ಕೇಂದ್ರೀಕೃತವಾಗಿವೆ.

ಬೇಸಿಗೆ ಶಾಲಾ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಜಿನೋಮಿಕ್ಸ್ ಮತ್ತು ಪ್ರೊಟಿಯೋಮಿಕ್ಸ್ ಔಷಧ ಅಭಿವೃದ್ಧಿ ಮತ್ತು ವಿತರಣೆ, ಪೂರ್ವ-ನೈದಾನಿಕ ಮತ್ತು ಚಿಕಿತ್ಸಾ ಪ್ರಯೋಗಗಳು, ಉತ್ತಮ ಪ್ರಯೋಗಾಲಯ ಪದ್ಧತಿಗಳು, ಔಷಧಶಾಸ್ತ್ರದ ಆರ್ಥಿಕತೆ ಮತ್ತು ಔಷಧ ಪತ್ತೆಹಚ್ಚುವಿಕೆಗೆ ಸಂಬಂಧಿಸಿದ ನಿಯಂತ್ರಣಾತ್ಮಕ ಚೌಕಟ್ಟು ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಂತೆ ತೀವ್ರ ಮತ್ತು ಪರಸ್ಪರ ಕ್ರಿಯಾಶೀಲ ಅಧ್ಯಯನ ಅವಧಿಗಳನ್ನು ನೀಡಿತು.

ಇದರ ಜೊತೆಗೆ, ಪರಿಣಾಮಕಾರಿ ಸಿ.ವಿ. ಬರೆಯುವುದು ಮತ್ತು ಪರಿಣಾಮಕಾರಿ ಸಂವಹನ ಕೌಶಲ್ಯಗಳ ಕುರಿತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳನ್ನು ಈ ಕಾರ್ಯಕ್ರಮವು ಒಳಗೊಂಡಿತ್ತು. ವಿದ್ಯಾರ್ಥಿಗಳು ಸೈನ್‌ಜೀನ್ ಇಂಟಲ್ ಪ್ರೈ. ಲಿ. ಮತ್ತು ಸಿ-ಕ್ಯಾಂಪ್‌ಗೆ ಕೈಗಾರಿಕಾ ಭೇಟಿಗಳಿಂದಲೂ ಪ್ರಯೋಜನ ಪಡೆದರು.

ಬೇಸಿಗೆ ಶಾಲೆಯ ಉಪನ್ಯಾಸಕರಲ್ಲಿ ಡಾ. ರಾಜಮನ್ನಾರ್ ಥೆನಾಟಿ, ಸನ್ ಫಾರ್ಮಾ ಅವರ ಆಡಳಿತ ನಿರ್ದೇಶಕ; ಡಾ| ನೀಲಿಮಾ ದುಬೆ, ಸಿಐಎಂಪಿಎಸ್‌ನ ಸಹ ಸಂಶೋಧನ ವಿಜ್ಞಾನಿ; ಐಐಟಿ ಕಾನ್ಪುರದ ಸಹಾಯಕ ಪ್ರಾಧ್ಯಾಪಕ ಡಾ| ಧರ್ಮರಾಜ ಅಳಿಮುತ್ತು; ಕರ್ನಾಟಕ ಹೈಕೋರ್ಟಿನ ನ್ಯಾಯವಾದಿ ಶ್ರೀ ಭೈರವ್ ಕುಟ್ಟೈಯ, ಡಾ. ಕಿರಣ್ ಬೆಟ್ಟದಾಪುರ, ಸೈನ್‌ಜೀನ್ ಇಂಟರ್‌ನ್ಯಾಷನಲ್ ಪ್ರೈ. ಲಿ. ಅವರ ಹಿರಿಯ ಸಂಶೋಧನ ತನಿಖೆಗಾರ, ಡಾ. ರೆಡ್ಡೀಸ್ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್‌ನ ಮುಖ್ಯ ವಿಜ್ಞಾನಿ ಡಾ| ಮನೋಜಿತ್ ಪಾಲ್, ಡಾ. ರೆಡ್ಡೀಸ್ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್‌ನ ಮುಖ್ಯ ವಿಜ್ಞಾನಿ ಡಾ. ಪರಿಮಲ್ ಮಿಶ್ರಾ, ಸೈನ್‌ಜೀನ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಜೀವ ವಿಶ್ಲೇಷಣ ಪ್ರಯೋಗಾಲಯಗಳ ಮುಖ್ಯಸ್ಥೆ ಡಾ. ಅಪರ್ಣಾ ಕಾಶಿನಾಥ್ ಮತ್ತು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಪ್ರಾಕ್ಟೀಸ್ ಪ್ರೊಫೆಸರ್ ಪ್ರೊಫೆಸರ್ ಶ್ವೇತವಲ್ಲಿ ರಘುವನ್ ಅವರು ಸೇರಿದ್ದಾರೆ.

