ಎಂಸಿಸಿ ಬ್ಯಾಂಕಿಗೆ ಮತ್ತೆ ಅನಿಲ್ ಲೋಬೊ ಸಾರಥ್ಯ

ಮಂಗಳೂರು ಕಥೋಲಿಕ್ ಕೊ – ಅಪರೇಟಿವ್ ಬ್ಯಾಂಕ್ ನಿಯಮಿತ ಇದರ , 13 ಅಗೋಸ್ತ್ ರಂದು ನಾಮಪತ್ರ ಸಲ್ಲಿಕೆಯೊಂದಿಗೆ ಆರಂಭಗೊಂಡ ಚುನಾವಣಾ ಪ್ರಕ್ರಿಯೆಗೆ , ಆಕಾಂಕ್ಷೆವುಳ್ಳ 14 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅಗೋಸ್ತ್ 20 ರಂದು ನಾಮಪತ್ರ ಪರಿಶೀಲನೆಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲಾ 14 ಅರ್ಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ದವಾಗಿದ್ದು,  ಬ್ಯಾಂಕಿನ ಆಡಳಿತ ಮಂಡಲಿ ರಚನೆಯಾಗಲು ಇರಬೇಕಾದ ಕೋರಂ ಇದ್ದುದನ್ನು ಪರಿಗಣಿಸಿ,  ರಿಟರ್ನಿಂಗ್ ಅಧಿಕಾರಿ ಶ್ರೀ ಸುಧೀರ್ ಕುಮಾರ್ ಜೆ.  ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು, ಇವರು  – ಅರ್ಜಿ ಸಲ್ಲಿಸಿದ ಎಲ್ಲಾ 14  ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆಗೊಂಡು  ಚುನಾಯಿತರೆಂದು ಘೋಷಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ಮಂಗಳೂರು ಕಥೋಲಿಕ್ ಕೊ-ಅಪರೇಟಿವ್ ಬ್ಯಾಂಕ್ (ಎಂ.ಸಿ.ಸಿ.ಬ್ಯಾಂಕ್) ಇದರ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿರುವುದರಿಂದ, ಆಗಸ್ಟ್ 27 ರಂದು ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಎಂದು ಬ್ಯಾಂಕಿನ ಮಹಾಪ್ರಬಂಧಕ  ಶ್ರೀ ಸುನಿಲ್ ಮಿನೇಜಸ್ ತಿಳಿಸಿದ್ದಾರೆ.

ಈ ಮೂಲಕ 111 ವರ್ಷಗಳ ಇತಿಹಾಸವಿರುವ, ಮಂಗಳೂರಿನ ಸಹಕಾರಿ ರಂಗದ ಮುಂಚೂಣಿಯ ಎಂ.ಸಿ.ಸಿ ಬ್ಯಾಂಕಿನ ಚುಕ್ಕಾಣಿ, ಮುಂದಿನ 5 ವರ್ಷಗಳ ಅವಧಿಗೆ, ಹಾಲಿ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಹಿಡಿದಿದ್ದಾರೆ. 111 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬ್ಯಾಂಕಿನ ನಿರ್ದೇಶಕ ಮಂಡಳಿಯ ಆಯ್ಕೆ ಅವಿರೋಧವಾಗಿ ನಡೆದಿದ್ದು, ವೆಲೆನ್ಸಿಯಾ ನಿವಾಸಿ ಶ್ರೀ ಅನಿಲ್ ಲೋಬೊ  ನೇತೃತ್ವದ ತಂಡದ ಪಾಲಾಗಿದೆ.

ಅವಿರೋಧ ಆಯ್ಕೆಗೊಂಡ ನೂತನ ನಿರ್ದೇಶಕರು – ನಾಯಕ ಅನಿಲ್ ಲೋಬೊ ಜೊತೆಗೆ

ಶ್ರೀ ಅನಿಲ್  ಲೋಬೊ ತಂಡದಲ್ಲಿ – ಡಾ। ಜೆರಾಲ್ಡ್ ಪಿಂಟೋ, ಕಲ್ಯಾಣಪುರ, ರೋಶನ್ ಡಿ’ಸೋಜ, ಮುಡಿಪು , ಹೆರಾಲ್ಡ್ ಜೋನ್ ಮೊಂತೆರೊ, ಕೆಲರಾಯ್, ಜೋಸೆಫ್ ಎಂ.ಅನಿಲ್ ಪತ್ರಾವೊ, ದೆರೆಬೈಲ್, ಡೇವಿಡ್ ಡಿ’ಸೋಜ, ಬಜಪೆ, ಮೆಲ್ವಿನ್ ಅಕ್ವಿನಸ್ ವಾಸ್, ಮಂಗಳೂರು, ಜೆ.ಪಿ.ರೋಡ್ರಿಗಸ್, ಪುತ್ತೂರು, ಆಂಡ್ರು ಡಿ’ಸೋಜ, ಮೂಡಬಿದ್ರಿ, ಎಲ್‌ರೊ ಕಿರಣ್ ಕ್ರಾಸ್ಟೊ, ಗಂಗೊಳ್ಳಿ, ಜೆರಾಲ್ಡ್ ಜೂಡ್ ಡಿ’ಸಿಲ್ವ, ಕಾರ್ಕಳ, ವಿನ್ಸೆಂಟ್ ಅನಿಲ್ ಲಸ್ರಾದೊ, ಬಂಟ್ವಾಳ, ಐರಿನ್ ರೆಬೆಲ್ಲೊ, ಕುಲಶೇಖರ ಮತ್ತು ಫ್ರೀಡಾ ಫ್ಲಾವಿಯಾ ಡಿ’ಸೋಜ, ಬಳ್ಕುಂಜೆ ಇದ್ದಾರೆ.

ಹಾಲಿ ಬ್ಯಾಂಕಿನ ಆಡಳಿತ ಮಂಡಲಿಯ ಅವಧಿಯು ಅಗೋಸ್ತ್ 26 ರಂದು ಕೊನೆಗೊಳ್ಳಲಿದ್ದು, ನಂತರ ನೂತನ ಆಡಳಿತ ಮಂಡಲಿ ಘಟನೆಯಾಗಲಿದೆ.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

3 comments

Alphonse Mendonsa
Alphonse Mendonsa August 21, 2023 - 1:34 pm

Congratulations dear Anil on your re election as Chairman of the MCC Bank. Last five years has shown immense growth under your leadership. Wishing you all success to you and your efficient Team. In the coming five years… Once again congratulations🎉🎉🎉🎉

Reply
Avatar
Clive D'Souza August 21, 2023 - 2:11 pm

Congratulations Mr.Anil Lobo and team

Reply
Avatar
EUGENE LOBO August 21, 2023 - 4:24 pm

Congratulations the team 👏👏👏👍👍👍

Reply

Leave a Comment

© All Right Reserved. Kittall Publications. Editor : H M Pernal