ಸ್ನೇಹಾಲಯ : ಹತ್ತು ವರ್ಷಗಳ ನಂತರ ಹೆತ್ತವರನ್ನು ಹುಡುಕಿಕೊಟ್ಟ ‘ಆದಾರ್’

ತ್ತು ವರ್ಷದ ಹಿಂದೆ ಕಾಣೆಯಾಗಿದ್ದ ಪ್ರವೀಣ್ ಪುನಃ ಹೆತ್ತವರ ಮಡಿಲು ಸೇರಿದ ಘಟನೆ ಸ್ನೇಹಾಲಯದಲ್ಲಿ ನಡೆಯಿತು.07.09.2018 ಮಂಗಳೂರಿನ ಅತ್ತಾವರದ ಕೆ.ಮ್.ಸಿ ಆಸ್ಪತ್ರೆಯ ಬಳಿಯಿಂದ ಸ್ನೇಹಾಲಯದ ಸಹೋದರ ಜೋಸೆಫ್ ಕ್ರಾಸ್ತಾರಾವರು ಪ್ರವೀಣನನ್ನು ರಕ್ಷಿಸಿ ಸ್ನೇಹಾಲಯಕ್ಕೆ ದಾಖಲಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಆತ ಸ್ನೇಹಾಲಯದಲ್ಲಿ ಎಲ್ಲರ ಪ್ರೀತಿಪಾತ್ರನಾಗಿದ್ದ, ಆತನ ನಿಜ ಹೆಸರು ತಿಳಿಯದ ಕಾರಣ ಆತನಿಗೆ ಪ್ರೀತಿಯಿಂದ ‘ಧೂಮ’ಎಂಬ ಹೆಸರನ್ನು ಇಡಲಾಗಿತ್ತು. ಇನ್ನೊಂದೆಡೆ ಆತನ ಕುಟುಂಬ ಆತನನ್ನು ಹುಡುಕಾಡದ ಸ್ಥಳಗಳಿಲ್ಲ. ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು ಯಾವುದೇ ಫಲ ಸಿಗಲಿಲ್ಲ.ಈ ನಡುವೆ ಆತನನ್ನು ಹುಡುಕಾಡಲು ಕುಟುಂಬ ಪಟ್ಟ ಪ್ರಯತ್ನ ಒಂದೆರಡಲ್ಲ.

 ವಿಳಾಸ ಪತ್ತೆಹಚ್ಚಲು ಸಹಕರಿಸಿದ ಆಧಾರ್ ಕಾರ್ಡ್: 

ಸಾಮಾನ್ಯವಾಗಿ ಆಧಾರ್ ಕಾರ್ಡ್ ಮಾಡುವಾಗ ಬಯೊಮೆಟ್ರಿಕ್ ತಂತ್ರಜ್ಞಾನವನ್ನು ಉಪಯೋಗಿಸಿ ವ್ಯಕ್ತಿಯ ಮಾಹಿತಿಯನ್ನು ಶೇಖರಿಸಿಡುವುದು ಎಲ್ಲರಿಗೆ ತಿಳಿದ ಸಂಗತಿ.ಆದರೆ ಇದೇ ತಂತ್ರಜ್ಞಾನ ಒರ್ವ ವ್ಯಕ್ತಿಯನ್ನು ಇಷ್ಟು ವರ್ಷದ ಬಳಿಕ ಕುಟುಂಬ ಸೇರಿಸುವುದು ಪ್ರಶಂಸನೀಯ. ಸ್ನೇಹಾಲಯ ಮತ್ತು ಮಂಗಳೂರಿನ ಆಧಾರ್ ಸೇವಾ ಕೇಂದ್ರದ ಜಂಟಿ ಸಹಯೋಗದಲ್ಲಿ ಸ್ನೇಹಾಲಯದ ನಿವಾಸಿಗಳಿಗೆ ಆಧಾರ್ ಶಿಬಿರವನ್ನು ಏರ್ಪಡಿಸಲಾಗಿತ್ತು, ಮತ್ತು ಇದರ ಫಲವಾಗಿ ಸುಮಾರು 36 ನಿವಾಸಿಗಳ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು.ಪ್ರವೀಣನ ವಿಳಾಸ ಸಿಕ್ಕಿದ ತಕ್ಷಣ ಸ್ನೇಹಾಲಯದ ಸಮಾಜ ಕಾರ್ಯ ವಿಭಾಗದ ಸಿಬ್ಬಂಧಿಗಳು ಆತನ ಕುಟುಂಬವನ್ನು ಸಂಪರ್ಕಿಸಿ ಈ ಸುದ್ದಿಯನ್ನು ತಿಳಿಸಿದರು.

ದಿನಾಂಕ 20.7.2024 ಆತನ ಕುಟುಂಬಿಕರು ಮಂಜೇಶ್ವರದ ಸ್ನೇಹಾಲಯಕ್ಕೆ ಆಗಮಿಸಿದರು.ಸಹೋದರ ಜೋಸೆಫ್ ಕ್ರಾಸ್ತಾ ಮತ್ತು ಸ್ನೇಹಾಲಯ ಸಿಬ್ಬಂದಿಗಳ ಸಮ್ಮುಖದಲ್ಲಿ ಪುನರ್ಮಿಲನ ಕಾರ್ಯ ನಡೆಯಿತು.ಆತನ ತಮ್ಮ ಮತ್ತು ತಂದೆ ನೀಡಿದ ಹೇಳಿಕೆಯ ಪ್ರಕಾರ ಆತ ಕಳೆದ ಹತ್ತು ವರ್ಷದಿಂದ ನಾಪತ್ತೆಯಾಗಿದ್ದ ಕೆಲಸಕ್ಕೆಂದ ತೆರಳಿದಾಗ ಆತ ಹೇಳದೆ ನಾಪತ್ತೆಯಾಗಿದ್ದ ಈ ದುಃಖದಲ್ಲಿದ್ದ ಆತನ ತಾಯಿ ಮೂರು ವರ್ಷಗಳ ಹಿಂದೆ ಸ್ವರ್ಗಸ್ಥರಾಗಿದ್ದರು.

ಈ ಕಾರ್ಯಕ್ಕೆ ಸಹಕರಿದ ಸ್ನೇಹಾಲಯ ಸಂಸ್ಥೆಗೆ ಕುಟುಂಬಿಕರು ತುಂಬು ಹೃದಯ ಕೃತಜ್ನತೆಗಳನ್ನು ಸಲ್ಲಿಸಿದರು.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. Editor : H M Pernal