ಪವಾಡ ಪುರುಷ ಪಾದುವಾದ ಸಂತ ಅಂತೋನಿಯವರ ವಾರ್ಷಿಕ ಹಬ್ಬವನ್ನು ಗುರುವಾರ, ಜೂನ್ 13, 2024 ರಂದು ಸಂತ ಅಂತೋನಿ ಆಶ್ರಮದಲ್ಲಿ ಬೆಳಿಗ್ಗೆ ಮತ್ತು ಸಂಜೆ ಮಂಗಳೂರಿನ ಸಂತ ಆಂತೋಣಿ ಪುಣ್ಯಕ್ಷೇತ್ರ, ಮಿಲಾಗ್ರಿಸ್ ಚರ್ಚ್ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧೀಕ್ಷರಾದ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಅವರು ಮಹೋತ್ಸವದ ಬಲಿಪೂಜೆಯನ್ನು ಆಚರಿಸಿದರು. ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಂತ ಆಂತೋಣಿ ಪುಣ್ಯಕ್ಷೇತ್ರ, ಮಿಲಾಗ್ರಿಸ್ ಚರ್ಚ್ನಲಿ ಸಂಜೆ 6 ಗಂಟೆಗೆ ಸಂಭ್ರಮದ ಬಲಿಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹಬ್ಬದ ಸಂದೇಶ ಪ್ರಭು, ನಮಗೆ ಪ್ರಾರ್ಥಿಸಲು ಕಲಿಸಿರಿ ಎಂಬುವುದರ ಮೇಲೆ ಧ್ಯಾನಿಸಲಾಯಿತು.
ಬಿಷಪ್ ಫ್ರಾನ್ಸಿಸ್ ಅವರು ಆಳವಾದ ನಂಬಿಕೆ ಮತ್ತು ಭರವಸೆಯೊಂದಿಗೆ ಪ್ರಾರ್ಥನೆ ಮಾಡುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ಪ್ರಾರ್ಥನೆಯ ವ್ಯಕ್ತಿಯಾಗಲು ಸಭೆಯನ್ನು ಒತ್ತಾಯಿಸಿದರು. “ನಾವು ಕೇವಲ ವಸ್ತುಗಳನ್ನು ಪಡೆಯಲು ಪ್ರಾರ್ಥಿಸುವುದಿಲ್ಲ ಆದರೆ ಪ್ರಾರ್ಥನೆಯ ವ್ಯಕ್ತಿಗಳಾಗಲು” ಎಂದು ಅವರು ಹೇಳಿದರು.
ಸಾವಿರಾರು ಭಕ್ತರು ಮಹೋತ್ಸವದಲ್ಲಿ ಮತ್ತು ಮಧ್ಯಹ್ನದ ಸಹಭೋಜನದಲ್ಲಿ ಸಂತೋಷದಿಂದ ಪಾಲ್ಗೊಂಡರು.
ಬಿಷಪ್ ಫ್ರಾನ್ಸಿಸ್ ಸೆರಾವೊ ಅವರು ಶಿವಮೊಗ್ಗದ ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದ ದಶಮಾನೋತ್ಸವದ ವಾರ್ಷಿಕೋತ್ಸವದ ಪ್ರಯುಕ್ತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಜೆಯ ಮಹಾ ಬಲಿಪೂಜೆಯಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪ್ರಾರ್ಥನೆಯ ವ್ಯಕ್ತಿಯಾದ ಯೇಸುವು ಎಲ್ಲರಿಗೂ ಅನುಸರಿಸಲು ಒಂದು ಆದರ್ಶ ಎಂದು ಒತ್ತಿ ಹೇಳಿದರು. ಪಾದುವಾದ ಸಂತ ಅಂತೋನಿ ದೇವರ ವಾಕ್ಯದ ಮೂಲಕ ಪ್ರಾರ್ಥನೆಯ ಮಹತ್ವವನ್ನು ಕಲಿಸಿದವರು ಎಂದು ಸಭೆಗೆ ನೆನಪಿಸಿದರು. “ಬೈಬಲ್ ಗೃಂಥದಲ್ಲಿ ಅನೇಕ ಪ್ರಾರ್ಥನೆಗಳು ಒಳಗೊಂಡಿವೆ, ಮತ್ತು ನಾವು ಏನನ್ನು ಪ್ರಾರ್ಥಿಸಬೇಕು ಎಂದು ನಮಗೆ ತಿಳಿಯಾದಾಗ ನಮ್ಮಲ್ಲಿರುವ ಪವಿತ್ರ ಆತ್ಮವು ನಮ್ಮ ದೌರ್ಬಲ್ಯಗಳಲ್ಲಿ ನಮಗೆ ಪ್ರಾರ್ಥಿಸಲು ಸಹಾಯ ಮಾಡುತ್ತದೆ. ” ಎಂದು ಬಿಷಪ್ ಹೇಳಿದರು.
ಜೆಪ್ಪು ಆಶ್ರಮದಲ್ಲಿ ಬೆಳಿಗ್ಗೆ 6 ಗಂಟೆಗೆ ವಿಕಾರ್ ಜನರಲ್ ಆತೀ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ಅವರು ಪವಿತ್ರ ಬಲಿಪೂಜೆಯನ್ನು ಆರ್ಪಿಸಿದರು. ವಂ. ಫಾ. ವಾಲ್ಟರ್ ಡಿಸೋಜ, ಬೆಂದೂರು ಧರ್ಮಗುರುಗಳು, ಮಿಲಾಗ್ರ್ರಿಸ್ ಚರ್ಚ್ನಲ್ಲಿ ಬೆಳಗ್ಗೆ 8.15 ಕ್ಕೆ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಮಿಲಾಗ್ರಿಸ್ ಚರ್ಚಿನಲ್ಲಿ 4.30 ಕ್ಕೆ ಮಲಯಾಳಂ ಭಾಷೆಯಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಕಣ್ಣೂರು ಧರ್ಮಪ್ರಾಂತ್ಯದ ಸಂವಹನ ಕೇಂದ್ರದ ನಿರ್ದೇಶಕ ರೆ.ಫಾ.ವಿಪಿನ್ ವಿಲಿಯಂ ಅವರು ಮಲಯಾಳಂ ಪೂಜೆಯನ್ನು ಆರ್ಪಿಸಿದರು.
■ ವರದಿ / ಚಿತ್ರ : ಕೆನರಾ ಸಂವಹನ ಕೇಂದ್ರ