ಸ್ನೇಹಾಲಯ ಡಿ-ಅಡಿಕ್ಷನ್ ಸೆಂಟರ್ ಉದ್ಘಾಟನೆ

ಹಾತ್ಮಾ ಗಾಂಧೀಜಿಯವರ ಜನ್ಮದಿನದಂದು, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಬಾಚಳಿಕೆ, ಪಾವೂರು, ಮಂಜೇಶ್ವರ ಇವರು, ಅಕ್ಟೋಬರ್ 2, 2024 ರಂದು, ಸಾರ್ವಜನಿಕರಿಗಾಗಿ ತಮ್ಮ ಹೊಸ ಸೇವಾ ಸಂಸ್ಥೆಯಾದ ಸ್ನೇಹಾಲಯ ಡಿ-ಅಡಿಕ್ಷನ್ ಸೆಂಟರನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಯಿತು. ವ್ಯಸನದ ವಿರುದ್ಧ ಹೋರಾಡುವ ಮತ್ತು ವ್ಯಸನಕ್ಕೆ ಒಳಗಾದವರ ಪುನರ್ವಸತಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ, ಸ್ನೇಹಾಲಯ ಡೆಡಿಕ್ಷನ್ ಸೆಂಟರ್ ಅನ್ನು ಇಂದು ಗೌರವಾನ್ವಿತ ಗಣ್ಯರು, ದಾನಿಗಳು ಮತ್ತು ಸಾಮಾಜಿಕ ಮತ್ತು ಸಮುದಾಯದ ಮುಖಂಡರ ಉಪಸ್ಥಿತಿಯಲ್ಲಿ, ಪ್ರಖ್ಯಾತ ದಾನಿ ಮತ್ತು ಯಶಸ್ವಿ ಉದ್ಯಮಿಗಳಾದ ಶ್ರೀ. ಮೈಕಲ್ ಡಿಸೋಜಾ ಇವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ನೂತನ ಕೇಂದ್ರವನ್ನು ಉದ್ಘಾಟಿಸಿದರು.

ಮಂಗಳೂರಿನ ಬಿಷಪ್ ಅತಿ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನ್ಹ ಅವರು ಪ್ರಾರ್ಥನೆಯ ನೇತೃತ್ವ ವಹಿಸಿ ನೂತನ ಕಟ್ಟಡಕ್ಕೆ ಆಶೀರ್ವಚನ ನೀಡಿದರು. ಆಶೀರ್ವಚನ ಸಮಾರಂಭದಲ್ಲಿ ದೆಹಲಿಯ ಸಹಾಯಕ ಬಿಷಪ್, ಅತಿ ವಂ.ಡಾ.ದೀಪಕ್ ವಲೇರಿಯನ್ ತೌರೊ, ಶ್ರೀ ಯು.ಟಿ. ಖಾದರ್, ಕರ್ನಾಟಕದ ಗೌರವಾನ್ವಿತ ಸ್ಪೀಕರ್, ಶ್ರೀ ಎಕೆಎಂ ಅಶ್ರಫ್, ಸ್ಥಳೀಯಶಾಸಕರು, ಮಂಜೇಶ್ವರಂ, ಶ್ರೀಮತಿ. ವಿಜಯಲಕ್ಷ್ಮಿ ಶಿಬರೂರು, ಖ್ಯಾತ ಪತ್ರಕರ್ತೆ ಹಾಗೂ ಪೂಜ್ಯ ಆತ್ಮದಾಸ್ ಯಾಮಿ ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಇತರ ಪ್ರಮುಖ ಅತಿಥಿಗಳಲ್ಲಿ ಶ್ರೀ. ಎನ್ ಅಲಿ ಅಬ್ದುಲ್ಲಾ, ಒಸಿಬಿ ಅಧ್ಯಕ್ಷರು, ಶ್ರೀ. ಸಿನುಕುಮಾರ್, ಸದಸ್ಯ ಕಾರ್ಯದರ್ಶಿ, ಒರ್ಫ಼ನೇಜ್ ಕಂಟ್ರೋಲ್ ಬೋರ್ಡ್, ಕೇರಳ, ಶ್ರೀಯುತ ವಾಲ್ಟರ್ ನಂದಳಿಕೆ, ದಾಯ್ಜಿವಲ್ಡನ್ ಸಂಸ್ಥಾಪಕರು ಉಪಸ್ಥಿತರಿದ್ದು , ಹಲವಾರು ಅಹ್ವಾನಿತ ಗಣ್ಯ ಅತಿಥಿಗಳು, ದಾನಿಗಳು, ಪ್ರೇಕ್ಷಕರು ಈ ಸಭಾರಂಭಕ್ಕೆ ಸಾಕ್ಷಿಗಳಾದರು.

