2009 ರಲ್ಲಿ ಸಂತ ಮದರ್ ತೆರೇಸಾರವರ ಜನ್ಮದಿನದಂದು ನಿರಾಶ್ರಿತ ಮಾನಸಿಕ ಅಸ್ವಸ್ಥರ ಸೇವೆಗಾಗಿ ಪ್ರಾರಂಭಗೊಂಡ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ತನ್ನ 14 ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಸಮಾಜಕ್ಕೆ ಸಂಸ್ಥೆಯ ಅತ್ಯುತ್ತಮ ಕೊಡುಗೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ಜೊತೆಗೆ ಅನುಕಂಪ, ದಯೆ ಮತ್ತು ಸಹಾನುಭೂತಿಯ ತತ್ವಗಳ ಮೇಲೆ ಸ್ಥಾಪಿತವಾದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಬಡವರು ಮತ್ತು ನಿರ್ಗತಿಕರಿಗೆ ಭರವಸೆಯ ದಾರಿದೀಪವಾಗಿ ಹೊರಹೊಮ್ಮಿದೆ, ಕಳೆದ 14 ವರ್ಷಗಳಲ್ಲಿ ಅಸಂಖ್ಯಾತ ನೊಂದವರ ಜೀವನವನ್ನು ಬೆಳಗಿಸಿದೆ.
ಈ ಸಂಧರ್ಭದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಸಂತ ದೇವಸಹಾಯ ಪಿಳ್ಳೈ ಅವರ ಗ್ರೊಟ್ಟೊವನ್ನು ವರ್ಕಾಡಿ ದೇವಾಲಯದ ಪ್ರಧಾನ ಗುರುಗಳಾದ ವಂದನೀಯ ಫಾ। ಬಾಸಿಲ್ ವಾಸ್ ರವರು ತಮ್ಮ ಪುಣ್ಯ ಕರಗಳಿಂದ ಆಶೀರ್ವದಿಸಿ ಉದ್ಗಾಟಿಸಿದರು. ಈ ಸಂಧರ್ಬದಲ್ಲಿ ಸಮುದಾಯದ ಪ್ರಮುಖ ಮುಖಂಡರು, ಧರ್ಮಗುರುಗಳು, ಸಹೋದರ-ಸಹೋದರಿಯರು, ದಾನಿಗಳು ಹಾಗೂ ಸ್ನೇಹಾಲಯದ ಸಂಸ್ಥಾಪಕರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.
ಅನಂತರ, ಕಳೆದ 14 ವರ್ಷಗಳಿಂದ ದೇವರು ಸುರಿಸಿದ ಕೃಪೆ ಮತ್ತು ಅನುಗ್ರಹಗಳಿಗಾಗಿ ಧನ್ಯವಾದಗಳನು ಅರ್ಪಿಸುತ್ತಾ ದಿವ್ಯ ಬಲಿ ಪೂಜೆಯನ್ನು ಅರ್ಪಿಸಲಾಯಿತು. ಬಲಿಪೂಜೆಯ ಮುಖ್ಯ ಅರ್ಚಕರಾಗಿ ವಂದನೀಯ ಗುರುಗಳಾದ ಫಾ। ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಒಸಿಡಿ ಹಾಗೂ ಫಾ। ಬಾಸಿಲ್ ವಾಸ್, ಫಾ। ಎಡ್ವಿನ್ ಪಿಂಟೊ ಮತ್ತು ಫಾ। ಸಿರಿಲ್ ಡಿ ಸೋಜಾ ರವರು ಸಹ ಅರ್ಚಕರಾಗಿ ಬಲಿಪೂಜೆಯಲ್ಲಿ ಭಾಗವಹಿಸಿದರು.
ಪೂಜೆಯ ನಂತರ, ಸ್ನೇಹಾಲಯದ ಸಂಸ್ಥಾಪಕರಾದ ಬ್ರ ಜೋಸೆಫ್ ಕ್ರಾಸ್ತಾ ಅವರು ಕೃತಜ್ಞತೆಯ ಸ್ಪರ್ಶವನ್ನು ವ್ಯಕ್ತಪಡಿಸಿದರು. ಈ ಸಂಸ್ಥೆಯ 14 ವರ್ಷಗಳ ಪಯಣವನ್ನು ಸುಗಮ ರೀತಿಯಲ್ಲಿ ಸಂಚಾಲನೆ ಮಾಡಿದ ಕಾರಣಕರ್ತ ದೇವರನ್ನು ಹಾಗೂ ಎಲ್ಲಾ ಹಿತೈಷಿ ಮಿತ್ರರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಅನಂತರ ಗೌರವಾನ್ವಿತ ಗುರುಗಳಿಗೆ ಸ್ಮರಣಿಕೆಗಳು ಮತ್ತು ಹೂಗುಚ್ಛಗಳನ್ನು ನೀಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಶೋಭೆಯಾಗಿ ಅವರು ಈ ವರ್ಷದ ಅತ್ಯುತ್ತಮ ಸಿಬ್ಬಂದಿ ಎಂದು ಗುರುತಿಸಲ್ಪಟ್ಟಿರುವ ಶ್ರೀ. ಮಾರ್ಕೊ ಸ್ಟಾನ್ಲಿ ಫೆರ್ನಾಂಡಿಸ್ ಅವರ ಅತ್ಯುತ್ತಮ ಪ್ರಯತ್ನಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಕೊನೆಗೆ ಈ ಕಾರ್ಯಕ್ರಮವು ಒಂದು ಸಹಭೋಜನದೊಂದಿಗೆ ಮುಕ್ತಾಯವಾಯಿತು.
1 comment
Excellent performance