ಸ್ನೇಹಾಲಯ ಪುನರ್ವಸತಿ ಕೇಂದ್ರ – ಹದಿನಾರನೇ ವರ್ಷಕ್ಕೆ ಪಾದಾರ್ಪಣೆ

ಮಂಜೇಶ್ವರದ ಪಾವೂರಿನಲ್ಲಿರುವ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವು ದಿನಾಂಕ 26.08.2024 ರಂದು ತನ್ನ ನಿಸ್ವಾರ್ಥ ಸೇವೆಯ ಹದಿನೈದನೇ ವರ್ಷಗಳನ್ನು ಕಳೆದು ಹದಿನಾರನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಈ ಐತಿಹಾಸಿಕ ಕ್ಷಣದಲ್ಲಿ ಸ್ನೇಹಾಲಯದ ಸ್ಪೂರ್ತಿಯಾದ ಸಂತ ಮದರ್ ತೆರೆಸಾರವರ ಗ್ರೊಟ್ಟೊ ಇದರ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯ ಅಂತೆಯೇ ಸಾಂಭ್ರಮಿಕ ಬಲಿಪೂಜೆಯನ್ನು, ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಅತಿ ವಂದನೀಯ ಸ್ವಾಮಿ ಅಲೋಶಿಯಸ್ ಪಾವ್ಲ್ ಡಿ ಸೋಜಾರವರು ನೆರವೇರಿಸಿದರು.

ತದನಂತರ ಗಂಟೆ 11:30 ಕ್ಕೆ ಸ್ನೇಹಾಲಯದ ಸಭಾಂಗಣದಲ್ಲಿ ಪುಟ್ಟ ಸಭಾಕಾರ್ಯಕ್ರಮವು ನಡೆಯಿತು ಈ ಕಾರ್ಯದ ಮುಖ್ಯ ಅತಿಥಿಯಾಗಿ ಅತೀ ವಂದನೀಯ ಸ್ವಾಮಿ ಅಲೋಶಿಯಸ್ ಪಾವ್ಲ್ ಡಿ ಸೋಜಾ ಅಂತೆಯೇ ಗೌರವ ಅತಿಥಿಗಳಾಗಿ ಶ್ರೀ ಸ್ಟೀಫನ್ ಪಿಂಟೋ, ಎಡ್ಯುಕೇರ್ ಸಂಯೋಜಕರು,ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ರವಿ ನಾಯ್ಕಾಪು, ಸಮಾಜ ಕಾರ್ಯಕರ್ತ ಮತ್ತು ಸಂಗೀತ ಸಂಯೋಜಕರಾದ ಶ್ರೀ ಓಸ್ವಾಲ್ಡ್ ಡಿಸೋಜಾ ಸಂಪಿಗೆ, ಡಿಎಎಂ ಆಯುರ್ವೇದ ರತ್ನ ಡಾ.ಮಹಮ್ಮದ್ ಶಾಲಿಮಾರ್,ಶ್ರೀ ಕ್ಷೇತ್ರ ಅರಸು ಮಂಜಿಷ್ಣರ ಉದ್ಯಾವರ, ಮಾಡ ಇದರ ಮುಖ್ಯಸ್ಥರಾದ ಶ್ರೀ ರಾಜಾ ಬೆಳ್ಚಡ, ಶ್ರೀ ಸ್ಟ್ಯಾನಿ ಬೇಳಾ, ಪ್ರೊಡಕ್ಷನ್ ಡೈರೆಕ್ಟರ್, ಡೈಜಿವರ್ಲ್ಡ್ ಟಿವಿ, ಶ್ರೀ ಅಲ್ವಿನ್ ಡಿಸೋಜಾ, ಅಧ್ಯಕ್ಷರು, ಕೆಥೋಲಿಕ್ ಸಭಾ, ಮಂಗಳೂರು ಧರ್ಮಪ್ರಾಂತ್ಯ, ಮಂಜೇಶ್ವರ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ವಾಮಿ ಎಡ್ವಿನ್ ಪಿಂಟೋ, ಸ್ನೇಹಾಲದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಸ್ವಾಮಿ ಸಿರಿಲ್ ಡಿಸೋಜಾರವರು ಉಪಸ್ಥಿತರಿದ್ದು ಪ್ರತಿಯೊಬ್ಬ ಗಣ್ಯ ಅಥಿತಿಯರು ತಮ್ಮ ಹಿತ ನುಡಿಗಳಿಂದ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಂದನೀಯ ಸ್ವಾಮಿ ಅಲೋಶಿಯಸ್ ಪಾವ್ಲ್ ಡಿಸೋಜಾರವರು ಸ್ನೇಹಾಲಯಕ್ಕೆ ನೀಡಿದ ಸಹಾಯವನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು ಅಂತೆಯೇ ಶ್ರೀ ರವಿ ನಾಯ್ಕಾಪು ಮತ್ತು ಮದರ್ ತೆರೆಸಾರವರ ಗ್ರೊಟ್ಟೊ ಇದರ ದಾನಿಗಳನ್ನು ಸನ್ಮಾನಿಸಲಾಯಿತು.

ಸ್ನೇಹಾಲಯ ವ್ಯಸನ ಮುಕ್ತಿ ಕೇಂದ್ರದ ಧನ ಸಹಾಯಕ್ಕಾಗಿ ಏರ್ಪಡಿಸಿದ ಲಕ್ಕಿಡಿಪ್ ಇದರ ‘ಡ್ರಾ’ ಈ ಸಂಧರ್ಬದಲ್ಲಿ ನಡೆಯಿತು. ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾ ಸ್ವಾಗತದ ಸವಿನುಡಿಗಳನ್ನಾಡಿದರು ಅಂತೆಯೇ ಶ್ರೀಮತಿ ಒಲಿವಿಯಾ ಕ್ರಾಸ್ತಾರವರು ಧನ್ಯವಾದ ಸಮರ್ಪಣೆ ನೆರವೇರಿಸಿದರು.

ಶ್ರೀ ಜಿಯೋ ಅಗ್ರಾರ್ ಮತ್ತು ವಿಯೊಲಾ ಇವರು ಕಾರ್ಯಕ್ರಮದ ನಿರೋಪಣೆಯನ್ನು ಮಾಡಿದರು. ಸ್ನೇಹಾಲಯದ ಹದಿನೈದನೆ ವರ್ಷದ ಈ ಸಂಭ್ರಮಾಚರಣೆಯು ಸಹಭೋಜನದೊಂದಿಗೆ ಮುಕ್ತಾಯಗೊಂಡಿತು.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. Editor : H M Pernal