ಅಂದಾಜು 7.5 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸ್ನೇಹಾಲಯ ಡಿ-ಅಡಿಕ್ಷನ್ ಸೆಂಟರ್, ವ್ಯಸನದಿಂದ ಹೋರಾಡುತ್ತಿರುವ ವ್ಯಕ್ತಿಗಳಿಗೆ ಸಮಗ್ರ ಪುನರ್ವಸತಿ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ, ರೋಗನಿರೋಧಕ ಬೆಂಬಲ ವ್ಯವಸ್ಥೆ, ಸಮಾಲೋಚನೆ ಮತ್ತು ಸಮಾಜದ ಮುಖ್ಯವಾಹಿನಿಗೆ ಮರುಸೇರ್ಪಡೆಗೊಳಿಸುವ ಪೂರಕ ವಾತಾವರಣವನ್ನು ನೀಡುತ್ತದೆ.

ಈ ಸಂದರ್ಭದಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಶ್ರೀಯುತ ಮೈಕಲ್ ಡಿಸೋಜರವರು ಹೆಚ್ಚುತ್ತಿರುವ ವ್ಯಸನದ ಸಮಸ್ಯೆಯನ್ನು ಪರಿಹರಿಸಲು ಸಾಮೂಹಿಕ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದರು. ಸ್ನೇಹಾಲಯದ ವಿವಿಧ ಸೇವೆಯ ಬದ್ದತೆಶ್ಲಾಘಿಸಿ ಇಂತಹ ಸಮಾಜಮುಖ್ಹಿ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲ ಸೂಚಿಸಿದರು.

ಸನ್ಮಾನ್ಯ ಶ್ರೀ ಯು.ಟಿ. ಖಾದರ್, ಕರ್ನಾಟಕ ವಿಧಾನಸಭೆಯ ಮಾನ್ಯ ಸ್ಪೀಕರವರು ಸಂಸ್ಥೆಯ ಬೆಳವಣಿಗೆಗೆ ಸಂತೋಷ ವ್ಯಕ್ತಪಡಿಸಿ, ತಾವು ಖುದ್ದಾಗಿ ಸಂಸ್ಥೆಯ ಬೆಳವಣಿಗೆಯನ್ನು ಕಣ್ಣಾರೆ ಕಂಡಿದ್ದಾಗಿ, ಈ ತರಹದ ಸಂಸ್ಥೆಗಳು ಕರ್ನಾಟಕದಲ್ಲು ತಮ್ಮ ಶಾಖೆಗಳನ್ನು ತೆರೆಯಲಿ ಎಂದುತಾನೇ ಆರು ವರುಷಗಳ ಹಿಂದೆ ಉದ್ಘಾಟಿಸಿದ, ಅಸ್ಪತ್ರೆಗಳಿಗೆ ಮಧ್ಯಹ್ನಾದ ಉಚಿತ ಊಟನೀಡುವ ಮನ್ನಾ ಉಪಕ್ರಮದ ಬಗ್ಗೆ ವಿಶೇಷ ಶ್ಲಾಘನೆ ವ್ಯಕ್ತಪಡಿಸಿ ಅಭಿನಂದಿಸಿದರು.

ಬಿಷಪ್ ಪೀಟರ್ ಪೌಲ್ ಸಲ್ಡಾನ್ಹಾ ಅವರು ತಮ್ಮ ಆಶೀರ್ವಚನ ಸಂದೇಶದಲ್ಲಿ, “ಈ ಸಂಸ್ಥೆಯು ಚಟದಿಂದ ಹೋರಾಡುತ್ತಿರುವವರಿಗೆ ಭರವಸೆಯ ದಾರಿದೀಪವಾಗಲಿ, ಅವರನ್ನು ಚೇತರಿಕೆ ಮತ್ತು ವಿಮೋಚನೆಯ ಹಾದಿಯತ್ತ ಮುನ್ನಡೆಸಲಿ. ಆದಾಗ್ಯೂ, ಅವರು ಸನ್ನಿವೇಶಗಳ ಬಲಿಪಶುಗಳಾಗಿರುವುದರಿಂದ ವ್ಯಸನಿಗಳು ಎಂಬ ಪದವನ್ನು ತಪ್ಪಿಸಬಹುದು ಎಂಬ ಸೂಕ್ತ ಸಲಹೆಯನ್ನೂ ನೀಡಿದರು.

