ಪಾಂಡೇಶ್ವರದಲ್ಲಿರುವ ಮಂಗಳೂರು ಪ್ರಧಾನ ಅಂಚೆ ಕಚೇರಿ ಕಳೆದ 2023-24ನೇ ಆರ್ಥಿಕ ವರ್ಷದಲ್ಲಿ ಗ್ರಾಹಕ ವ್ಯವಹಾರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದು ನಾಲ್ಕು ಪ್ರಶಸ್ತಿಗಳನ್ನು ವಿಭಾಗೀಯ ಮಟ್ಟದಲ್ಲಿ ಪಡೆದಿದ್ದು ಅದನ್ನು ನಿನ್ನೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕರ್ನಾಟಕ ವಲಯದ ಅಂಚೆ ಸೇವೆಗಳ ನಿರ್ದೇಶಕರಾದ ಶ್ರೀ ಸಂದೇಶ ಮಹದೇವಪ್ಪ ಅವರು ನೀಡಿದರು. ಅಂಚೆ ಉಳಿತಾಯ ಖಾತೆಗಳನ್ನು ತೆರೆಯುವುದರಲ್ಲಿ, ಮಹಿಳಾ ಸಮ್ಮಾನ್ ಉಳಿತಾಯ ಖಾತೆಗಳನ್ನು ತೆರೆಯುವುದರಲ್ಲಿ, ಸಾವೇರಿನ್ ಗೋಲ್ಡ್ ಬಾಂಡ್ ವ್ಯವಹಾರದಲ್ಲಿ ಮತ್ತು ಆಧಾರ್ ಸೇವೆಯಲ್ಲಿ ಪ್ರಧಾನ ಅಂಚೆ ಕಚೇರಿಗೆ ಪ್ರಶಸ್ತಿಗಳು ಬಂದಿವೆ.
ಕಾರ್ಯಕ್ರಮದಲ್ಲಿ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀ ಸುಧಾಕರ್ ಮಲ್ಯ ಮತ್ತು ಉಪ ಅಧೀಕ್ಷಕ ಶ್ರೀ ದಿನೇಶ್. ಪಿ ಮತ್ತು ಇತರ ಅಧಿಕಾರಿಗಳು, ಮಂಗಳೂರು ಅಂಚೆ ವಿಭಾಗದ ಸಿಬಂಧಿಗಳು ಉಪಸ್ಥಿತರಿದ್ದರು.
ಮಂಗಳೂರು ಪ್ರಧಾನ ಅಂಚೆ ಕಚೇರಿಯು ಈ ಪ್ರಶಸ್ತಿಯನ್ನು ಪಡೆಯಲು ಕಾರಣರಾದ ಎಲ್ಲಾ ಅಂಚೆ ಗ್ರಾಹಕರಿಗೆ ಮತ್ತು ಅತ್ಯುತ್ತಮ ವ್ಯವಹಾರ ಮಾಡಿದ ಅಂಚೆ ಸಿಬಂಧಿಯವರಿಗೆ ಮಂಗಳೂರು ಪ್ರಧಾನ ಅಂಚೆ ಕಚೇರಿಯ ವರಿಷ್ಠ ಅಂಚೆ ಪಾಲಕರಾದ ಶ್ರೀ ಶ್ರೀನಾಥ್ ಬಸ್ರೂರು ಅವರು ಧನ್ಯವಾದ ಸಲ್ಲಿಸಿದರು.