ಮೊಹರಂ ಉಡುಗೊರೆ: ಆರು ವರ್ಷಗಳ ನಂತರ ಹೃದಯಸ್ಪರ್ಶಿ ಪುನರ್ಮಿಲನ

ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರವು ಒಂದು ಹೃದಯ ಸ್ಪರ್ಶಿಸುವ ಪುನರ್ಮಿಲನವನ್ನು ಆಚರಿಸಿತು. ನವೆಂಬರ್ 9, 2019 ರಂದು ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಿಂದ ಮಾನಸಿಕ ಅಸ್ವಸ್ಥ ಯುವಕನನ್ನು ಕೇಂದ್ರವು ರಕ್ಷಿಸಿ ಸ್ನೇಹಾಲಯದಲ್ಲಿ ಭರ್ತಿ ಮಾಡಲಾಗಿತ್ತು. ದಾಖಲಾತಿಯ ಸಮಯದಲ್ಲಿ ಆತನ ಮಾನಸಿಕವಾಗಿ ಅತೀ ರೇಗಾಟದ ಸ್ಥಿತಿಯಲ್ಲಿ ಇದ್ದುದರಿಂದ ಅವನ ಗುರುತನ್ನು ತಿಳಿಯಲು ಸಾಧ್ಯವಾಗದೆ, ಅವನಿಗೆ ಬಬ್ಲು ಎಂದು ಹೆಸರಿಸಲಾಯಿತು ಹಾಗೂ ಸ್ನೇಹಾಲಯದಲ್ಲಿ ಆತನಿಗೆ ಉತ್ತಮ ಆರೈಕೆಯನ್ನು ನೀಡಲಾಯಿತು.

ಅಧಿಕೃತ ದಾಖಲೆಗಳನ್ನು ಪಡೆಯುವ ಪ್ರಯತ್ನದಲ್ಲಿ, ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್‌ಗಾಗಿ ಬಬ್ಲು ಅವರ ಅರ್ಜಿಯನ್ನು ಸಲ್ಲಿಸಿದಾಗ ಆರಂಭದಲ್ಲಿ ಆಧಾರ್ ಸೇವಾ ಕೇಂದ್ರವು ಅದನ್ನು ತಿರಸ್ಕರಿಸಿತು. ಆದಾಗ್ಯೂ, ಸ್ವಲ್ಪ ಸಮಯದ ನಂತರ ಅವರ ಹಳೆಯ ಆಧಾರ್ ವಿವರಗಳನ್ನು ಪರಿಶೀಲಿಸಿದಾಗ ಬಬ್ಲೂ ರವರ ನಿಜವಾದ ಗುರುತು ವಿವರಗಳನ್ನುಪಡೆಯಲು ಸಾಧ್ಯವಾಯಿತು ಹಾಗೂ ಅವರ ನಿಜವಾದ ಹೆಸರು ದಾವಲ್ಸಾಬ್ ದಾರುಬಾಯಿ ಎಂಬ ಮಾಹಿತಿ ದೊರಕಿತು. ಆದಾರ್ ಕಾರ್ಡ್‌ನಲ್ಲಿರುವ ಸಂಪರ್ಕ ಸಂಖ್ಯೆ ಬ್ಲಾಕ್ ಆಗಿದ್ದರೂ ಹುಬ್ಬಳ್ಳಿ ಠಾಣೆ ಪೊಲೀಸರು ಆತನ ತಂದೆಯ ಸಂಪರ್ಕ ಸಂಖ್ಯೆ ಪಡೆಯಲು ಸಹಕರಿಸಿದರು ಹಾಗೂ ಆತನ ವಿಳಾಸವನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.

ಆರು ವರ್ಷಗಳಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದ ದಾವಲ್ಸಾಬ್‌ನ ಕುಟುಂಬವನ್ನು ಸಂಪರ್ಕಿಸಿದಾಗ, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ವೀಡಿಯೊ ಕರೆಯು ಅವರ ಗುರುತನ್ನು ದೃಢಪಡಿಸಿತು, ಹಾಗೂ ಪುಣ್ಯ ಮೊಹರಂ ದಿನದಂದು ಈ ಪ್ರಕ್ರಿಯೆ ಒಂದು ಭಾವನಾತ್ಮಕ ಪುನರ್ಮಿಲನಕ್ಕೆ ಕಾರಣವಾಯಿತು. ದಾವಲಸಾಬ್ ಅವರ ಪೋಷಕರು ಸ್ನೇಹಾಲಯ ತಂಡದ ಅವರ ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಗೆ ಅಪಾರ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಈ ಕಥೆಯು ಸಹಾನುಭೂತಿ ಮತ್ತು ಪರಿಶ್ರಮದ ಪ್ರಭಾವವನ್ನು ಎತ್ತಿ ತೋರಿಸುತ್ತದೆ, ಸ್ನೇಹಾಲಯದ ಪ್ರಯತ್ನಗಳು ಕಳೆದುಹೋದ ಮಗನನ್ನು ಅವನ ಕುಟುಂಬಕ್ಕೆ ಹಿಂದಿರುಗಿಸುತ್ತದೆ, ಸಮಾಜಕ್ಕೆ ಸೇವೆ ಸಲ್ಲಿಸುವ ಅವರ ಬದ್ಧತೆಯನ್ನು ಸಾಕಾರಗೊಳಿಸುತ್ತದೆ.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. Editor : H M Pernal