ಶ್ರೀಮತಿ. ವಿಜಯಲಕ್ಷ್ಮಿ ಶಿಬರೂರು ಖ್ಯಾತ ಪತ್ರಕರ್ತೆ ಸಮಯೋಚಿತ ಸಂದೇಶ ನೀಡಿದರು. ಇಂತಹ ವ್ಯಸನಮುಕ್ತ ಕೇಂದ್ರಗಳನ್ನು ತೆರೆಯುವ ಬದಲು ಮುಚ್ಚಬೇಕು ಆಗ ಸಮಾಜ ಸುಧಾರಿಸಿದೆ ಎಂದು ಅರ್ಥ. ಸರ್ಕಾರ, ವ್ಯವಸ್ಥೆಯು ತಮ್ಮ ಆದಾಯಕ್ಕಾಗಿ ಆಲ್ಕೋಹಾಲ್ ಮತ್ತು ಅಮಲು ಭರಿಸುವ ವಸ್ತುಗಳನ್ನು ಉತ್ತೇಜಿಸುತ್ತಿದೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಬದಲಾವಣೆಯನ್ನು ತರಲು ಹೆಣಗಾಡುತ್ತಿದ್ದೇವೆ, ಜನ ಎಚ್ಚೆತ್ತು ಸರ್ಕಾರಕ್ಕೆ ತಿದ್ದಿ ಬುದ್ದಿ ಹೇಳಬೇಕೆಂಬ ಸಲಹೆ ನೀಡಿದರು.

ಮುಖ್ಯ ಭಾಷಣಕಾರರಾದ ಪೂಜ್ಯ ಆತ್ಮದಾಸ್ ಯಾಮಿ ಅವರು ಸರ್ವಶ್ರೇಷ್ಠ ಸನ್ಯಾಸಿಗಳು ಮೂರು ಪ್ರಧಾನ ಧರ್ಮಗಳ ಪ್ರಾರ್ಥನ ಆವಾಹನೆಯನ್ನು ಪಠಿಸಿದರು ಮತ್ತು ಮಾನವೀಯತೆಯ ದೃಢವಾದ ಸಂದೇಶವನ್ನು ನೀಡಿದರು ಶಾಶ್ವತ ಧರ್ಮ ಮತ್ತು ನಿಜವಾದ ಪವಿತ್ರತೆಯ ಪ್ರಜ್ಞೆಯು ಸ್ನೇಹಾಲಯದಂತಹ ಸಂಸ್ಥೆಗಳಲ್ಲಿದೆ .

ಕೃತಜ್ಞತೆ ಮತ್ತು ಗೌರವದ ಸೂಚಕವಾಗಿ ಎಲ್ಲಾ ಅತಿಥಿಗಳನ್ನು ಗೌರವಿಸಲಾಯಿತು ಮತ್ತು ಎಲ್ಲಾ ದಾನಿಗಳನ್ನು ಗುರುತಿಸಲಾಯಿತು.