ಈ ಎರಡು ವಾರಗಳ ಬೇಸಿಗೆ ಕಾರ್ಯಕ್ರಮದ ಪೈಲಟ್ ಬ್ಯಾಚ್‌ಗೆ ಒಟ್ಟು 26 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಭಾಗವಹಿಸಿದವರಲ್ಲಿ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜೈನ್ ಡೀಮ್ಡ್ ಯುನಿವರ್ಸಿಟಿ, ಮೌಂಟ್ ಕಾರ್ಮೆಲ್ ಕಾಲೇಜು (ಸ್ವಾಯತ್ತ), ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೇರಳ ವಿಶ್ವವಿದ್ಯಾನಿಲಯ ಕರಿಯಾವಟ್ಟಂ, ಐಐಎಸ್‌ಇಆರ್ ತಿರುಪತಿ ಮತ್ತು ಸೇಂಟ್ ಜೋಸೆಫ್ಸ್ ವಿಶ್ವಿವಿದ್ಯಾಲಯ, ಬೆಂಗಳೂರು ಮುಂತಾದ ವಿವಿಧ ಸಂಸ್ಥೆಗಳ ಬಿಎಸ್‌ಸಿ, ಎಂಎಸ್‌ಸಿ ಮತ್ತು ಸಂಶೋಧನಾ ವಿದ್ವಾಂಸರು ಸೇರಿದ್ದಾರೆ.

“ಈ 11 ದಿನಗಳ ಬೇಸಿಗೆ ಶಾಲಾ ಕಾರ್ಯಕ್ರಮವು ಇಷ್ಟು ಪರಿಣಾಮಕಾರಿ ಎಂದು ಯಾರು ತಿಳಿದಿದ್ದರು? ಔಷಧ ಪತ್ತೆಹಚ್ಚುವಿಕೆಯ ಬಗ್ಗೆ ಮಾತ್ರವಲ್ಲದೆ ನನ್ನ ಸಾಮರ್ಥ್ಯಗಳ ಬಗ್ಗೆಯೂ ಸಹ ನಾನು ಬಹಳಷ್ಟು ಕಲಿತಿದ್ದೇನೆ” ಎಂದು ಈ ಬೇಸಿಗೆ ಕಾರ್ಯಕ್ರಮದ ವಿದ್ಯಾರ್ಥಿನಿ ಶ್ರೀಮತಿ ವೈಜಯಂತಿ ಭಾರದ್ವಾಜ್ ಅವರು ಹೇಳುತ್ತಾರೆ.

21ನೇ ಜೂನ್ 2024 ರಂದು ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ರೆ| ಡಾ| ವಿಕ್ಟರ್ ಲೋಬೊ ಎಸ್‌ಜೆ, ಉಪ ಕುಲಪತಿಯವರು ಮತ್ತು ರೆ| ಫಾ| ಡೆನ್ಸಿಲ್ ಲೋಬೋ ಎಸ್‌ಜೆ, ಮಾಹಿತಿ ತಂತ್ರಜ್ಞಾನ ಶಾಲೆಯ ನಿರ್ದೇಶಕರು ಉಪಸ್ಥಿತರಿದ್ದರು.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. Editor : H M Pernal