ಮಂಜೇಶ್ವರ ಶಾಸಕರಾದ ಶ್ರೀ ಎ.ಕೆ.ಎಂ.ಅಶ್ರಫ್ ಅವರು ಸ್ನೇಹಾಲಯ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು ಮತ್ತು ಈ ಸಂಸ್ಥೆಯ ಭಾಗವಾಗಿರಲು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ದೈಜಿವರ್ಲ್ಡ್ ಮಾಧ್ಯಮದ ಶ್ರೀ ವಾಲ್ಟರ್ ನಂದಳಿಕೆ ತಮ್ಮ ಭಾಷಣದಲ್ಲಿ” ಈ ಸಮಾಜದಲ್ಲಿ ಎರಡು ರೀತಿಯ ಜನರಿದ್ದಾರೆ. ತನಗಾಗಿ (ಬೋಗಿ) ಎಲ್ಲಾ ಸಂಪತ್ತನ್ನು ಹೊಂದಿರುವವನು ಮತ್ತು ಇತರರ ಕಲ್ಯಾಣಕ್ಕಾಗಿ (ಯೋಗಿ) ಸಂಪತ್ತನ್ನು ದಾನನೀಡುವವರು. ಎರಡನೇ ವರ್ಗ ಹೆಚ್ಚಾಗಬೇಕೆಂದು ಕರೆ ನೀಡಿದರು. ಸ್ನೇಹಾಲಯವು ಅದ್ಬುತವಾದ ನಿಸ್ವಾರ್ಥ ಸೇವಾ ಮನೋಭಾವದ ತಂಡವನ್ನು ಹೊಂದಿದೆ ಮತ್ತು ಮಾನವೀಯ ಉದ್ದೇಶಕ್ಕಾಗಿ ಕೆಲಸ ಮಾಡುತ್ತದೆ. ಈ ಪ್ರಮಾಣದ ಅದ್ಧೂರಿ ಕಾರ್ಯಕ್ರಮವನ್ನು ನಿಖರವಾಗಿ ಯೋಜಿಸಿ ಮತ್ತು ಪರಿಣಾಮಕಾರಿಯಾಗಿ ಆಯೋಜಿಸಿದ್ದಕ್ಕಾಗಿ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಶ್ರೀ ಜಿಯೋ ಡಿ ಸಿಲ್ವಾ ಅವರು ಉದ್ಘಾಟನಾ ಸಮಾರಂಭದ ಕಾರ್ಯ ನಿರ್ವಹಣೆ ಮಾಡಿದರು. ಶ್ರೀ ರಫೀಕ್ ಮಾಸ್ಟರ್ ಮತ್ತು ಪ್ರೊ. ನೆಲ್ಸನ್ ಮೋನಿಸ್ ಅವರು ಔಪಚಾರಿಕ ಕಾರ್ಯವನ್ನು ಅತ್ಯಂತ ಆಹ್ಲಾದಕರ ಶೈಲಿಯಲ್ಲಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಸ್ನೇಹಾಲಯದ ಸಂಸ್ಥಾಪಕರ ಜೀವನ ಕುರಿತು ಶ್ರೀ ರವಿ ನಾಯ್ಕಪು ಅವರು ಬರೆದ “ಸ್ನೇಹಗಂಗೆ” ಎರಡನೇ ಆವೃತ್ತಿಯನ್ನು ಬಿಷಪ್ ರೆ.ಡಾ.ದೀಪಕ್ ವಿ. ತೌರೊ ಅವರು ಬಿಡುಗಡೆ ಮಾಡಿದರು.

ಸ್ನೇಹಾಲಯ ವೆಬ್ಸೈಟ್ನ ಬಿಡುಗಡೆಯನ್ನು ಬಿಷಪ್ ರೆ.ಡಾ. ದೀಪಕ್ ವಿ. ತೌರೊ ಅವರು ಈ ಸಂದರ್ಭದಲ್ಲಿ ನಡೆಸಿಕೊಟ್ಟರು.

ಸ್ನೇಹಾಲಯದ ಸಂಸ್ಥಾಪಕರಾದ ಜೋಸೆಫ್ ಕ್ರಾಸ್ತಾ ಇವರು ಗಣ್ಯರನ್ನು ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ಶ್ರೀಮತಿ್ ಒಲಿವಿಯಾ ಕ್ರಾಸ್ತಾ ವಂದಿಸಿದರು. ಬ್ಲೂ ಏಂಜೆಲ್ ಹಾಡಿನ ಮುಖಾಂತರ ದೇವರ ಆಶೀರ್ವಾದವನ್ನು ಕೋರಿದರು ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಿದರು. 100 ಕ್ಕೂ ಹೆಚ್ಚು ಸ್ವಯಂಸೇವಕರು ತಮ್ಮ ಉಚಿತ ಸೇವೆಯನ್ನು ಒದಗಿಸಿದರು. ಉತ್ತಮವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನು 2000 ಕ್ಕೂ ಹೆಚ್ಚು ಜನರು ಸಂತೋಷದಿಂದ ವೀಕ್ಷಿಸಿದರು. ಎಲ್ಲಾ ಅತಿಥಿಗಳಿಗೆ ಬೋಜನದ ವ್ಯವಸ್ಥೆ ಸುಸಜ್ಜಿತವಾಗಿ ಮಾಡಲಾಗಿತ್ತು.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. Editor : H M Pernal